ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ


ಮಂಗಳೂರಿನಲ್ಲಿ ಕೆಂಡದಂತಹ ಬಿಸಿಲು: ಕರಾವಳಿ ಕರ್ನಾಟಕಕ್ಕೆ ಶಾಖಾಘಾತದ ಎಚ್ಚರಿಕೆ

ಮಂಗಳೂರು, ಏಪ್ರಿಲ್ 3: ದಕ್ಷಿಣ ಕನ್ನಡ (ದಕ್ಷಿಣ ಕನ್ನಡ) ಜಿಲ್ಲೆಯಾದ್ಯಂತ ರಣಬಿಸಿಲು ಜನರನ್ನು ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ, ಸಾರ್ವಜನಿಕರು ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಉಷ್ಣಾಂಶ ಕಾರಣ ‘ಶಾಖಾಘಾತ (ಹೀಟ್ ಸ್ಟ್ರೋಕ್)‘ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ.

ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್ ನಿಂದ 6.4 ಡಿಗ್ರಿ ಸೆಲ್ಶಿಯಸ್ ನಷ್ಟು ತಾಪಮಾನ ಹೆಚ್ಚಾದಾಗ ಶಾಖಾಘಾತ. ದಕ್ಷಿಣ ಕನ್ನಡದಲ್ಲಿ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಇದರ ಪರಿಣಾಮವಾಗಿ ಮೈಮೇಲೆ ಬೆವರುಸಾಲೆ, ಮಾಂಸಖಂಡಗಳ ಸೆಳೆತ, ತಲೆಸುತ್ತ ಉಂಟಾಗಬಹುದು. ತೀವ್ರತರದ ಹಂತದಲ್ಲಿ ಇದು ಎದೆಯ ಸೆಳೆತ ಹಾಗೂ ಹೃದಯಾಘಾತಕ್ಕೂ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನೇನಿದೆ?

  • 12 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
  • ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ.
  • ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಮತ್ತು ಕನ್ನಡಕ ಬಳಸಿ.
  • ಮಕ್ಕಳಿಗೆ ಮಧ್ಯಾಹ್ನದ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ.

ಮೀನುಗಾರಿಕೆಗೂ ಬಿಸಿಲ ಬಿಸಿ

ಬಿಸಿಲಿನ ತಾಪ ಕೇವಲ ಮನುಷ್ಯರಿಗಷ್ಟೇ ಅಲ್ಲ, ಮೀನುಗಾರಿಕೆಗೂ ಹೊಡೆತ ನೀಡಿದೆ. ಸಮುದ್ರದ ಮೇಲ್ಮೈ ನೀರು ಬಿಸಿಯಾಗುವುದರಿಂದ ಮೀನುಗಳು ಸಮುದ್ರದಾಳಕ್ಕೆ ಹೋಗುತ್ತವೆ. ಸಹಾಯಕ ಮೀನುಗಾರರ ಬಲೆಗೆ ಮೀನುಗಳು ಬೀಳುತ್ತಿಲ್ಲ, ಇದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ; 15 ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ!

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಶಾಖಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ, ಜನರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *