Headlines

ಬೊಲೊರೊ ವಾಹನದಲ್ಲಿ ಗ್ಯಾಂಗ್​​ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?

ಬೊಲೊರೊ ವಾಹನದಲ್ಲಿ ಗ್ಯಾಂಗ್​​ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?


ಬೊಲೊರೊ ವಾಹನದಲ್ಲಿ ಗ್ಯಾಂಗ್ ಅನುಮಾನಾಸ್ಪದ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್?

ಬೆಂಗಳೂರು, ಏಪ್ರಿಲ್ 02: ನಗರದ ಬನಶಂಕರಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೊಲೆರೊ ವಾಹನದಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಆಶೀರ್ವಾದ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಗ್ಯಾಂಗ್ ಕರೆಯುತ್ತಿದೆ ಎಂದು ದೂರಲಾಗಿದೆ. ರಸ್ತೆಯಲ್ಲಿ ತೆರಳುತ್ತಿರುವ ಬೊಲೆರೋ ವಾಹನ ಮನೆಯೊಂದರ ಗೇಟ್ ಬಳಿ ಶಾಲಾ ಬಾಲಕಿ ಕಾಣದಂತೆ ನಿಂತಿದೆ. ಬಳಿಕ ಹಿಮ್ಮುಖವಾಗಿ ಹೋಗಿ ಬಾಲಕಿ ಬಳಿ ವಾಹನದಲ್ಲಿದ್ದವರು ಮಾತನಾಡಿದ್ದಾರೆ. ಈ ವೇಳೆ ಆಕೆ ಮನೆಯವರನ್ನು ಕರೆದಿದ್ದು, ಅವರು ವಿಚಾರಿಸುತ್ತಿದ್ದಂತೆ ವಾಹನ ಸಮೇತ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ. ವೈರಲ್ ವಿಡಿಯೋ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ, ಈ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *