Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಈಗ ಅವರು “ನಾವು ಈಗ ಇಬ್ಬರಲ್ಲ, ಮೂವರು” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಈಗ ಭಾರೀ ವೈರಲ್ ಆಗ್ತಿದೆ. ಹಾಗಾದರೆ ಸತ್ಯ ಏನು?

ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಉದಯಪುರದಲ್ಲಿ ಮದುವೆಯಾಗಿದ್ದರು. ಫೆಬ್ರವರಿ 26ರಂದು ಇವರಿಬ್ಬರು ಮದುವೆ ಆಗಿದ್ದರು. ಮದುವೆಯಾಗಿ ಒಂದು ತಿಂಗಳಾಗಿದೆ.

ಮದುವೆ ಆಗುತ್ತಿದ್ದಂತೆ ಈ ಜೋಡಿ, ಸತ್ಯನಾರಾಯಣ ಪೂಜೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿ ಆಗಿತ್ತು. ಆ ಬಳಿಕ ಬೇರೆ ಬೇರೆ ಕಾರ್ಯಕ್ರಮಗಳು, ಸಮಾರಂಭಗಳಲ್ಲಿ ಮದುವೆ ಆಗಿತ್ತು.

ಈಗ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡು, “ಈಗ ನಾನು, ನೀನು, ನಾವು ಅಷ್ಟೇ, ನಿನ್ನ ಸ್ನೇಹಿತರು” ಎಂದು ಹೇಳುವ ಫನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ನೋಡಿದ ಅನೇಕರು, ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕ್ಯೂಟ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಸತ್ಯ ಏನೆಂದರೆ ರಶ್ಮಿಕಾ ಮಂದಣ್ಣ ಅವರು, ಹೊಸ ಪೇಜ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ರಶ್ಮಿಕಾ ಹಾಗೂ ಅವರ ಸ್ನೇಹಿತೆ ಇದ್ದರು, ಈಗ ವಿಜಯ್ ದೇವರಕೊಂಡ ಕೂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Source link
'Now It’s Us Three..' ಮದುವೆಯಾದ ಒಂದೇ ತಿಂಗಳಿಗೆ ನಾವು ಮೂವರಾಗ್ತಿದ್ದೇವೆ ಎಂದ ನಟಿ ರಶ್ಮಿಕಾ ಮಂದಣ್ಣ!