Headlines

ಚಿತ್ರದುರ್ಗ: ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ! | Chitradurga Clash Family Dispute Over Love Marriage Turns Violent In Bharamasagara Village Gdp

ಚಿತ್ರದುರ್ಗ: ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ! | Chitradurga Clash Family Dispute Over Love Marriage Turns Violent In Bharamasagara Village Gdp



ಚಿತ್ರದುರ್ಗ: ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ! | Chitradurga Clash Family Dispute Over Love Marriage Turns Violent In Bharamasagara Village Gdp

ಚಿತ್ರದುರ್ಗದ ಭರಮಸಾಗರದಲ್ಲಿ ಪ್ರೇಮ ವಿವಾಹದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ರಾಜಿ ಸಂಧಾನವು ಗುಂಪು ಘರ್ಷಣೆಗೆ ತಿರುಗಿದೆ. ಈ ಗಲಾಟೆಯಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ತೀವ್ರ ಸ್ವರೂಪ ಪಡೆದಿದೆ.

ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಗ್ರಾಮದಲ್ಲಿ ಪ್ರೇಮ ವಿವಾಹದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ತೀವ್ರ ಗಲಾಟೆ ಉಂಟಾಗಿ, ಗುಂಪು ಘರ್ಷಣೆಗೆ ತಿರುಗಿದ ಘಟನೆ ನಡೆದಿದೆ. ಈ ಪ್ರಕರಣ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ನಿವಾಸಿಯಾದ ಭಾವನಾ ಹಾಗೂ ಬೇವಿನಹಳ್ಳಿಯ ತೀರ್ಥೇಶ್ವರ ನಾಯ್ಕ್ ಪ್ರೀತಿಸುತ್ತಿದ್ದರು. ಅಸಲಿಗೆ ಭಾವನಾ ತೀರ್ಥೇಶ್ವರ ನಾಯ್ಕ್ ಗೆ ಅತ್ತೆ ಮಗಳೇ ಆಗಬೇಕು. ಪ್ರೀತಿಸಿದ ಬಳಿಕ ಇಬ್ಬರೂ ವಿರೋಧ ಇದ್ದ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿದ್ದಾರೆ. ಈ ವಿವಾಹಕ್ಕೆ ಭಾವನಾ ಅವರ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದುವರೆಗೂ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.

ಫೆಬ್ರವರಿ 8ರಂದು ತೀರ್ಥೇಶ್ವರ ಮತ್ತು ಭಾವನಾ ರಿಜಿಸ್ಟರ್ ಮದುವೆಯಾಗಿದ್ದರೂ, ಈ ಸಂಬಂಧದ ಬಗ್ಗೆ ಭಾವನಾ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ತೀರ್ಥೇಶ್ವರ ನಾಯ್ಕ್ ವಿರುದ್ಧ ಮತಾಂತರದ ಆರೋಪವೂ ಕೇಳಿಬಂದಿದ್ದು, ಇದರಿಂದ ಎರಡೂ ಕುಟುಂಬಗಳ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿತ್ತು.

ರಾಜಿ ಸಂಧಾನದ ಹೆಸರಿನಲ್ಲಿ ಹಲ್ಲೆ ಆರೋಪ

ಈ ವಿವಾದವನ್ನು ಬಗೆಹರಿಸಲು ಎರಡೂ ಕುಟುಂಬಸ್ಥರನ್ನು ರಾಜಿ ಸಂಧಾನಕ್ಕೆ ಕರೆಸಲಾಗಿತ್ತು. ಆದರೆ ಸಂಧಾನದ ವೇಳೆ ವಾಗ್ವಾದ ಉಂಟಾಗಿ, ಅದು ತೀವ್ರ ಗಲಾಟೆಗೆ ತಿರುಗಿದೆ. ಈ ವೇಳೆ ಭಾವನಾ ಅವರ ದೊಡ್ಡಪ್ಪ ಮಲ್ಲೇಶ ನಾಯ್ಕ್ ಸೇರಿದಂತೆ ಕೆಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ಗಾಯಗೊಂಡ ಮಲ್ಲೇಶ ನಾಯ್ಕ್ ಸೇರಿದಂತೆ ಮೂವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಸ್ಪರ ಆರೋಪ-ಪ್ರತ್ಯಾರೋಪ

ಇನ್ನೊಂದೆಡೆ, ತೀರ್ಥೇಶ್ವರ ನಾಯ್ಕ್ ಹಾಗೂ ಅವರ ಕುಟುಂಬದವರ ಮೇಲೂ ಹಲ್ಲೆ ನಡೆದಿರುವುದಾಗಿ ಪ್ರತಿಯಾಗಿ ಆರೋಪಿಸಲಾಗಿದೆ. ಎರಡೂ ಕಡೆಯವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದಿದೆ. ಈ ಘರ್ಷಣೆಯ ವೇಳೆ ತೀರ್ಥೇಶ್ವರ ನಾಯ್ಕ್ ಹಲ್ಲೆ ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದ್ದು, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಭರಮಸಾಗರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪೊಲೀಸರು ಎರಡೂ ಕುಟುಂಬಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *