
ಡಾಲಿ ಧನಂಜಯ ನಟನೆ, ನಿರ್ಮಾಣದ ಹೊಸ ಸಿನಿಮಾ ಹೆಸರು ‘ಮದರ್ ಪ್ರಾಮಿಸ್’. ಈ ಚಿತ್ರದ ಟ್ಯಾಗ್‌ಲೈನ್ ‘ಫಾದರ್ ಆಫ್ ಆಲ್ ಪ್ರಾಮಿಸಸ್’. ವಿಶೇಷ ಎಂದರೆ ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಕನಾಗುತ್ತಿದ್ದಾರೆ.
ಡಾಲಿ ಧನಂಜಯ ನಟನೆ, ನಿರ್ಮಾಣದ ಹೊಸ ಸಿನಿಮಾ ಹೆಸರು ‘ಮದರ್ ಪ್ರಾಮಿಸ್’. ಈ ಚಿತ್ರದ ಟ್ಯಾಗ್‌ಲೈನ್ ‘ಫಾದರ್ ಆಫ್ ಆಲ್ ಪ್ರಾಮಿಸಸ್’. ವಿಶೇಷ ಎಂದರೆ ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಕನಾಗುತ್ತಿದ್ದಾರೆ. ಡಾಲಿ ಧನಂಜಯ ಅವರು ವಿಭಿನ್ನವಾಗಿ ಈ ಸಿನಿಮಾದ ಘೋಷಣೆಯನ್ನು ಮಾಡಿದ್ದಾರೆ. ವಿದೇಶಿ ಭಾಷೆಯಲ್ಲಿ ಶೀರ್ಷಿಕೆ ಬರೆದಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಗೆಸ್ ಮಾಡಲು ಸೂಚಿಸಿದ್ದರು. ಅದರಲ್ಲಿ ಬಹುತೇಕರು ಸರಿಯುತ್ತರ ನೀಡಿದ್ದಾರೆ.
ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಮತ್ತು ಪೂರ್ಣಚಂದ್ರ ಮೈಸೂರು ಕೂಡ ನಟಿಸಿದ್ದು, ಉಳಿದಂತೆ ಬಹುತೇಕ ಹೊಸ ಹುಡುಗರೇ ಇದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಕಾಮಿಡಿ ಜಾನರಾ ಸಿನಿಮಾ ಆಗಿದೆ. ಈ ಸಿನಿಮಾ ಕುರಿತು ಡಾಲಿ ಧನಂಜಯ,ಸಂಪೂರ್ಣವಾಗಿ ಮನರಂಜನಾತ್ಮಕವಾಗಿಯೇ ಸಾಗುವ ಸಿನಿಮಾ ಇದು.
ಸೊಗಸಾದ ಚಿತ್ರಕತೆ
ಹೊಸ ಕಾಲದ ತರುಣ, ತರುಣಿಯರಿಗೆ ಕನೆಕ್ಟ್ ಆಗಬಲ್ಲ ಸಿನಿಮಾ. ನನಗೆ ಹೊಸಬರ ಜೊತೆ ಪಯಣ ಮಾಡುವ ಹಂಬಲವಿತ್ತು. ಹೊಸ ಕಾಲದವರ ಹೊಸತನದ ಕುರಿತು ಕುತೂಹಲವಿತ್ತು. ಅದೇ ಹೊತ್ತಿಗೆ ಪೂರ್ಣಚಂದ್ರ ಒಂದು ಸೊಗಸಾದ ಚಿತ್ರಕತೆ ಕೊಟ್ಟರು. ಒಂದು ಹೊಸ ಕಾಲದ ಹುಡುಗರ ತಂಡ ಕಟ್ಟಿ ಸಿನಿಮಾ ರೂಪಿಸಿದರು. ಮಹಾನಗರಗಳ ಕತೆಯನ್ನು ದಾಟಿಸುವ ಆಹ್ಲಾದಕರ ಸಿನಿಮಾ ಇದು.
ಈ ಸಿನಿಮಾ ಮೂಲಕ ಮತ್ತೊಬ್ಬ ಹೊಸ ನಿರ್ದೇಶಕನನ್ನು ಡಾಲಿ ಪಿಕ್ಚರ್ಸ್ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ ಎಂದು ಹೇಳಿದರು. ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಮದರ್ ಪ್ರಾಮಿಸ್’ ಮತ್ತು ‘ಹೆಗ್ಗಣ ಮುದ್ದು’ ಎರಡೂ ಸಿನಿಮಾಗಳು ಸಿದ್ಧವಿದ್ದು, ಜೂನ್ ಬಳಿಕ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬರವಣಿಗೆ ಆಸಕ್ತಿ ಇತ್ತು. ಬರವಣಿಗೆ ಖುಷಿ ಕೊಡುತ್ತದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಹೊರತಾಗಿ ಬೇರೆಲ್ಲಾ ಚಿತ್ರಕತೆ ಮುಗಿಸಿದ್ದೆ. ಅದನ್ನು ಓದಿ ಧನಂಜಯ್ ಖುಷಿಪಟ್ಟು ನಿರ್ಮಾಣ ಮಾಡುತ್ತೇನೆ ಎಂದರು. ನೀವು ನಟಿಸಿದರೆ ಸಿನಿಮಾ ಮಾಡುತ್ತೇನೆ ಎಂದೆ. ಓಕೆ ಆಯಿತು. ಒಂದೊಳ್ಳೆ ಕ್ಲೈಮ್ಯಾಕ್ಸ್ ಸಿಕ್ಕಿತು. ತಮಾಷೆಯಾಗಿ ಹೇಳಿರುವ ಲೈಟ್ ಹ್ಯೂಮರ್ ಕಥಾಹಂದರ ಸಿನಿಮಾ. ಮಹಾನಗರಕ್ಕೆ ಬಂದು ಸಿಕ್ಕಿಹಾಕಿಕೊಂಡು ಒದ್ದಾಡುವ ತರುಣರ ಆತ್ಮಕತೆ.
– ಪೂರ್ಣಚಂದ್ರ ಮೈಸೂರು