ಏಪ್ರಿಲ್ 10ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ

ಏಪ್ರಿಲ್ 10ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ


ಏಪ್ರಿಲ್ 10 ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ

ಬೆಂಗಳೂರು, ಏಪ್ರಿಲ್ 2: ವಿದ್ಯಾರ್ಥಿ ಜೀವನ ಸರಿಯಾದ ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಮತ್ತು ಬಹಳ ಕಷ್ಟಕರವಾದ ಕೆಲಸವೂ ಹೌದು. ಈ ಕಾರ್ಯವನ್ನು ಸುಲಭವಾಗಿಸಬಲ್ಲುದು TV9 ಕನ್ನಡ ಎಜುಕೇಶ್ ಸಮಿಟ್ 2026 (TV9 Kannada Education Summit). ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಏಪ್ರಿಲ್ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ನಡೆಯುವ ಮಹಾ ಕಾರ್ಯಕ್ರಮ ಶಿಕ್ಷಣದ ಭವಿಷ್ಯದ ಹೆಜ್ಜೆಗಳನ್ನು ಗುರುತಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅದ್ಭುತವಾದ ವೇದಿಕೆಯಾಗಿದೆ.

ನಿಮ್ಮ ಕನಸುಗಳು ತೆರೆಯಲು ಅನುವಾಗಿಸಿ…

ನೀವು ಉನ್ನತ ಶಿಕ್ಷಣವನ್ನು ಮಾಡಬೇಕೆಂದು ಆಲೋಚಿಸುತ್ತಿದ್ದಾರೆ, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ಎಲ್ಲಿ ಅವಕಾಶಗಳಿವೆ ಎಂದು ಹುಡುಕುತ್ತಿರುವ ವಿದ್ಯಾರ್ಥಿಯಾಗಿದ್ದರೆ ಟಿವಿ9 ಕನ್ನಡ ಎಜುಕೇಶ್ ಸಮಿಟ್. ಜೊತೆಗೆ, ನಿಮ್ಮ ಮಗ ಅಥವಾ ಮಗಳ ಶಿಕ್ಷಣದ ದಿಕ್ಕುದೆಸೆಯನ್ನು ನಿರ್ಧರಿಸಲು ಬಯಸಿದ ನೀವು ನಿಮ್ಮ ಒಳ್ಳೆಯ ಪ್ಲಾಟ್ಫಾರ್ಮ್ ಇದು. ಈ ಎಜುಕೇಶನ್ ಸಮಿತಿಯಲ್ಲಿ ಅಗ್ರಮಾನ್ಯ ಕಾಲೇಜುಗಳು, ಯೂನಿವರ್ಸಿಟಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತವೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಒಂದೇ ಕಡೆ ಎಲ್ಲವನ್ನೂ ಅವಲೋಕಿಸಿ ತಿಳಿದುಕೊಳ್ಳಬಹುದು.

ವಿವಿಧ ಕೋರ್ಸ್‌ಗಳ ಪ್ರಪಂಚವೇ ಅನಾವರಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ TV9 ಕನ್ನಡ ಶಿಕ್ಷಣ ಶೃಂಗಸಭೆಯಲ್ಲಿ ಅನೇಕ ವಿಭಾಗಗಳಲ್ಲಿ ಯಾವ ಕೋರ್ಸ್‌ಗಳು ಲಭ್ಯವಿರುತ್ತವೆ ಎಂಬುದನ್ನು ತಿಳಿಯಬಹುದು. ಈ ಕೆಳಕಾಣಿಸಿದ ವಿಭಾಗಗಳ ಕೋರ್ಸ್‌ಗಳ ಮಾಹಿತಿ ಅಲ್ಲಿ ಸಿಗುತ್ತದೆ:

  • ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ
  • ಔಷಧ ಮತ್ತು ಆರೋಗ್ಯ
  • ಫಾರ್ಮಸಿ
  • ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟಡೀಸ್
  • ಕಲೆ ಮತ್ತು ವಿಜ್ಞಾನ
  • ಕಾಮರ್ಸ್ ಮತ್ತು ಫೈನಾನ್ಸ್
  • ಹೋಟೆಲ್ ಮ್ಯಾನೇಜ್ಮೆಂಟ್
  • ಅನಿಮೇಶನ್ ಮತ್ತು ಕ್ರಿಯೇಟಿವ್ ಕ್ಷೇತ್ರ
  • ಅಗ್ನಿ ಶಾಮಕ ಹಾಗೂ ತಜ್ಞ ಕೋರ್ಸ್

ಇವಲ್ಲದೆ ಇನ್ನೂ ಹಲವು ವಿಭಾಗಗಳಲ್ಲಿ ಕೋರ್ಸ್‌ಗಳಿದ್ದು, ಅವೆಲ್ಲವನ್ನೂ ಅವಲೋಕಿಸಬಹುದು. ಐ ಕಲಿಯಲು ಇರುವ ಕೋರ್ಸ್‌ಗಳ ಬಗ್ಗೆ ಮಾರ್ಗದರ್ಶನ ಪಡೆಯಬಹುದು.

ಬಗ್ಗೆ ನೇರವಾಗಿ ಮಾಹಿತಿ ಪಡೆಯಿರಿ…

TV9 ಕನ್ನಡ ಎಜುಕೇಶನ್ ಸಮಿತಿಯಲ್ಲಿ ಕಾಣುವ ಬಹಳ ಮುಖ್ಯ ಸಂಗತಿಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಕೊಡಲು ಅಪ್ಪಟ ವೃತ್ತಿಪರರು ಉಪಸ್ಥಿತರಿರುತ್ತಾರೆ. ಶಿಕ್ಷಣ ಸಂಸ್ಥೆಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಕೋರ್ಸ್‌ಗಳ ಆಳ ಅಗಲ; ಅಡ್ಮಿಶನ್ ಆಗುವುದು ಹೇಗೆ; ಕೋರ್ಸ್ ಸೇರಲು ಅರ್ಹತಾ; ಪ್ರವೇಶ ಪರೀಕ್ಷೆ; ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶವಿದೆ.

ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2026 ವಿವರ

  • ಸಮಿಟ್ ದಿನಾಂಕ: 2026ರ ಏಪ್ರಿಲ್ 10, 11 ಮತ್ತು 12, ಶುಕ್ರವಾರದಿಂದ ಭಾನುವಾರದವರೆಗೆ
  • ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ
  • ಸ್ಥಳ: ಬೆಂಗಳೂರಿನ ಅರಮನೆ ಮೈದಾನ, ತ್ರಿಪುರ ವಾಸಿನಿ.

ಗಮನಿಸಿ: ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತವಾಗಿರುತ್ತದೆ. ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇರುತ್ತದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *