ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?

ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?


ಪತಿ ಬಿಟ್ಟರೆ ಗತಿ ಇಲ್ಲದಂತಾಯತೆ ಸಮಂತಾಗೆ? ಮುಂದೇನು?

ಸಮಂತಾ (ಸಮಂತಾ) ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಇರಲಿದ್ದಾರೆ ಸಿನಿಮಾ ಪ್ರಿಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನುತ್ತಿದ್ದಾರೆ. ಹೀಗಾಗಲು ಕಾರಣವೇನು?

2019ರ ವರೆಗೆ ಸಮಂತಾ ಬಹಳ ಎಂದರೆ ಬಹಳ ಬ್ಯೂಸಿ ನಟಿ ಆಗಿದ್ದರು. ತಮಿಳು, ತೆಲುಗಿನ ಸ್ಟಾರ್ ನಟರುಗಳಿಗೆ ಸಹ ಸಮಂತಾ ನಾಯಕಿಯಾಗಿ ಬೇಕಾಗಿತ್ತು. ಕೆಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಏಕಾಂಗಿಯಾಗಿ ಸಿನಿಮಾಗಳನ್ನು ಗೆಲ್ಲಿಸಿದ್ದರು. ಆದರೆ ಕೋವಿಡ್ ಬಳಿಕ ಎಲ್ಲವೂ ಉಲ್ಟಾ ಆಯ್ತು. ಕೋವಿಡ್ ಬಳಿಕ ಸಮಂತಾ ಹಾಗೂ ನಾಗ ಚೈತನ್ಯ ಜೊತೆಗೆ ವಿಚ್ಛೇದನವಾಯ್ತು. ಆರಂಭದಲ್ಲಿ ನೆಟ್ಟಿಗರು ಸಮಂತಾಗೆ ವಿರುದ್ಧವಾದರೂ, ಬಳಿಕ ಸಮಂತಾ ಪರ ಅಭಿಪ್ರಾಯ ಸೃಷ್ಟಿಯಾಯ್ತು.

ಆದರೆ ಸಮಂತಾಗೆ ಅನಾರೋಗ್ಯ ಕಾಡಲು ಶುರುವಾದ ಬಳಿಕ ಸಮಂತಾಗೆ ನಿಧಾನಕ್ಕೆ ಅವಕಾಶಗಳು ಕಡಿಮೆ ಆಗುತ್ತಾ ಬಂದವು. ಅನಾರೋಗ್ಯದಿಂದ ಸಮಂತಾ ಒಪ್ಪಿಕೊಂಡಿದ್ದ ಸಿನಿಮಾ ಮತ್ತು ಸರಣಿಗಳನ್ನು ಮುಗಿಸಲು ಬಹಳ ಸಮಯ ತೆಗೆದುಕೊಂಡರು. ಅನಾರೋಗ್ಯದಿಂದ ರಿಕವರಿ ಹೊಂದಿದ ಬಳಿಕ ಸಹ ಸಮಂತಾಗೆ ಅವಕಾಶಗಳು ಸಿಗುವುದು ಕಡಿಮೆ ಆದವು. ಇದಕ್ಕೆ ಸಮಾಂತರ ಅತಿಯಾದ ‘ಸ್ವಕಾಳಜಿ’ ಇತರೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ಶಿವಮೊಗ್ಗ ಸಮೀಪದ ಹಳ್ಳಿಯೊಂದರಲ್ಲಿ ನಟಿ ಸಮಂತಾ ಶೂಟಿಂಗ್: ವಿಡಿಯೋ

ಅನಾರೋಗ್ಯದಿಂದ ಮರಳಿದ ಬಳಿಕ ಸಮಂತಾ ಕೆಲಸದ ವಿಷಯದಲ್ಲಿ ಕಟ್ಟುನಿಟ್ಟಾದ ಮಗಳನ್ನು ಹೇರಲು ಆರಂಭಿಸಿದರಂತೆ. ಜೊತೆಗೆ ಸೆಟ್ ನಲ್ಲಿ ಜಿಮ್, ಡಯಟೀಶಿಯನ್, ಪ್ರತ್ಯೇಕ ಫ್ಯಾಷನ್ ಡಿಸೈನರ್ ಇತ್ಯಾದಿಗಳಿಗೆ ಬೇಡಿಕೆ ಮತ್ತು ಚೀತ್ರೀಕರಣ ಸ್ಥಳ ಮತ್ತು ಸಮಯದ ಬಗ್ಗೆ ನಿಬಂಧನೆಗಳನ್ನು ಹಾಕಲು ಪ್ರಾರಂಭಿಸಿ. ಇದೇ ಕಾರಣಕ್ಕೆ ಹಲವು ನಿರ್ದೇಶಕರು ಸಮಂತಾ ಜೊತೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಪುಕಾರು ತೆಲುಗು ಚಿತ್ರರಂಗದಲ್ಲಿ ಇದೆ.

2024 ರಲ್ಲಿ ಸಮಾಂತರ ಯಾವ ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಕಳೆದ ವರ್ಷ ಅಂದರೆ 2025ರಲ್ಲಿ ಸಮಂತಾ ‘ಶುಭಂ’ ಹೆಸರಿನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು, ಈ ಸಿನಿಮಾಕ್ಕೆ ಸಮಂತಾ ಅವರೇ ಬಂಡವಾಳ ಹೂಡಿದ್ದರು. ಪ್ರಸ್ತುತ ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರ ಹಾಲಿ ಪತಿ ರಾಜ್ ನಿಧಿಮೋರು ನಿರ್ಮಾಪಕ. ಇದಾದ ಬಳಿಕ ಒಂದು ಹಿಂದಿ ವೆಬ್ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ, ಅದಕ್ಕೂ ಸಹ ರಾಜ್ ನಿಧಿಮೋರು ಅವರೇ ನಿರ್ಮಾಪಕ. ಪತಿಯ ಸಿನಿಮಾ ಮತ್ತು ವೆಬ್ ಸರಣಿಯ ಹೊರತಾಗಿ ಸಮಂತಾ ಕೈಯಲ್ಲಿ ಯಾವುದೇ ಸಿನಿಮಾ ಈಗ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *