‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್

‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್


'ಜನ ನಾಯಕನ್' ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್

ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ದಳಪತಿ ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ತಿರುಚನಾಪಳ್ಳಿಯಲ್ಲಿ (ತಿರುಚಿ) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ನಂತರ ಅಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ದಳಪತಿ ವಿಜಯ್ (ತಲಪತಿ ವಿಜಯ್) ಅವರು, ತಮ್ಮ ಕೊನೆಯ ಚಿತ್ರ ‘ಜನ ನಾಯಕನ್’ (ಜನ ನಾಯಗನ್) ಬಿಡುಗಡೆಯ ವಿಳಂಬದ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

‘ನನ್ನನ್ನು ವಿರೋಧಿಸಲು ಎಲ್ಲಾ ಪಕ್ಷಗಳು ಹೇಗೆ ಒಂದಾಗಿವೆ ನಾನು ನಿಮಗೆ ಹೇಳುತ್ತಿಲ್ಲ. 40ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕರೂರ್ ಕಾಲ್ತುಳಿತದ ಘಟನೆ ಮತ್ತು ನನ್ನ ಕೊನೆಯ ಸಿನಿಮಾ ಜನ ನಾಯಕನನ್ನು ಬಿಡುಗಡೆ ಮಾಡದಂತೆ ತಡೆದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಚುನಾವಣೆಯಲ್ಲಿ ಆ ಸಿನಿಮಾ ಪ್ರಬಲ ಅಸ್ತ್ರವಾಗುತ್ತದೆ ಎಂಬ ಭಯ ಅವರಿಗಿದೆ. ಒಬ್ಬ ಸಹೋದರನಾಗಿ, ಮಗನಾಗಿ ನಿಮ್ಮ ವಿಜಯ್‌ಗೆ ನ್ಯಾಯ ಬೇಕು’ ಎಂದು ಅವರು ಭಾವುಕರಾಗಿ ನುಡಿದರು.

‘ನಾನು ಬೇಕಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ನಿಮ್ಮ ಸೇವೆ, ನಿಮ್ಮ ಪ್ರೀತಿಯ ಕೃತಜ್ಞತೆ ತೀರಿಸಲು ಮತ್ತು ನೋವುಗಳನ್ನು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ನಿಮಗೆ ಯಾವತ್ತೂ ಸುಳ್ಳು ಹೇಳುವುದಿಲ್ಲ ಅಥವಾ ಮೋಸ ಪಟ್ಟಿ’ ಎಂದು ವಿಜಯ್ ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಇದೇ ವೇಳೆ ಡಿಎಂಕೆ ವಿರುದ್ಧ ಅವರು ನೇರ ವಾಗ್ದಾಳಿ ಮಾಡಿದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯ್, ಪ್ರಸ್ತುತ ಡಿಎಂಕೆ ಸರ್ಕಾರವನ್ನು ‘ದುಷ್ಟ ಶಕ್ತಿ’ ಎಂದು ಕರೆದರು. ಅಲ್ಲದೆ, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಅನಾರೋಗ್ಯದ ಕಾರಣ ಕೊಟ್ಟು ‘ಜನ ನಾಯಕ’ ನೋಡೋದನ್ನು ಮುಂದಕ್ಕೆ ಹಾಕಿದ ರಿವಿಷನ್ ಸಮಿತಿ

ಎಚ್. ವಿನೋದ್ ನಿರ್ದೇಶನದ ‘ಜನ ನಾಯಕನ್’ ಸಿನಿಮಾ ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ವಿಳಂಬದಿಂದಾಗಿ ಸಂಸ್ಥೆ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗುತ್ತದೆ ಎಂದು ಚಿತ್ರದ ನಿರ್ಮಾಣವಾದ ‘ಕೆವಿಎನ್ ಪ್ರೊಡಕ್ಷನ್ಸ್’ ನ್ಯಾಯಾಲಯದಲ್ಲಿ ವಾದಿಸಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಲು ವಿಳಂಬವಾಗಿರುವುದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *