ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ಮದುವೆ ನಡೆದಿದೆ. ಈ ನಡುವೆ ಸುನಿ ಪಾತ್ರಧಾರಿ ಯಶ್ವಂತ್, ತಮ್ಮ ಮತ್ತು ಮಲ್ಲಿ ಪಾತ್ರಧಾರಿ ಅನ್ವಿತಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಹಾಗೂ ತಮಗೆ ಬಂದ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ.

ಅಮೃತಧಾರೆ ಸೀರಿಯಲ್ (Amrthadhaare Serial) ಸದ್ಯ ಮಲ್ಲಿ ಮತ್ತು ಸಿಂಪಲ್ ಸುನಿ ಮದುವೆಯಾಗಿದೆ. ತನ್ನ ಪತ್ನಿಯ ಹಿಂದೆ, ಆಕೆಗೆ ಮೋಸ ಮಾಡಲು ಸುನಿಲ್ ನನ್ನು ಬಳಸಿಕೊಂಡಿದ್ದ ಜೈದೇವ. ಆದರೆ ಅದು ಆತನಿಗೇ ಉಲ್ಟಾ ಹೊಡೆದಿದ್ದು, ಮದುವೆ ಸುಸೂತ್ರವಾಗಿ ನಡೆದಿದೆ.

ಈ ನಡುವೆಯೇ ಸಿಂಪಲ್ ಸುನಿ ಸೀರಿಯಲ್ ಫ್ಯಾನ್ಸ್ಗೆ ಒಂದು ಬಿಗ್ ಆಫರ್ ಕೊಟ್ಟಿದ್ದಾರೆ. ಶೂಟಿಂಗ್ ಸಮಯದಲ್ಲಿ ಸುನಿಲ್ ಪಾತ್ರಧಾರಿ ಯಶ್ವಂತ್ ಅವರು ತಮ್ಮಂಥ ಗಂಡ ಬೇಕು ಎಂದ್ರೆ ಏನು ಮಾಡಬೇಕು ಎಂದು ತಿಳಿಸಿದ್ದಾರೆ.

ಅಷ್ಟಕ್ಕೂ, ಸೀರಿಯಲ್ನಲ್ಲಿ ಇವರಿಬ್ಬರ ವಯಸ್ಸಲ್ಲಿ ಸುಮಾರು ಐದಾರು ವರ್ಷ ವ್ಯತ್ಯಾಸವಿದೆ. ಅಂದರೆ ಸುನಿಲ್ ಮಲ್ಲಿಗಿಂತ ಐದಾರು ವರ್ಷ ಚಿಕ್ಕವ. ಆದರೆ ರಿಯಲ್ ಲೈಫ್ನಲ್ಲಿ ಕೂಡ ಸುನಿಲ್ ಪಾತ್ರಧಾರಿ ಯಶ್ವಂತ್ ಅವರು, ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಅವರಿಗಿಂತಲೂ ತುಂಬಾ ಚಿಕ್ಕವರು.

ಸೋಷಿಯಲ್ ಮೀಡಿಯಾದಲ್ಲಿ ಯಶ್ವಂತ್ ಸಿಕ್ಕಾಪಟ್ಟೆ ಆ್ಯಕ್ಟೀವ್. ಸೋಷಿಯಲ್ ಮೀಡಿಯಾದ ಮೂಲಕವೇ ಫೇಮಸ್ ಆಗಿರೋ ಅವರಿಗೆ ಅಮೃತಧಾರೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಯಶುಡಾರ್ಲಿಂಗ್ ಎನ್ನುವ ಯುಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್ ಖಾತೆಯನ್ನೂ ಹೊಂದಿದ್ದಾರೆ ಇವರು.

ಇದೀಗ ಅವರು ಶೂಟಿಂಗ್ ನಡುವೆ, ಸದ್ಯ ಮದುವೆ ಮುಗಿದಿದೆ. ನಿಮಗೂ ನನ್ನಂಥ ಗಂಡ ಬೇಕು ಎಂದರೆ ನನ್ನ ಚಾನೆಲ್ subscribe ಮಾಡಿ ನನಗೆ ಮೆಸೇಜ್ ಕಳುಹಿಸಿ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ಮಲ್ಲಿಯನ್ನು ಲವ್ ಮಾಡ್ತಿದ್ದ ಕಾರಣಕ್ಕೆ ಇವರನ್ನು ಆಂಟಿ ಲವರ್ ಎಂದೇ ಕರೆಯುತ್ತಿದ್ದಾರೆ ಫ್ಯಾನ್ಸ್.

ಈ ಹಿಂದೆ, ಸುನಿಲ್ ಮತ್ತು ಮಲ್ಲಿಯ ಜೋಡಿ ನೋಡಿ ಹಲವರು ಕೆಟ್ಟ ಕಮೆಂಟ್ಸ್ ಹಾಕುತ್ತಿರುವ ಬಗ್ಗೆ ಯಶ್ವಂತ್ ನೋವು ತೋಡಿಕೊಂಡಿದ್ದರು. ನನ್ನನ್ನು ಆಂಟಿ ಲವರ್ ಎಂದೆಲ್ಲಾ ಕರೆಯುತ್ತಾರೆ ಎಂದು ಯಶ್ವಂತ್ ಹೇಳಿಕೊಂಡಿದ್ದರು. ಆದರೆ ಆ ಪಾತ್ರ ಹಾಗೆ ಇದೆ. ಸೀರಿಯಲ್ಗೆ ಅದು ಬೇಕು. ಮೊದಲು ಕಮೆಂಟ್ಸ್ ನೋಡಿ ಬೇಸರ ಆಗ್ತಿತ್ತು. ಈಗ ರೂಢಿಯಾಗಿ ಹೋಗಿದೆ ಎಂದಿದ್ದರು.

Source link
ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್ಗೆ Amrthadhaare ಸಿಂಪಲ್ ಸುನಿ ಬಿಗ್ ಆಫರ್