‘ಧುರಂಧರ್ 2’ ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್

‘ಧುರಂಧರ್ 2’ ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್


'ಧುರಂಧರ 2' ಚಿತ್ರದ ಖ್ಯಾತ ನಟನಿಗೆ ಸಿನಿಮಾ ಅವಕಾಶ ಕೊಟ್ಟ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಬಳಿಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಪ್ಯಾನ್ ಭಾರತದಲ್ಲಿ ಗಮನ ಸೆಳೆಯಿತು. ಈ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯೂಸಿ ಇದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್ ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಈ ಚಿತ್ರಕ್ಕೆ ‘ಧುರಂಧರ’ ನಟನ ಎಂಟ್ರಿ ಆಗಿದೆ. ಅದೂ ವಿಲನ್ ಆಗಿ ಎನ್ನುತ್ತಿದ್ದಾರೆ.

‘ಧುರಂಧರ’ ಹಾಗೂ ‘ಧುಂಧರ್ 2’ ಚಿತ್ರವನ್ನು ಆದಿತ್ಯ ಧಾರ್ ಅವರು ನಿರ್ದೇಶಿಸಿದ್ದಾರೆ. ಈ ಎರಡೂ ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ಧುರಂಧರ’ ಸಿನಿಮಾ 1300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ‘ಧುರಂದರ್ 2’ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶಿರಾನಿ ಬಲೂಚ್ ಪಾತ್ರದಲ್ಲಿ ಬಿಮಲ್ ಓಬೆರಾಯ ಕಾಣಿಸಿಕೊಂಡಿದ್ದರು.

‘ಧುರಂಧರ’ ಸಿನಿಮಾದಲ್ಲಿ ಬಿಮಲ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.’ಧುರಂಧರ 2′ ಚಿತ್ರದ ಕ್ಲೈಮ್ಯಾಕ್ಸ್ ಅಲ್ಲಿ ಅವರ ಪಾತ್ರ ಪ್ರಾಮುಖ್ಯತೆ ಇದೆ. ಅವರು ಹಮ್ಜಾಗೆ ಸಹಾಯ ಮಾಡುವ ರೀತಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಫರ್ ಪಡೆದಿದ್ದಾರೆ.

ಇದನ್ನೂ ಓದಿ: ಜೂ ಎನ್ ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂನಿಯರ್ ಎನ್ ಟಿಆರ್ ಸಿನಿಮಾ ಎಂದರೆ ಆ್ಯಕ್ಷನ್ ಜೋರಾಗಿಯೇ ಇರುತ್ತದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿ ಬಿಮಲ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಶೂಟ್ ನಿರಂತರವಾಗಿ ವಿಳಂಬವಾಗುತ್ತಿದೆ, ಸಿನಿಮಾ ನಿಂತು ಹೋಗುತ್ತದೆ ಎಂಬ ವರದಿ ಇದೆ. ಅದ್ಯಾವುದೂ ಸತ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *