
ದೆಹಲಿ, ಏಪ್ರಿಲ್ 03: ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯ ಎಂದರೆ ಉದ್ಯೋಗಿಗಳಿಗೆ ಗುರಿ ಮುಗಿಸುವ ಒತ್ತಡವಿರುತ್ತದೆ. ಆದರೆ ಬಾಸ್ ದೆಹಲಿಯ ಈ ಏಜೆನ್ಸಿ ತನ್ನ ಉದ್ಯೋಗಿಗಳಿಗೆ ಅಚ್ಚರಿಯ ಮತ್ತು ಖುಷಿಯ ಸುದ್ದಿಯನ್ನು ನೀಡಿದೆ. ಕಳೆದ ಹಣಕಾಸು ವರ್ಷದ ಕಂಪನಿಯು ಅದ್ಭುತ ಸಾಧನೆ ಮಾಡಿರುವ, ಎಲ್ಲಾ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸವನ್ನು ಉಡುಗೊರೆಯಾಗಿ ನೀಡಲಾಗಿದೆ. “ಕಳೆದ ಹಣಕಾಸು ವರ್ಷ ನಮಗೆ ಅದ್ಭುತವಾಗಿದೆ. ನಮ್ಮ ತಂಡದ ಕಠಿಣ ಪರಿಶ್ರಮಕ್ಕೆ ಪ್ರತಿಫಲವಾಗಿ ಎಲ್ಲರಿಗೂ 4 ದಿನಗಳ ಗೋವಾ ಪ್ರವಾಸವನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಎಲ್ಲರೂ ರಿಲ್ಯಾಕ್ಸ್ ಆಗಿ, ಮನಸ್ಸನ್ನು ರಿಸೆಟ್ ಮಾಡಿಕೊಂಡು ಮತ್ತೆ ಹೊಸ ಹುರುಪಿನಿಂದ ಕೆಲಸ ಮುಂದುವರಿಸೋಣ” ಎಂದು ಏಜೆನ್ಸಿ ಅಧ್ಯಕ್ಷರು ತಿಳಿಸಿದ್ದಾರೆ. ಕಂಪನಿಯ ಈ ನಿರ್ಧಾರಕ್ಕೆ ಉದ್ಯೋಗಿಗಳು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ. “ಇಂತಹ ಬಾಸ್ ಎಲ್ಲರಿಗೂ ಸಿಗಲಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ