ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು

ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು

ಏನಿಲ್ಲ, ಏನಿಲ್ಲ ಎನ್ನುತ್ತಲೇ ವೇದಿಕೆ ಮೇಲೆ ತಗ್ಲಾಕ್ಕೊಂಡ Bigg Boss ಸೂರಜ್​- ರಾಶಿಕಾ ಶೆಟ್ಟಿ: ಆಗಿದ್ದೇನು

ಬಿಗ್​ಬಾಸ್​ 12ರ ಕ್ಯೂಟ್ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ತಮ್ಮಿಬ್ಬರ ನಡುವೆ ಸ್ನೇಹವಷ್ಟೇ ಇದೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ‘ಗಿಚ್ಚಿ ಗಿಲಿಗಿಲಿ ಜ್ಯೂನಿಯರ್’ ಶೋನಲ್ಲಿ ನಿರೂಪಕಿ ಅನುಪಮಾ ಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಇಬ್ಬರೂ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ.

ಬಿಗ್​ಬಾಸ್​ 12 (Bigg Boss 12)ರ ಕ್ಯೂಟ್​ ಜೋಡಿಗಳಲ್ಲಿ ಒಂದಾಗಿದ್ದು ಸೂರಜ್​ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಜೋಡಿ. ರಾಶಿಕಾ ಶೆಟ್ಟಿ ಅವರು, ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದೇ ಸೂರಜ್​ ಸಿಂಗ್​ ಅವರ ಜೊತೆಗಿನ ಆತ್ಮೀಯ ಒಡನಾಟದಿಂದ. ಸೂರಜ್​ ಅವರು ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಾಗ ಈ ಮನೆಯ ಸುಂದರಿಗೆ ಗುಲಾಬಿ ಕೊಡಬೇಕು ಎಂದಾಗ ಅವರು ಅದನ್ನು ಕೊಟ್ಟಿದ್ದು ರಾಶಿಕಾ ಅವರಿಗೆ.

ಅಲ್ಲಿಂದಲೇ ಅವರ ಸ್ನೇಹ ಶುರುವಾಗಿತ್ತು. ಒಂದು ಹಂತದಲ್ಲಿ ಬಿಗ್​ಬಾಸ್​ ವೀಕ್ಷಕರಿಗೆ ರಾಶಿಕಾ ಶೆಟ್ಟಿ ಅವರೇ ಸೂರಜ್​ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಎನ್ನಿಸಿದ್ದು ಉಂಟು. ಅವರ ಜೊತೆಯಲ್ಲಿಯೇ ಇರುವುದು, ಅವರ ಬಳಿ ಮಾತ್ರ ಮಾತನಾಡುವುದು… ಇಂಥ ಘಟನೆಗಳು ಹಲವಾರು ನಡೆದಿದ್ದವು. ಆ ಬಳಿಕ ಸೂರಜ್​ ಅವರು ಎಲಿಮಿನೇಟ್​ ಆಗಿ ಹೊರಕ್ಕೆ ಬಂದಾಗ, ರಾಶಿಕಾ ಶೆಟ್ಟಿ ಬಿಕ್ಕಿಬಿಕ್ಕಿ ಅತ್ತಿದ್ದರಿಂದಲೂ ಇವರಿಬ್ಬರ ನಡುವೆ ಸಮ್​ಥಿಂಗ್​ ಇದೆ ಎಂದೇ ಹೇಳಲಾಗುತ್ತಿತ್ತು. ಹೊರಗೆ ಬಂದ ಮೇಲೂ ಈ ಜೋಡಿಗೆ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಆದರೆ ಇದುವರೆಗೂ ಅವರಿಬ್ಬರೂ, ನಾವು ಫ್ರೆಂಡ್ಸ್​ ಅಷ್ಟೇ. ನಮ್ಮ ಮಧ್ಯೆ ಏನೂ ಇಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಈ ಮೂಲಕ ತಮ್ಮಿಬ್ಬರನ್ನು ಒಳ್ಳೆಯ ಸ್ನೇಹ ಅಷ್ಟೇ ಅನ್ನೋದನ್ನು ಹೇಳಿದ್ದಾರೆ.

ಆದರೆ, ಇದೀಗ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್​ ಷೋನಲ್ಲಿ ಆ್ಯಂಕರ್​ ಅನುಪಮಾ ಗೌಡ (Anchor Anupama Gowda) ಅವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಇಬ್ಬರೂ ಗಲಿಬಿಲಿಗೊಂಡ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮೊದಲಿಗೆ ಆ್ಯಂಕರ್​ ಅನುಪಮಾ ಗೌಡ ಅವರು ಸೂರಜ್​ ಸಿಂಗ್​ಗೆ ನೀವು ರಾಶಿಕಾ ಅವರ ಬಗ್ಗೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಾ ಎಂದು ಕೇಳಿದಾಗ, ಸೂರಜ್​ ಅವರು ಹೌದು. ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.

ನೀವಿಬ್ಬರೂ ಹೇಗೆ ಫ್ರೆಂಡ್ಸ್​ ಆದ್ರೀ ಎಂದು ಆ್ಯಂಕರ್​ ಅನುಪಮಾ ಅವರು ಕೇಳಿದಾಗ, ರಾಶಿಕಾ ಶೆಟ್ಟಿ, ನಾನು ತುಂಬಾ ಮಾತನಾಡ್ತೇನೆ. ಅವನು ಒಳ್ಳೆಯ ಕೇಳುಗ. ಏನು ಹೇಳಿದ್ರೂ ಹಾಂ ಹೂಂ. ಅಂತಾ ಇರ್ತಾನೆ. ಅವನು ಕೇಳಿಸಿ ಕೊಳ್ತಾ ಇದ್ದಾನೋ, ಇಲ್ವೋ ಗೊತ್ತೇ ಆಗಲ್ಲ ಎಂದಿದ್ದಾರೆ ರಾಶಿಕಾ.

ನಾನು ಹೇಳಿದ್ದು ಅವನಿಗೆ ಅರ್ಥ ಆಯ್ತಾ, ಇಲ್ವಾ ಏನೂ ಅರ್ಥ ಆಗಲ್ಲ ಎಂದು ರಾಶಿಕಾ ಹೇಳಿದಾಗ, ಆ್ಯಂಕರ್​ ಅನುಮಪಾ ಗೌಡ ಅವರು, ನಿಮ್ಮ ಬಗ್ಗೆ ಅವರು ಅರ್ಥ ಮಾಡಿಕೊಂಡಿದ್ದಾರೆ ಅಂತ ನಿಮಗೆ ಹೇಗೆ ಅರ್ಥ ಆಯ್ತು ಎಂದಾಗ ಇಬ್ಬರಿಗೂ ಏನೂ ಮಾತನಾಡಲು ಗೊತ್ತಾಗದೇ ಗಪ್​ಚುಪ್​ ಆಗಿಬಿಟ್ಟರು!

ಕೊನೆಗೆ ಅನುಪಮಾ ಅವರು, ಇಬ್ಬರದ್ದೂ ಮೌನವೇ ಮಾತಾಗಿದೆ ಬಿಡಿ ಎಂದು ತಮಾಷೆ ಮಾಡಿದಾಗಲೂ ಎಲ್ಲರೂ ಗೊಳ್​ ಎಂದು ನಕ್ಕರು. ಆದರೆ ಈ ಜೋಡಿ ಮಾತ್ರ ಏನೂ ಹೇಳಲು ಆಗದೇ ಒಬ್ಬರ ಮುಖ ಒಬ್ಬರು ನೋಡಿ ಕಣ್ಣಿನಲ್ಲಿಯೇ ಮಾತನಾಡಿಕೊಳ್ತಿತ್ತು!

Source link

Leave a Reply

Your email address will not be published. Required fields are marked *