Actress Padmaja Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಿಂದ ಜನರ ಮನಸ್ಸು ಗೆದ್ದಿರುವ ನಟಿ ಪದ್ಮಜಾ ರಾವ್ ಅವರು ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೊದಲ ಮದುವೆ ಯಾಕೆ ಮುರಿಯಿತು?

ನಟಿ ಪದ್ಮಜಾ ರಾವ್ ಅವರು ಎರಡನೇ ಮದುವೆ ಆಗಿದ್ದಾರೆ, ಮೊದಲ ಮದುವೆ ಯಾಕೆ ಮುರಿಯಿತು? ಮಗ ಹುಟ್ಟಿದ್ದರ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

“ನನಗೆ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎನ್ನುವ ಆಸೆ ಇತ್ತು. ಇದಕ್ಕೆ ನನ್ನ ತಾಯಿ ಒಪ್ಪುತ್ತಿರಲಿಲ್ಲ. ಹೀಗಾಗಿ ನಾನು ಮದುವೆಯಾದ್ರೆ ನಟಿಯಾಗಬಹುದು ಎಂದುಕೊಂಡೆ. ಮದುವೆಯಾದರೆ ಗಂಡನನ್ನು ಕಿರುಬೆರಳಿನಲ್ಲಿ ಆಟ ಆಡಸ್ತೀನಿ, ಏನು ಬೇಕಿದ್ರೂ ಮಾಡಬಹುದು ಎಂದುಕೊಂಡಿದ್ದೆ. ಆದರೆ ಮೊದಲ ಮದುವೆ ಮುರಿದು ಬಿತ್ತು. ಈ ಬಗ್ಗೆ ಪಶ್ಚಾತ್ತಾಪ ಇಲ್ಲ. ಆ ಮದುವೆಯಿಂದ ನನ್ನ ಮಗ ಸಿಕ್ಕಿದ ಎನ್ನುತ್ತಾರೆ ಪದ್ಮಜಾ ರಾವ್.

ನನ್ನ ಮದುವೆಯಿಂದ ಕನಸುಗಳು ಈಡೇರುತ್ತಿಲ್ಲ ಎಂದು ಅರ್ಥ ಆಯ್ತೋ, ಆಗ ಅಲ್ಲಿಂದ ಹೊರಬಂದೆ. ಅಲ್ಲಿಂದ ನಟಿಯಾಗಬೇಕು ಎಂದು ತಯಾರಿ ಮಾಡಿಕೊಂಡೆ. ಮೊದಲ ಮದುವೆ ನೋವನ್ನು ಹೀಲ್ ಮಾಡಿಕೊಂಡಿದ್ದೇನೆ ಎಂದು ಪದ್ಮಜಾ ರಾವ್ ಹೇಳಿದ್ದಾರೆ.

ಮಗನ ಮುಖ ನೋಡಿದಾಗೆಲ್ಲ ನನ್ನೆಲ್ಲ ನೋವುಗಳು ಮರೆತು ಹೋಗುತ್ತವೆ. ಅವನು ನನಗೆ ಮ್ಯಾಜಿಷಿಯನ್, ಡಾಕ್ಟರ್ ಕೂಡ ಹೌದು. ನನ್ನ ನೋವುಗಳನ್ನು ಮರೆಸುವ ಶಕ್ತಿ ನನ್ನ ಮಗನಿಗೆ ಇದೆ ಎನ್ನುತ್ತಾರೆ ಪದ್ಮಜಾ ರಾವ್

ನನ್ನ ಡಿವೋರ್ಸ್ ಆದಾಗ ಮಗನಿಗೆ ಎರಡೂವರೆ ವರ್ಷ ವಯಸ್ಸು. ನನ್ನ ಹತ್ತಿರ ಕೆಲಸ ಇರಲಿಲ್ಲ, ಹಣವೂ ಇರಲಿಲ್ಲ. ನನ್ನಿಬ್ಬರು ತಂಗಿಯಂದಿರು ಬೇರೆ ಬೇರೆ ಕೆಲಸದಲ್ಲಿದ್ದರು. ಅವರಿಗೆ ಆಗ ಮದುವೆ ಆಗಿರಲಿಲ್ಲ. ಅವರು ದುಡಿದ ಹಣದಲ್ಲಿ ಜೀವನ ನಡೆಯುತ್ತಿತ್ತು ಎಂದು ಪದ್ಮಜಾ ರಾವ್ ಹೇಳಿದ್ದಾರೆ.

Source link
ಫಸ್ಟ್ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್ ಆಗಿದೆ: ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್