Headlines

ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ

ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ

ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ

ಕಾಮಕಾಂಡ ಗುರೂಜಿಗೆ ಹೊಸ ತಲೆನೋವು, 2022ರಲ್ಲಿ ನಡೆದ ಆ ಘಟನೆ ಮರುತನಿಖೆ, ಜೈಲು ಸೇರಿರುವ ನಕಲಿ ಗುರೂಜಿ ಅಶೋಕ್ ಖಾರತ್‌ಗೆ ಹಳೇ ಪ್ರಕರಣಗಳು ಆತಂಕ ಹೆಚ್ಚಿಸಿದೆ. ಇದೀಗ 2022ರ ಘಟನೆ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

100ಕ್ಕೂ ಹೆಚ್ಚು ಮಹಿಳೆಯನ್ನು ಪೂಜೆ, ಆಧ್ಯಾತ್ಮದ ಹೆಸರಿನಲ್ಲಿ ಬಳಸಿಕೊಂಡ ಕಳ್ಳ ಗುರೂಜಿ ಅಶೋಕ್ ಖಾರತ್ ಈಗ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ರಾಜಕಾರಣಿಗಳು, ಸಚಿವರು, ಅಧಿಕಾರಿಗಳು, ಪೊಲೀಸರು ಎಲ್ಲರ ಸಂಪರ್ಕದಲ್ಲಿದ್ದ ಶ್ರೀಮಂತ ಸ್ವಯಂ ಘೋಷಿತ ದೇವಮಾನವ ಅಶೋಕ್ ಖಾರತ್‍‌ಗೆ ದಿನದಿಂದ ದಿನಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ಇದೀಗ ಹೊಸ ತಲೆನೋವು ಹೆಚ್ಚಿದೆ.

ಮಹಿಳೆಯ ಮೇಲೆ ಅತ್ಯಾ**ರ, ಆಧ್ಯಾತ್ಮ ಹೆಸರಿನಲ್ಲಿ ವಂಚನೆ, ಸುಲಿಗೆ ಮಾಡಿದ ಪ್ರಕರಣಗಳು ಈಗಾಗಲೇ ಅಶೋಕ್ ಖಾರತ್ ಮೇಲೆ ದಾಖಲಾಗಿದೆ. ಅಶೋಕ್ ಖಾರತ್ ಅರೆಸ್ಟ್ ಬಳಿಕ ಇದೀಗ 2022ರಲ್ಲಿ ನಡೆದ ಆತ್ಮ**ತ್ಯೆ ಪ್ರಕರಣವನ್ನು ಮರು ತನಿಖೆ ಮಾಡಲು ಎಸ್ಐಟಿ ಪೊಲೀಸರು ಮುಂದಾಗಿದ್ದಾರೆ. 37 ವರ್ಷದ ವಿಕಾಸ್ ರಾಮದಾಸ್ ದಿವಟೆ ಪ್ರಕರಣ ಇದೀಗ ಕೋಲಾಹಲ ಸೃಷ್ಟಿಸಿದೆ. ಈ ಪ್ರಕರಣ ಕಳ್ಳ ಗುರು ಅಶೋಕ್ ಖಾರತ್ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಿಸಲಿದೆ.

ವಿಕಾಸ್ ರಾಮದಾಸ್ ಬರೆದ ಡೆತ್‌ನೋಟ್‌ನಲ್ಲಿ ಅಶೋಕ್ ಖಾರತ್ ಹೆಸರು ಉಲ್ಲೇಖಿಸಿದ್ದರು. ತನ್ನ ಸಾವಿಗೆ ನೇರ ಕಾರಣ ಎಂದು ಬರೆದಿದ್ದರು. ಇದರ ಜೊತೆಗೆ ತನ್ನ ಅತ್ತೆ ಮಾವ ಕೂಡ ಸಾವಿಗೆ ಕಾರಣ ಎಂದಿದ್ದರು. ತನಿಖೆಯಲ್ಲೂ ಅಶೋಕ್ ಖಾರತ್ ವಿರುದ್ದ ಹಲವು ಸಾಕ್ಷ್ಯಗಳು ಸಿಕ್ಕಿತ್ತು. ಆದರೆ ಪ್ರಭಾವ ಬಳಸಿದ ಅಶೋಕ್ ಖಾರಟ್ ತನ್ನ ಹೆಸರು ಚಾರ್ಜ್‌ಶೀಟ್‌ನಿಂದ ತೆಗೆದು ಹಾಕಿದ್ದರು.

2022ರ ರಾಮದಾಸ್ ಕೇಸ್ ತನಿಖೆ ನಡೆಯಲಿದೆ. ಇದರಲ್ಲಿ ಅಶೋಕ್ ಖಾರತ್ ಪಾತ್ರದ ಬಗ್ಗೆ ತನಿಖೆ ನಡೆಯಲಿದೆ. ಇದೇ ವೇಳೆ ಎಸ್ಐಟಿ ಪೊಲೀಸರು, ಅಶೋಕ್ ಖಾರತ್‌ನಿಂದ ಸಮಸ್ಯೆ ಎದುರಿಸಿದವರು, ತೊಂದರೆಗೊಳಗಾದವರು, ಯಾವುದೇ ರೀತಿಯಲ್ಲಿ ನೋವುಂಡವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ.

ಅಶೋಕ್ ಖಾರತ್ ಬಳಿ ಬರುತ್ತಿದ್ದ ಬಹುತೇಕ ಮಹಿಳೆಯರ ಮೇಲೆ ಅತ್ಯಾ**ರ ಎಸಗಿದ್ದಾನೆ. ಪ್ರಸಾದ ಹೆಸರಿನಲ್ಲಿ ವಯಾಗ್ರ ನೀಡಿ ಮಹಿಳೆಯರ ಬಳಸಿಕೊಳ್ಳುತ್ತಿದೆ. ಕಚೇರಿಯಲ್ಲೇ ಮಹಿಳೆಯರ ಗಂಡಂದಿರನ್ನು ಹೊರಗೆ ಕೂರಿಸಿ ಒಳಗೆ ಮಹಿಳೆಯರ ಜೊತೆ ಚಕ್ಕಂದ ಆಡುತ್ತಿದ್ದ. ಹಲವು ಯುವತಿಯರು ಈತನ ಮೋಸದಾಟದಲ್ಲಿ ಬಲಿಪಶುಗಳಾಗಿದ್ದಾರೆ. ಈ ಪೈಕಿ ತಮ್ಮ ಸಂಸಾರವೇ ಒಡೆದು ಹೋಗಲಿದೆ ಎಂದು ಅಂಜಿ ಹಲವರು ಮೌನಕ್ಕೆ ಜಾರಿದ್ದಾರೆ.

ಸಂಸಾರಕ್ಕೆ ಅಂಜಿ ಹಲವರು ಮೌನ

Source link

Leave a Reply

Your email address will not be published. Required fields are marked *