
ಬಾಲಿವುಡ್ನ ಖ್ಯಾತ ನಟ ಆರ್. ಮಾಧವನ್ ಅವರು ಈಗ ‘ಧುರಂಧರ: ದಿ ರಿವೇಂಜ್’ (ಧುರಂಧರ ದಿ ರಿವೆಂಜ್) ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರಕ್ಕೆ ಕಾಣಸಿಗುತ್ತಿರುವ ಪ್ರತಿಕ್ರಿಯೆಯನ್ನು ಖದ್ದಾಗಿ ನೋಡಲು ಮಾಧವನ್ (ಆರ್ ಮಾಧವನ್) ಅವರು ಯಾರಿಗೂ ಗೊತ್ತಾಗದಂತೆ ಮುಂಬೈನ ಚಿತ್ರಮಂದಿರವೊಂದಕ್ಕೆ ಭೇಟಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಅವರು ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.
ಚಿತ್ರಮಂದಿರದಲ್ಲಿ ಸಾಮಾನ್ಯವಾಗಿ ನೋಡಲು ಯಾರಿಗೂ ಗುರುತು ಸಿಗದ ರೀತಿಯಲ್ಲಿ ಕುಳಿತು. ಮಾಧವನ್ ಅವರು ‘ಧುರಂಧರ 2’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಮತ್ತು ಸಿನಿಮಾದ ಸನ್ನಿವೇಶಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಮಾಧವನ್ ಸಂಭ್ರಮಿಸಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಈ ಕುರಿತ ವಿಡಿಯೋವನ್ನು ಪ್ರಸಿದ್ಧ ಚಿತ್ರ ಪ್ರದರ್ಶಕ ಅಕ್ಷಯ್ ರಾಠಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾಧವನ್ ಅವರು ಅತ್ಯಂತ ಸರಳವಾಗಿ ಕುಳಿತು ಸಿನಿಮಾವನ್ನು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಅಕ್ಷಯ್ ರಾಠಿ ಅವರು ಮಾಧವನ್ ಅವರ ಫೋಟೋ ಹಂಚಿಕೊಂಡರು, ಸಿನಿಮಾದಲ್ಲಿನ ಅವರ ಪಾತ್ರವನ್ನು ಉಲ್ಲೇಖಿಸಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ‘ISI ಏನೇ ಪ್ಲಾನ್ ಮಾಡಲಿ, ಅಜಯ್ ಸನ್ಯಾಲ್ (ಮಾಧವನ್ ಪಾತ್ರದ ಹೆಸರು) ಕಣ್ಣು ಸದಾ ಅವರ ಮೇಲೆ ಇರುತ್ತದೆ ಎಂದು ಅವರಿಗೆ ತಿಳಿಸಿ’ ಎಂದು ಕಿಚಾಯಿಸಿದ್ದಾರೆ. ನಂತರ ಮಾಧವನ್ ಅವರೊಂದಿಗೆ ತೆಗೆದ ಫೋಟೋವನ್ನು ಹಂಚಿಕೊಂಡು ತಮ್ಮ ಅನುಭವವನ್ನು ಪ್ರಕಟಿಸಿದರು.
ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್
ಮಾರ್ಚ್ 19 ರಂದು ಬಿಡುಗಡೆ ಆದ ‘ಧುರಂಧರ 2’ ಸಿನಿಮಾಗೆ ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಇದು ‘ಧುರಂಧರ’ ಚಿತ್ರದ ಸೀಕ್ವೆಲ್ ಆಗಿದ್ದು, ಎಲ್ಲ ಕಡೆ ಹೌಸ್‌ಪುಲ್ ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಅಜಯ್ ಸನ್ಯಾಲ್ ಆಗಿ ಆರ್. ಮಾಧವನ್ ನಟಿಸಿದ್ದಾರೆ. ಜನರಿಂದ ಈ ಪರಿ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಅವರು ಖುಷಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.