
ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿ ನೀರು ಬೇಡಿ ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಬಿಸಿಲಲ್ಲಿ ಓಡಿ ಚಿಪ್ಸ್ ಹಾಗೂ ನೀರನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹೆಚ್ಚು ವಾಹನಗಳು ಬರುವ ರಸ್ತೆಯಲ್ಲಿ ಮಹಿಳೆಯೊಬ್ಬರು ಬಿದ್ದಿರುವ ಬಾಟಲಿ ಕಂಡುಬಂದಿದೆ, ಮತ್ತೊಂದು ಕಡೆಯಿಂದ ಕೈಯಲ್ಲಿ ಹಿಡಿದು ಓಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ ಅದನ್ನು ನೋಡಿ ವಿಡಿಯೋ ಮಾಡುತ್ತಿರುವ ಜನ ಯಾರೂ ಆತನ ಸಹಾಯಕ್ಕೆ ಬರಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ