ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ 5 ನಗರ ಪಾಲಿಕೆಗಳಿಗೆ ಕೊನೆಗೂ ಹೊಸ ಲೋಗೋ ಅನಾವರಣಗೊಳಿಸಲಾಗಿದೆ.
ಇತ್ತೀಚೆಗೆ 2026-27ರ ಸಾಲಿನ ಬಜೆಟ್ ಮಂಡನೆ ಮಾಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ 5 ನಗರ ಪಾಲಿಕೆಗಳ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಖಡ್ಗ ಹಿಡಿದು ನಿಂತಿರುವ ಕೆಂಪೇಗೌಡರ ಚಿತ್ರ ಲೋಗೋದ ಪ್ರಮುಖ ಆಕರ್ಷಣೆ.
ಬೆಂಗಳೂರಿನ ಪರಂಪರೆ ಮತ್ತು ವೈಭವವನ್ನು ಪ್ರತಿಬಿಂಬಿಸುವ ಲೋಗೋವನ್ನು ಹೊಸ ರೀತಿಯಲ್ಲಿ ರೂಪಿಸಲಾಗಿದೆ. ಬಿಬಿಎಂಪಿ ಚಿಹ್ನೆಯಲ್ಲಿದ್ದ ಕೆಂಪೇಗೌಡರ ಗೋಪುರವನ್ನು ಇಲ್ಲಿಯೂ ಬಳಸಲಾಗಿದೆ, ಕೊಂಚ ಹೊಸ ಸ್ಪರ್ಶ ನೀಡಲಾಗಿದೆ.
ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ಎಲ್ಲಾ ಪಾಲಿಕೆಗಳ ಲೋಗೋದಲ್ಲಿ ಕೆಂಪೇಗೌಡರ ಗೋಪುರವಿದ್ದು, ಪ್ರತ್ಯೇಕ ಬಣ್ಣಗಳಿವೆ. ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಇನ್ನು ಲೋಗೋದ ಪ್ರತಿಯೊಂದು ಬಣ್ಣಗಳು ಗಮನ ಸೆಳೆಯುವಂತಿವೆ. ಎಲ್ಲಾ ಪಾಲಿಕೆಗಳ ಲೋಗೋದಲ್ಲಿ ಕೆಂಪೇಗೌಡರ ಗೋಪುರವಿದ್ದು, ಪ್ರತ್ಯೇಕ ಬಣ್ಣಗಳಿವೆ.
ನಗರ ಪಾಲಿಕೆಗಳ ಹೆಸರನ್ನು ವೃತ್ತಾಕಾರದಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳ ಲೋಗೋವನ್ನು ಚಿತ್ರಕಲಾ ಪರಿಷತ್ತಿನಿಂದ ಸಿದ್ಧಪಡಿಸಲಾಗಿದೆ.
ಮಾರ್ಚ್ 20 ರಂದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಜಿಬಿಎ ಸಭೆಯ ಲೋಗೋವನ್ನು ಅಂತಿಮಗೊಳಿಸಲಾಯಿತು.






