Headlines

Lakshmi Nivasa: ಬರೋಬ್ಬರಿ 2 ವರ್ಷಗಳ ಬಳಿಕ ಮನೆಮಂದಿ ಮುಂದೆ ಸೈಕೋ ಜಯಂತ್ ಕರಾಳ ಮುಖ ಬಯಲು!

Lakshmi Nivasa: ಬರೋಬ್ಬರಿ 2 ವರ್ಷಗಳ ಬಳಿಕ ಮನೆಮಂದಿ ಮುಂದೆ ಸೈಕೋ ಜಯಂತ್ ಕರಾಳ ಮುಖ ಬಯಲು!

Lakshmi Nivasa: ಬರೋಬ್ಬರಿ 2 ವರ್ಷಗಳ ಬಳಿಕ ಮನೆಮಂದಿ ಮುಂದೆ ಸೈಕೋ ಜಯಂತ್ ಕರಾಳ ಮುಖ ಬಯಲು!

Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ತೆರೆದುಕೊಳ್ಳುತ್ತಿರುತ್ತವೆ. ಇದೀಗ ಎರಡು ವರ್ಷಗಳ ಬಳಿಕ ಕೊನೆಗೂ ಎಲ್ಲರ ಮುಂದೆ ಜಯಂತ್ ಮುಖವಾಡ ಬಯಲಾಗಿದೆ. ಈವಾಗ ಲಕ್ಷ್ಮೀ ಮತ್ತು ಶ್ರೀನಿವಾಸ ಏನು ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕು.

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಸಾವನ್ನಪ್ಪಿದ್ದಾಳೆ ಎಂದೇ ಮನೆಯವರು ಅಂದುಕೊಂಡಿದ್ದರು. ಆದರೆ ಅದು ಈಗ ಎಲ್ಲರ ಮುಂದೆ ಜಾಹ್ನವಿ ಬರುವ ಮೂಲಕ, ಮಗಳು ಇರುವ ಸತ್ಯ ಲಕ್ಷ್ಮೀ ಶ್ರೀನಿವಾಸರಿಗೆ ತಿಳಿದು ಬಂದಿದೆ. ಹೀಗೆ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳು ತೆರೆದುಕೊಳ್ಳುತ್ತಾ ಹೋಗುತ್ತಿವೆ. ಇದೀಗ ಮತ್ತೊಂದು ಟ್ವಿಸ್ಟ್ ತೆರೆದುಕೊಂಡಿದೆ.

ಜಯಂತ್ ನನ್ನು ಮತ್ತೆ ಮನೆಗೆ ಕರೆದು, ಜಾಹ್ನವಿ ಬದುಕಿರುವ ಸತ್ಯವನ್ನು ಜಯಂತ್ ತಿಳಿಸಿ ಸರ್ಪ್ರೈಸ್ ನೀಡಬೇಕು ಎಂದು ವೀಣಾ ಪ್ಲ್ಯಾನ್ ಮಾಡಿ, ಮನೆಯವರನ್ನೆಲ್ಲಾ ಮನೆಗೆ ಆಹ್ವಾನಿಸಿದ್ದಾಳೆ. ಇದೀಗ ಸೀರಿಯಲ್ ಶುರುವಾಗಿ ಬರೋಬರಿ ಎರಡು ವರ್ಷದ ಬಳಿಕ ಜಯಂತ್ ಮುಖವಾಡ ಬಯಲಾಗಲಿದೆ.

ಇತ್ತೀಚೆಗೆ ಬಿಡುಗಡೆಯಾದ ಪ್ರೊಮೋದಲ್ಲಿ ಜಯಂತ್ ಲಕ್ಷ್ಮೀ ಶ್ರೀನಿವಾಸರ ಕುಟುಂಬದ ಮುಂದೆ ಬಂದು ನಿಂತಿದ್ದಾನೆ. ಶ್ರೀನಿವಾಸ್ ಸಂಭ್ರಮದಿಂದ ನಿಮ್ಮ ಪ್ರೀತಿ ನೋಡಿ ನನ್ನ ಮಗಳನ್ನು ಆ ದೇವರು ಉಳಿಸಿದ್ದಾನೆ ಎಂದರೆ, ಲಕ್ಷ್ಮೀ ನಮ್ಮ ಮಗಳನ್ನು ನಿಮ್ಮ ಜೊತೆ ವಾಪಾಸ್ ಕಳುಹಿಸಿ ಕೊಡುತ್ತೇವೆ ಎನ್ನುತ್ತಾರೆ. ಆವಾಗ ಅಜ್ಜಿಯಿಂದ ಸತ್ಯ ಬಯಲಾಗುತ್ತದೆ.

ಈಗ ಅಜ್ಜಿ ಎಲ್ಲರ ಮುಂದೆ ಇವನನ್ನು ನಂಬಿ ಜಾನೂನ ಕಳುಹಿಸಬೇಡ ಎಂದಾಗ, ವಿಶ್ವ ಜಾಹ್ನವಿ ಇದ್ದದ್ದು ಇವರ ನರಕದಲ್ಲಿ ಎನ್ನುತ್ತಾ ಕರಾಳ ಸತ್ಯವನ್ನು ಎಲ್ಲರೆದುರು ಬಿಚ್ಚಿಡುತ್ತಾರೆ. ಆವಾಗ ಮನೆಮಂದಿ ಸಿಟ್ಟಿಗೆದ್ದು, ಜಯಂತ್ ಮುಖ ನೋಡೋದಕ್ಕೂ ಅಸಹ್ಯ ಆಗುತ್ತೆ, ಇಂತವರನ್ನು ಸುಮ್ಮನೆ ಬಿಡಬಾರದು, ತಕ್ಕ ಶಿಕ್ಷೆ ಕೊಡಬೇಕು ಎಂದು ಹೇಳುತ್ತಾ ಹೊಡೆಯೋಕೆ ಬರುತ್ತಾರೆ.

ಸೀರಿಯಲ್ ಶುರುವಾಗಿ ಎರಡು ವರ್ಷ ಕಳೆದಿದೆ. ಜಾಹ್ನವಿ ಮದುವೆಯಾದ ಆರಂಭದಲ್ಲೇ ಅವನು ಎಂತಹ ಕಿರಾತಕ, ಸೈಕೋ ಅನ್ನೋದು ವೀಕ್ಷಕರ ಮುಂದೆ ರಿವೀಲ್ ಆಗಿದೆ. ಆದರೆ ಇದುವರೆಗೂ ಮನೆಮಂದಿ ಮುಂದೆ ಮಾತ್ರ ಆ ಸತ್ಯ ಬಯಲಾಗಲೇ ಇಲ್ಲ. ಇದೀಗ ಒಮ್ಮಿಂದೊಮ್ಮೆಲೆ ರಿವೀಲ್ ಆಗುತ್ತೆ ಅಂದ್ರೆ ಅದು ನಂಬೋದಕ್ಕೆ ಕಷ್ಟಾನೆ, ಹಾಗಾಗಿ ವೀಕ್ಷಕರು ಹೇಳ್ತಿದ್ದಾರೆ ಇದು ಜಯಂತ್ ಕನಸು ಎಂದು.

ಪ್ರೊಮೋ ನೋಡಿದ ವೀಕ್ಷಕರು, ಇದು ಜಯಂತ್ ಕಂಡ ಕನಸು, ಇಷ್ಟು ಬೇಗ ಆ ರಹಸ್ಯ ತೆರೆದುಕೊಳ್ಳೋದೆ ಇಲ್ಲ. ಆದರೆ ಜಯಂತ್ ನಟನೆ ನೋಡೋದಕ್ಕೆ ಮಾತ್ರ ನಾವು ಕಾಯುತ್ತಿದ್ದೇವೆ. ಆದಷ್ಟು ಬೇಗ ಸತ್ಯ ರಿವೀಲ್ ಆಗಲಿ, ಜಯಂತ್ ಒಳ್ಳೆಯವರಾಗಲಿ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *