
ರಿಕ್ಕಿ ರೈ ಅವರು ದೆಹಲಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದರು. ಬಳಿಕ ಈ ಕಾರಿಗೆ ಕರ್ನಾಟಕದ ನೋಂದಣಿ ಸಂಖ್ಯೆ ಪಡೆಯಲು ಆರ್‌ಟಿಒ (RTO) ಮೂಲಕ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಿ ‘KA 05 NR 0009’ ಎಂಬ ಫ್ಯಾನ್ಸಿ ನಂಬರ್ ಅನ್ನು ಕಾಯ್ದಿರಿಸಿದ್ದರು. ಆದರೆ, ಈ ನಂಬರ್ ಅನ್ನು ಅಧಿಕೃತವಾಗಿ ಕಾರಿಗೆ ರಿಜಿಸ್ಟರ್ ಮಾಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಲಿಲ್ಲ.
ಆರ್‌ಟಿಒ ದಾಖಲೆಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕೃತವಾಗಿ ನೋಂದಣಿಯಾಗಿಲ್ಲದಿದ್ದರೂ, ರಿಕ್ಕಿ ರೈ ಅವರು ಇದೇ ನಂಬರ್ ಪ್ಲೇಟ್ ಅನ್ನು ಕಾರಿಗೆ ಅಳವಡಿಸಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಇದು ಕಾನೂನಿನ ಪ್ರಕಾರ ವಂಚನೆ ಮತ್ತು ನಿಯಮಬಾಹಿರ ಕೃತ್ಯವಾಗಿದೆ.