ಮೋದಿ ಮೋಡಿಗೆ ವಿದೇಶಿಗರು ಫಿದಾ, ಚಿತ್ರಗಳಲ್ಲಿ ಪುದುಚೇರಿ ರೋಡ್‌ಶೋದ ವಿಶೇಷ ಕ್ಷಣಗಳು, ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಪ್ರಧಾನಿ ಮೋದಿಗೆ ವಿದೇಶಿಗರು ಭರ್ಜರಿ ಸ್ವಾಗತ ನೀಡಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಭಾರಿ ಪ್ರಚಾರ ನಡೆಸುತ್ತಿದೆ. ಇಂದು ಮೋದಿ ರೋಡ್ ಶೋಗೆ ಕಿಕ್ಕಿರಿದು ಜನ ಸೇರಿದ್ದರು. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸೇರಿದೆತಂತೆ ಪುದುಚೇರಿ ಜನತೆ ಮೋದಿಗೆ ಸ್ವಾಗತ ನೀಡಿದ್ದಾರೆ.

ಪುದುಚೇರಿಯಲ್ಲಿ ವಿದೇಶಿ ಪ್ರವಾಸಿಗರು ಸಾಮಾನ್ಯ. ಈ ಬಾರಿ ಮೋದಿ ಚುನಾವಣಾ ಪ್ರಚಾರದ ವೇಳೆ ಜನರ ನಡುವೆ ವಿದೇಶಿಗರು ಮೋದಿಯನ್ನು ನೋಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಮೋದಿಯತ್ತ ಕೈಬೀಸಿ ಸ್ವಾಗತ ನೀಡಿದ್ದಾರೆ. ಹಲವು ವಿದೇಶಿಗರು ಈ ರೋಡ್‌ಶೋದಲ್ಲಿ ಹಲವೆಡೆ ನಿಂತು ಮೋದಿಯತ್ತ ಕೈಬೀಸಿದ್ದಾರೆ.

ಪುದುಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 1.7 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ಇಡೀ ರೋಡ್ ಶೋದಲ್ಲಿ ಕಿಕ್ಕಿರಿದು ಜನರು ಸೇರಿದ್ದರು. ಇದರ ನಡುವೆ ಹಲೆವೆಡೆ ವಿದೇಶಿಗರು ಕಾಣಿಸಿಕೊಂಡಿದ್ದಾರೆ. ಹಲವು ವಿದೇಶಿಗರು ತಮ್ಮ ಮೊಬೈಲ್ ಫೋನ್ ಮೂಲಕ, ಕ್ಯಾಮೆರಾ ಮೂಲಕ ಮೋದಿ ರೋಡ್ ಶೋ ರೆಕಾರ್ಡ್ ಮಾಡಿದ್ದಾರೆ.

ಅಜಂತಾ ಸಿಗ್ನಲ್ ಜಂಕ್ಷನ್‌ನಿಂದ ಅಣ್ಣಾ ಸ್ಕ್ವೇರ್ ವರೆಗೆ ಮೋದಿ ರೋಡ್ ಶೋ ನಡೆಸಿದ್ದಾರೆ. ಮೋದಿ ಭಾವಚಿತ್ರ, ಬಿಜೆಪಿ ಧ್ವಜ ಬಣ್ಣ ಸಂಪೂರ್ಣ ಬಳಿದುಕೊಂಡು ಜನರು ರೋಡ್ ಶೋಗೆ ಆಗಮಿಸಿದ್ದಾರೆ. ಮೋದಿಯತ್ತ ಕೈಬೀಸಿ ಸಂಭ್ರಮಿಸಿದ್ದಾರೆ. ಈ ವಿಶೇಷ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಎಪ್ರಿಲ್ 9ಕ್ಕೆ ಚುನಾವಣೆ ನಡೆಯಲಿದೆ. ಇಂದು ರೋಡ್ ಶೋ ಬಳಿಕ ಪುದುಚೇರಿಯಲ್ಲಿ ಪ್ರಧಾನಿ ಮೋದಿ ಭಾರಿ ಜನಸ್ತೋಮದ ಸಮಾವೇಶ ಉದ್ದೇಶಿ ಮಾತಾಡಿದ್ದಾರೆ.

ಎಪ್ರಿಲ್ 9ಕ್ಕೆ ಚುನಾವಣೆ

Source link
ಮೋದಿ ಮೋಡಿಗೆ ವಿದೇಶಿಗರು ಫಿದಾ, ಚಿತ್ರಗಳಲ್ಲಿ ಪುದುಚೇರಿ ರೋಡ್‌ಶೋದ ವಿಶೇಷ ಕ್ಷಣಗಳು