ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಗುಡ್ ನ್ಯೂಸ್: ಕಟ್ಟಡ ಉಲ್ಲಂಘನೆ ಮಿತಿ ಶೇ. 15ಕ್ಕೆ ಏರಿಕೆ! | Greater Bengaluru Authority Building Bylaws Amendment 15 Percent Violation Regularisation Sat

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಗುಡ್ ನ್ಯೂಸ್: ಕಟ್ಟಡ ಉಲ್ಲಂಘನೆ ಮಿತಿ ಶೇ. 15ಕ್ಕೆ ಏರಿಕೆ! | Greater Bengaluru Authority Building Bylaws Amendment 15 Percent Violation Regularisation Sat



ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಗುಡ್ ನ್ಯೂಸ್: ಕಟ್ಟಡ ಉಲ್ಲಂಘನೆ ಮಿತಿ ಶೇ. 15ಕ್ಕೆ ಏರಿಕೆ! | Greater Bengaluru Authority Building Bylaws Amendment 15 Percent Violation Regularisation Sat

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಟ್ಟಡ ಉಲ್ಲಂಘನೆಯ ಮಿತಿಯನ್ನು ಶೇ. 5 ರಿಂದ ಶೇ. 15 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ತಿದ್ದುಪಡಿಯು, ಸ್ವಾಧೀನಾನುಭವ ಪ್ರಮಾಣ ಪತ್ರ (OC) ಸಿಗದೆ ಸಂಕಷ್ಟದಲ್ಲಿದ್ದ ಸಾವಿರಾರು ಮಾಲೀಕರಿಗೆ ನೆರವಾಗಲಿದೆ.

ಬೆಂಗಳೂರು (ಏ.02): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡುವವರು ದಶಕಗಳ ಎದುರಿಸುತ್ತಿದ್ದ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿಗಾಗಿ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಕಟ್ಟಡ ಉಲ್ಲಂಘನೆಯ ಮಿತಿಯನ್ನು ಹಾಲಿ ಇರುವ ಶೇ. 5 ರಿಂದ ಶೇ. 15 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸಂಕಷ್ಟದಲ್ಲಿದ್ದ ಮಾಲೀಕರಿಗೆ ಸರ್ಕಾರದ ಆಸರೆ:

ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಂತೆ ಈ ಜನಪರ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಭೂಮಿಯ ಬೆಲೆ ವಿಪರೀತವಾಗಿರುವುದರಿಂದ, ಅನೇಕ ಮಾಲೀಕರು ಅನಿವಾರ್ಯ ಕಾರಣಗಳಿಂದ ಅಥವಾ ತಿಳುವಳಿಕೆಯ ಕೊರತೆಯಿಂದ ಮಂಜೂರಾತಿ ನಕ್ಷೆಗಿಂತ (Sanction Plan) ಸ್ವಲ್ಪ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿರುತ್ತಾರೆ. ಈ ಹಿಂದೆ ಶೇ. 5 ರಷ್ಟು ಉಲ್ಲಂಘನೆಗಳನ್ನು ಮಾತ್ರ ಸಕ್ರಮಗೊಳಿಸಲು ಅವಕಾಶವಿತ್ತು. ಶೇ. 5 ಕ್ಕಿಂತ ಹೆಚ್ಚು ಉಲ್ಲಂಘನೆಯಾದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (OC) ಸಿಗುತ್ತಿರಲಿಲ್ಲ. ಇದರಿಂದಾಗಿ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಸಾವಿರಾರು ಜನರು ಪರದಾಡುತ್ತಿದ್ದರು. ಈ ವಾಸ್ತವವನ್ನು ಮನಗಂಡ ಸರ್ಕಾರ ಈಗ ಈ ಮಿತಿಯನ್ನು ಶೇ. 15 ಕ್ಕೆ ಏರಿಸಿದೆ.

ಏಪ್ರಿಲ್ 30 ರೊಳಗೆ ಸಲಹೆ ನೀಡಲು ಅವಕಾಶ:

ಈ ಹೊಸ ತಿದ್ದುಪಡಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 1 ರಂದು ಕರಡು ಅಧಿಸೂಚನೆ ಪ್ರಕಟವಾಗಿದ್ದು, ಅಧಿಸೂಚನೆ ಪ್ರಕಟವಾದ 30 ದಿನಗಳೊಳಗೆ, ಅಂದರೆ ಏಪ್ರಿಲ್ 30, 2026 ರೊಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಬಹುದಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಎಲ್ಲಿ ಸಲಹೆ ಸಲ್ಲಿಸಬೇಕು?

ಬೆಂಗಳೂರನ್ನು ಐದು ನಗರ ಪಾಲಿಕೆಗಳನ್ನಾಗಿ ವಿಂಗಡಿಸಲಾಗಿದ್ದು, ಆಯಾ ವ್ಯಾಪ್ತಿಯ ಆಯುಕ್ತರ ಕಚೇರಿಗಳಲ್ಲಿ ಸಲಹೆಗಳನ್ನು ನೀಡಬಹುದು:

  • ಬೆಂಗಳೂರು ಉತ್ತರ ನಗರ ಪಾಲಿಕೆ: ಬ್ಯಾಟರಾಯನಪುರ ಕಚೇರಿ.
  • ಬೆಂಗಳೂರು ಕೇಂದ್ರ ನಗರ ಪಾಲಿಕೆ: ಎಂ.ಜಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್.
  • ಬೆಂಗಳೂರು ಪೂರ್ವ ನಗರ ಪಾಲಿಕೆ: ಫಿಯೋನಿಕ್ಸ್ ಮಾಲ್ ಎದುರು, ಕೆ.ಆರ್ ಪುರ ವ್ಯಾಪ್ತಿ.
  • ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಜಯನಗರ 2ನೇ ಬ್ಲಾಕ್.
  • ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಮಲ್ಲೇಶ್ವರಂ ಐ.ಪಿ.ಪಿ ಕೇಂದ್ರ.

ಅಂತರ್ಜಾಲದಲ್ಲೂ ಲಭ್ಯ:

ಸಾರ್ವಜನಿಕರು ಈ ಕರಡು ಅಧಿಸೂಚನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಅಂತರ್ಜಾಲ ತಾಣ https://updates.bbmpgov.in/public ನಲ್ಲಿ ವೀಕ್ಷಿಸಬಹುದಾಗಿದೆ. ಶೇ. 15 ರವರೆಗಿನ ಉಲ್ಲಂಘನೆಗೆ ದಂಡ ಪಾವತಿಸಿ ಕ್ರಮಬದ್ಧಗೊಳಿಸಲು ಈ ತಿದ್ದುಪಡಿ ಅನುವು ಮಾಡಿಕೊಡಲಿದೆ. ಆದರೆ, ಶೇ. 15 ಕ್ಕಿಂತ ಹೆಚ್ಚಿನ ಉಲ್ಲಂಘನೆ ಮಾಡುವವರ ವಿರುದ್ಧ ಭವಿಷ್ಯದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಗಾಳಿ, ಬೆಳಕು ಮತ್ತು ಸುರಕ್ಷತೆಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿ ತರಲಾಗಿದ್ದು, ಬೆಂಗಳೂರಿನ ಲಕ್ಷಾಂತರ ಕಟ್ಟಡ ಮಾಲೀಕರಿಗೆ ಇದು ನೆಮ್ಮದಿ ನೀಡಲಿದೆ.



Source link

Leave a Reply

Your email address will not be published. Required fields are marked *