ಆರ್‌ಸಿಬಿ ತಂಡದ ಹೊಸ ಒಡತಿ ಅನನ್ಯಾ ಬಿರ್ಲಾ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆರ್‌ಸಿಬಿ ಮಾಲೀಕತ್ವ ಬದಲಾದ ನಂತರ ಅವರ ಇನ್ಸ್‌ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.

ಆರ್‌ಸಿಬಿ ಟೀಮ್‌ನ ಹೊಸ ಒಡತಿ ಹಾಗೂ ಬಿರ್ಲಾ ಕುಟುಂಬದ ಕುಡಿ ಅನನ್ಯಾ ಬಿರ್ಲಾ ಫೇಸ್‌ಬುಕ್‌ನಲ್ಲಿ ತಮ್ಮ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಆರ್‌ಸಿಬಿ ಅಭಿಮಾನಿಗಳು ಮುಗಿಬಿದ್ದು ಆ ಫೋಟೋಗಳನ್ನು ನೋಡಲು ಆರಂಭಿಸಿದ್ದಾರೆ.

ಫೋಟೋಗಳಿಗೆ ಕಾಮೆಂಟ್ ಮಾಡಿರುವ ಹಲವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಗುಳುನಗೆ ಸಿನಿಮಾದ ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು ಎಂದು ಕಾಮೆಂಟ್ ಮಾಡಿದ್ದಾರೆ.

ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಸೇರಿದಂತೆ ಐದು ಸಂಸ್ಥೆಗಳ ಒಕ್ಕೂಟ ಖರೀದಿ ಮಾಡಿದ ಬೆನ್ನಲ್ಲಿಯೇ ಆರ್‌ಸಿಬಿ ಹೊಸ ಚೇರ್ಮನ್ ಆರ್ಯಮಾನ್ ವಿಕ್ರಮ್ ಬರ್ಲಾ ಅವರ ಅಕ್ಕ ಅನನ್ಯಾ ಬಿರ್ಲಾ ಕರ್ನಾಟಕದಲ್ಲಿ ಸಖತ್ ಫೇಮಸ್ ಆಗಿದ್ದಾರೆ.

ಬರೋಬ್ಬರಿ 16 ಸಾವಿರ ಕೋಟಿಗೂ ಅಧಿಕ ಮೊತ್ತ ಪಾವತಿಸಿ ಆರ್‌ಸಿಬಿ ಮಾಲೀಕರಾಗಿರುವ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಅವರ ಪುತ್ರ ಅನನ್ಯಾ ಬಿರ್ಲಾ, ಕೆಲವೇ ದಿನಗಳಲ್ಲಿ ಇನ್ಸ್‌ಟಾಗ್ರಾಮ್ ಫಾಲೋವರ್ಸ್‌ನಲ್ಲಿ 400 ಪಟ್ಟು ಹೆಚ್ಚಳವಾಗಿದೆ. ಆರ್‌ಸಿಬಿ ಖರೀದಿಗೂ ಮುನ್ನ 435ಕೆ ಫಾಲೋವರ್ಸ್ ಹೊಂದಿದ್ದ ಅನನ್ಯಾ ಬಿರ್ಲಾ ಈಗ 2.2 ಮಿಲಿಯನ್ ಫಾಲೋವರ್ಸ್‌ಗೆ ಏರಿದ್ದಾರೆ.

ಕೆಲವು ಮೂಲಗಳ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರನ್ನು ರಾಯಲ್ ಕನ್ನಡಿಗ ಚಾಲೆಂಜರ್ಸ್ ಎಂದು ಬದಲಾಯಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ಈ ಸುದ್ದಿಯನ್ನು ಅನನ್ಯಾ ಬಿರ್ಲಾ ತಳ್ಳಿ ಹಾಕಿದ್ದಾರೆ.

Source link
'ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..' RCB ಒಡತಿಯ ಫೋಟೋ ನೋಡಿ ಫಿದಾ ಆದ ಫ್ಯಾನ್ಸ್!