Headlines

ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್

ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್


ಚರ್ಚ್‌ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ (ಪ್ರಕಾಶ್ ರಾಜ್) ಅವರ ತಾಯಿ ಸ್ವರ್ಣಲತಾ ಅವರು ತಮ್ಮ 89 ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೇ ನಿಧನರಾದರು. ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಪ್ರಕಾಶ್ ರೈ ಚರ್ಚ್‌ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಪ್ರಕಾಶ್ ರೈ ಹಲವು ಬಾರಿ ದೇವರ ಇರುವಿಕೆಯನ್ನು ಪ್ರಶ್ನಿಸಿದ್ದರು, ತಾವು ನಾಸ್ತಿಕ (ದೇವರಲ್ಲಿ ನಂಬಿಕೆ ಇಡದವ) ಎಂದು ಹೇಳಿದ್ದರು. ಪ್ರಕಾಶ್ ರೈ, ಯೂಟ್ಯೂಬ್ ಸಂದರ್ಶನದಲ್ಲಿ ತಾವು ನಾಸ್ತಿಕ ಎಂದು ಹೇಳಲಾದ ದೃಶ್ಯವನ್ನು ಹಂಚಿಕೊಂಡು, ‘ನಾಸ್ತಿಕ ಎಂದ ಮೇಲೆ ಚರ್ಚ್‌ಗೆ ಹೋಗಿದ್ದೇಕೆ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದರು. ಅವಳ ನಂಬಿಕೆಯ ಪ್ರಕಾರ ಸಮಾಧಿ ಆಗುವ ಅವರ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವ ರಾಕ್ಷಸರು ನೀವು ಇದನ್ನು ಬಳಸಿಲ್ಲರಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪ್ರಕಾಶ್ ರೈ, ಅವರು ದೇವರನ್ನು ನಂಬುವುದಿಲ್ಲ ಅವರ ತಾಯಿ ನಂಬಿದ್ದು ಹಾಗೂ ಅಂತ್ಯಕ್ರಿಯೆ ಹೀಗೆಯೇ ಆಗಬೇಕೆಂಬುದು ಅವರ ಇಚ್ಛೆಯಾಗಿದ್ದರಿಂದ ಮಗನಾಗಿ ಅವರ ಆಯ್ಕೆಯನ್ನು ನೆರವೇರಿಸಿದ ಪ್ರಕಾಶ್ ರೈ ಹೇಳಿದ್ದಾರೆ.

ಇದನ್ನೂ ಓದಿ:’ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರಬಂದಿಲ್ಲ; ಸ್ಪಷ್ಟನೆ ನೀಡಿದ ನಟ

ಪ್ರಕಾಶ್ ರೈ ಅವರ ತಾಯಿ ಸ್ವರ್ಣಲತಾ ಮಾರ್ಚ್ 30 ರಂದು ನಿಧನ ಹೊಂದಿದ್ದರು. 85 ವರ್ಷ ವಯಸ್ಸಿನವರು ಸ್ವರ್ಣಲತಾ ಅವರು ಹೈದರಾಬಾದ್‌ನಲ್ಲಿ ವಾಸವಿದ್ದರು, ಅಲ್ಲಿಯೇ ನಿಧನರಾದರು. ಗದಗದವರಾಗಿದ್ದರು ಸ್ವರ್ಣಲತಾ ಅವರು ಅನಾಥೆ ಆಗಿದ್ದರು. ನರ್ಸಿಂಗ್ ಕಲಿತು ಬೆಂಗಳೂರಿಗೆ ಬಂದು ಇಲ್ಲಿಯೇ ಹಲವು ವರ್ಷಸಿದ್ದರು. ಪ್ರಕಾಶ್ ರೈ ಸಹ ಕೊನೆಯವರೆಗೂ ತಾಯಿಯರನ್ನು ಬಹಳ ಪ್ರೀತಿಯಿಂದ, ಗೌರವದಿಂದ ನೋಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *