Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ

Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆಯುತ್ತಿದ್ದಂತೆ ಜೋರಾಗಿ ಗದರಿದ ಕಂದಮ್ಮ


Video: ಅಪ್ಪನಿಗೆ ತನ್ನ ತಾಯಿ ಮೆಲ್ಲನೆ ಹೊಡೆದಿದ್ದರಿಂದ ಜೋರಾಗಿ ಗದರಿದ ಕಂದಮ್ಮ

ಪ್ರತಿಯೊಬ್ಬ ಅಪ್ಪನಿಗೆ (ತಂದೆ) ಮುದ್ದಿನ ಮಗಳು ಪುಟ್ಟ ರಾಜಕುಮಾರಿಯೇ. ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಅಪ್ಪನಿಗೂ ಮಗಳೆಂದರೆ ಜೀವಕ್ಕಿಂತ ಹೆಚ್ಚು. ಇದಕ್ಕೆ ಸಾಕ್ಷಿ ಈ ದೃಶ್ಯವಾಗಿದೆ. ತಂದೆಯ ಮಡಿಲಿನಲ್ಲಿ ಮಲಗಿರುವ ಕಂದಮ್ಮನು ತನ್ನ ಅಮ್ಮನಿಗೆ ಗದರಿದೆ. ತನ್ನ ಅಮ್ಮ ಅಪ್ಪನಿಗೆ ಮೆಲ್ಲನೆ ಒಮ್ಮೆಲೇ ಶುರುವಾಯಿತು ಈ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯಲು ಮಾಡಿದೆ. ಈ ಪುಟಾಣಿ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

baby-doll-udhra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೂ ತನ್ನ ತಂದೆಯ ಮಡಿಲಿನಲ್ಲಿ ಮಲಗಿದೆ. ಇದೆ ವೇಳೆ ಮಹಿಳೆಯೂ ಪುಟಾಣಿ ಬಳಿ, ಇದು ನಿನ್ನ ಅಪ್ಪನಾ ಎಂದು ಹೇಳುತ್ತಾ ಮೆಲ್ಲನೆ ಒಮ್ಮೆ ತನ್ನ ಗಂಡನಿಗೆ ಹೊಡೆದಿದ್ದಾಳೆ. ಅಪ್ಪನಿಗೆ ಅಮ್ಮನು ಹೊಡೆಯುವುದರಿಂದ ಕೋಪದಲ್ಲಿ ಪುಟಾಣಿ ತನ್ನದೇ ಭಾಷೆಯಲ್ಲಿ ಬೈಯುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಉದ್ರಾ ಅರವಿಂದನ್ (@baby_doll_udhra) ಅವರು ಹಂಚಿಕೊಂಡ ಪೋಸ್ಟ್

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದಿದ್ದು, ಒಬ್ಬ ಬಳಕೆದಾರ ಅಪ್ಪನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ಮತ್ತೊಬ್ಬರು, ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ. ಇತರರು, ಮಗಳ ಪ್ರೀತಿ ತಾಯಿ ಪ್ರೀತಿ ಸಮ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *