
ಶಿವಮೊಗ್ಗ, ಏಪ್ರಿಲ್ 02: ಹಣಕಾಸಿನ ವಿಚಾರಕ್ಕೆ ಹೋಟೆಲ್ ಮಾಲೀಕನಿಂದಲೇ ಕಾರ್ಮಿಕ ಹತ್ಯೆ (ಕೊಲ್ಲಲು) ಇಂತಹ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ರೂಫ್ ಟಾಪ್ ಕೆಫೆಯಲ್ಲಿ ನಡೆದಿದೆ. ಮಾಲೀಕ ಇಮ್ರಾನ್ ನಿಂದ ಟಿಂಕು ಶರ್ಮಾ(30)ನ ಕೊಲೆ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು?
ಸಾಗರ ಪಟ್ಟಣದ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಬಿಹಾರ ಮೂಲದ ಟಿಂಕು ಶರ್ಮಾ ಕೆಲಸ ಮಾಡುತ್ತಿದ್ದಾರೆ. ಹಣಕಾಸಿನ ವಿಚಾರಕ್ಕೆ ಮಾಲೀಕ ಇಮ್ರಾನ್ ಮತ್ತು ಟಿಂಕು ನಡುವೆ ಗಲಾಟೆ ಉಂಟಾಗಿದೆ.
ಇದನ್ನೂ ಓದಿ: ಅಧ್ಯಾಪಕರೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ
ಗುರುವಾರ ಬೆಳಗ್ಗೆ ಕೂಡ ಇದೇ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಹಲ್ಲೆ ನಡೆಸಿ ಟಿಂಕು ಶರ್ಮಾನನ್ನು ಇಮ್ರಾನ್ ಕೊಲೆಗೈದಿದ್ದಾರೆ. ಹೋಂಡಾ ಸಿಟಿ ಕಾರಿನಲ್ಲಿ ಶವ ಇದೆ. ಇಮ್ರಾನ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಶಿವಮೊಗ್ಗ ಎಸ್ ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವು
ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ನಡೆದಿದೆ. ಛತ್ತೀಷ್ ಘಡ ಮೂಲದ ಜಾಲ್ ಬಾಯಿ ಸಿಧರ್(42) ಮೃತ ಕಾರ್ಮಿಕ ಮಹಿಳೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ
ಕಳೆದ ಕೆಲ ದಿನಗಳಿಂದ ಎಕೆಸಿ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜಾಲ್ ಬಾಯಿ ಕುಟುಂಬಕ್ಕೆ ಕೆಲಸ ಇತ್ತು. ಮಲಗಿದ್ದ ವೇಳೆ ತಡರಾತ್ರಿ ಜಾಲ್ ಬಾಯಿಗೆ ಹಾವು ಕಡಿದಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.