
ವಾಷಿಂಗ್ಟನ್, ಏಪ್ರಿಲ್ 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಟ್ಯಾರಿಫ್ ಗುಮ್ಮ ಹೊರತಂದಿದ್ದಾರೆ. ಕೆಲ ಫಾರ್ಮಾ ಉತ್ಪನ್ನಗಳು (ಫಾರ್ಮಾ ಉತ್ಪನ್ನಗಳು) ಮೇಲೆ ಶೇ. 100ರಷ್ಟು ಟ್ಯಾರಿಫ್ ವಿಧಿಸುವ ಕ್ರಮವನ್ನು ಟ್ರಂಪ್ ಜಾರಿಗೆ ತಂದಿದ್ದಾರೆ. ಫಾರ್ಮಾ ಕ್ಷೇತ್ರದಲ್ಲಿ ಅಮೆರಿಕದ ‘ಮೋಸ್ಟ್ ಫೇವರ್ಡ್ ನೇಶನ್’ ಪ್ರೈಸಿಂಗ್ ಸ್ಕೀಮ್‌ಗೆ ಜೋಡಿತವಾಗದ ದೇಶಗಳ ಫಾರ್ಮಾ ಕಂಪನಿಗಳನ್ನು ಗುರಿಯಾಗಿರಿಸಿಕೊಳ್ಳಲಾಗಿದೆ.
ಸರ್ಕಾರದ ಹೊಸ ನೀತಿಗೆ ಬದ್ಧವಾಗಿರುವ ಕಂಪನಿಗಳಿಗೆ ಅಮೆರಿಕ ತಿಂಗಳ ತಿಂಗಳು ಗಡುವು ಕೊಡು. ದೊಡ್ಡ ಕಂಪನಿಗಳಿಗೆ 120 ದಿನದ ಗಡುವು ಇದೆ. ಸಣ್ಣ ಕಂಪನಿಗಳಿಗೆ 180 ದಿನಗಳ ಗಡುವು ಇದೆ. ಅದಾದ ಬಳಿಕ ಹೊಸ ಟ್ಯಾರಿಫ್ ದರಗಳು ಅನ್ವಯವಾಗುತ್ತವೆ.
ಇದನ್ನೂ ಓದಿ: ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ; ಹಲವು ಉದ್ಯಮಗಳಿಗೆ ಅನುಕೂಲ
ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಉತ್ತೇಜನ
ಅಮೆರಿಕವು ತನ್ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಸ್ಥಾಪನೆಗೆ ಉತ್ತೇಜಿಸುವ ಸಲುವಾಗಿ ಟ್ಯಾರಿಫ್ ಅಸ್ತ್ರ ಬಳಸುತ್ತಿದೆ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ಸ್ಥಾಪಿಸಲು ಬದ್ಧವಾಗಿರುವ, ಮತ್ತು ಪ್ರೈಸಿಂಗ್ ಸ್ಕೀಮ್‌ಗೆ ಸೇರ್ಪಡೆಯಾಗಲು ಒಪ್ಪುವ ಕಂಪನಿಗಳಿಗೆ ಟ್ಯಾರಿಫ್ ಕಡಿಮೆಯಾಗಿದೆ.
ಆದಾಗ್ಯೂ, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿರುವ ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಸ್ವಿಟ್ಜರ್ಲ್ಯಾಂಡ್ ಮೊದಲಾದ ದೇಶಗಳ ಫಾರ್ಮಾ ಕಂಪನಿಗಳಿಗೆ ಟ್ಯಾರಿಫ್ ಶೇ. 20ರ ಒಳಗೆಯೇ ಇರುತ್ತದೆ. ಟ್ರೇಡ್ ಅಗ್ರೀಮೆಂಟ್ ಮಾಡಿಕೊಳ್ಳುವ ಭಾರತದಂತಹ ದೇಶಗಳ ಫಾರ್ಮಾ ಕಂಪನಿಗಳು ಹೆಚ್ಚಿನ ಟ್ಯಾರಿಫ್ ತೆರಬೇಕಾಗಬಹುದು.
ಇದನ್ನೂ ಓದಿ: ಟ್ರಂಪ್ ಹಾಕಿದ ಟ್ಯಾರಿಫ್‌ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?
ಲೋಹಗಳ ಆಮದು ಮೇಲೆ ಹೆಚ್ಚಿನ ಸುಂಕ ಸಾಧ್ಯತೆ
ಉಕ್ಕು, ಅಲ್ಯುಮಿನಿಯಮ್ ಮತ್ತು ಕಾಪರ್ ಲೋಹಗಳ ಆಮದು ಮೇಲಿನ ಸುಂಕ ದರವನ್ನು ಟ್ರಂಪ್ ಸರ್ಕಾರ ಪರಿಷ್ಕರಿಸಿದೆ. ಘೋಷಿತ ರಫ್ತು ಮೌಲ್ಯದ ಬದಲಿಗೆ ಅಮೆರಿಕದ ಖರೀದಿ ದರದ ಆಧಾರದ ಮೇಲೆ ಲೋಹಗಳ ಮೇಲೆ ಟ್ಯಾರಿಫ್ ಹಾಕುವ ನಿಯಮವನ್ನು ನವೀಕರಿಸಲಾಗಿದೆ. ಸದ್ಯ ಇವುಗಳಿಗೆ ಶೇ. 50ರಷ್ಟು ಟ್ಯಾರಿಫ್ ಇದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ