Headlines

ಏರ್‌ಪೋರ್ಟ್‌ಗೆ ಬಂದ ಬಾಕ್ಸ್‌ನಲ್ಲಿತ್ತು ಕೊಳೆತ ಟೊಮೆಟೊ, ಅಶ್ಲೀಲ ಚಿತ್ರಗಳು! ಆರೋಪಿ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಏರ್‌ಪೋರ್ಟ್‌ಗೆ ಬಂದ ಬಾಕ್ಸ್‌ನಲ್ಲಿತ್ತು ಕೊಳೆತ ಟೊಮೆಟೊ, ಅಶ್ಲೀಲ ಚಿತ್ರಗಳು! ಆರೋಪಿ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!


ಏರ್‌ಪೋರ್ಟ್‌ಗೆ ಬಂದ ಬಾಕ್ಸ್‌ನಲ್ಲಿತ್ತು ಕೊಳೆತ ಟೊಮೆಟೊ, ಅಶ್ಲೀಲ ಚಿತ್ರಗಳು! ಆರೋಪಿ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಬೆಂಗಳೂರು, ಏ.3: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇರೆ ಬೆದರಿಕೆ ಕರೆಗಳು ಬಂದಿರುವುದನ್ನು ನೋಡಬಹುದು. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಅಸಾಮಾನ್ಯ ವಸ್ತುಗಳನ್ನು ಹೊಂದಿರುವ ಬಾಕ್ಸ್ ವೊಂದು ಬಂದಿದೆ. ಈ ವಿಚಿತ್ರ ಪಾರ್ಸೆಲ್ ಕಳುಹಿಸಿದ ಆರೋಪದ ಮೇಲೆ ಭಾರತೀಯ ಮೂಲದ 65 ವರ್ಷದ ಡಚ್ ಪ್ರಜೆಯನ್ನು ಬಂಧಿಸಲಾಗಿದೆ. ಸುಭಾಷ್ ಜೈ ಅಜೀಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬುಧವಾರ (ಏ.1) ಬಂಧಿಸಲಾಗಿದೆ. ಸುಭಾಷ್ ಜೈ ಅಜೀಜ್ ಎಂಬ ವ್ಯಕ್ತಿ ಜನವರಿಯಲ್ಲಿ ಈ ಪಾರ್ಸೆಲ್ ಕಳುಹಿಸಿದ್ದಾನೆ. ಅಷ್ಟಕ್ಕೂ ಇದರಲ್ಲಿ ಏನಿತ್ತು ಎಂಬುದು ಅನೇಕರಿಗೆ ಕೂತುಹಲವಾಗಿದೆ.

ಈ ಪಾರ್ಸೆಲ್ ನಲ್ಲಿ, ಕೊಳೆತ ಟೊಮೆಟೊ ಮತ್ತು ಕಬ್ಬಿಣದ ತುಂಡುಗಳಂತಹ ವಿಲಕ್ಷಣ ವಸ್ತುಗಳು ಮತ್ತು ಇತರ ಕೆಲವು ವಸ್ತುಗಳು ಇದ್ದವು ಎಂದು ಹೇಳಲಾಗಿದೆ. ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಮಾರ್ಚ್ 4 ರಂದು ಅಧಿಕೃತ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ತನಿಖೆ ಆರಂಭಿಸಿದರು. ಆ ಪಾರ್ಸೆಲ್‌ನಲ್ಲಿ ಟೂತ್‌ಪೇಸ್ಟ್ ಕವರ್, ಕೊಳೆಯುತ್ತಿರುವ ಹೂವಿನ ಮಾಲೆಗಳು, ಕೊಳೆತ ಟೊಮೆಟೊಗಳು, ಕಬ್ಬಿಣದ ತುಂಡುಗಳು ಮತ್ತು ಅಶ್ಲೀಲ ಛಾಯಾಚಿತ್ರಗಳು ಇದ್ದವು ಎಂದು ಪಿಟಿಐ ಸುದ್ದಿ ಸಂಸ್ಥೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸ್ಥಳೀಯ ಮೂಲಗಳಿಂದ ಸಂಗ್ರಹಿಸಿದ ನಂತರ, ಪೊಲೀಸರು ಮಡಿವಾಳದ ದೇವಸ್ಥಾನದ ಬಳಿ ಈ ಪಾರ್ಸೆಲ್ ಇಟ್ಟ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನು ಪೊಲೀಸ್ ವಿಚಾರಣೆ ವೇಳೆ ಈ ವ್ಯಕ್ತಿ ಹೇಳಿರುವ ಹೇಳಿಕೆಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಈ ವ್ಯಕ್ತಿ, ತನಗೆ ಯಾವುದೇ ದುರುದ್ದೇಶಪೂರಿತ ಉದ್ದೇಶವಿಲ್ಲ ಮತ್ತು ಪಾರ್ಸೆಲ್ “ಅಹಿತಕರ ಘಟನೆಗಳನ್ನು” ತಡೆಗಟ್ಟುವ ಉದ್ದೇಶದ ಭಾಗವಾಗಿದೆ ಎಂದು ಹೇಳಿದ್ದಾನೆ. ತಾನು ಇತರ ವಿಮಾನ ನಿಲ್ದಾಣಗಳಿಗೆ ಇದೆ ರೀತಿಯ ಪಾರ್ಸೆಲ್‌ಗಳನ್ನು ಕಳುಹಿಸಿದ್ದಾಗಿ ಪೊಲೀಸರು ಮುಂದೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ವರದಿ ನೀಡಲು ಮಹೇಶ್ವರ ರಾವ್ ಸೂಚನೆ

ಅವನು ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದ. ಯಾವುದೇ ರೀತಿಯ ತೊಂದರೆ ಸೃಷ್ಟಿಸುವ ದುರುದ್ದೇಶ ತನಗೆ ಇಲ್ಲ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ಮುಂದಿನ ಕ್ರಮಗಳನ್ನು ಅವರ ವೈದ್ಯಕೀಯ ಪರೀಕ್ಷೆಯ ವರದಿಯ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *