ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವು ‘ಸ್ವಚ್ಛ ಪಂಜಾಬ್’ ಯೋಜನೆಯಡಿ ಎಮ್ಮೆ ಸಾಕಿದವರಿಂದ ‘ಸೆಗಣಿ ಕರ’ ವಸೂಲಿ ಮಾಡಲು ಮುಂದಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಸಂಗ್ರಹಿಸುವ ಈ ಯೋಜನೆಗೆ, ಈಗಾಗಲೇ ಸಂಕಷ್ಟದಲ್ಲಿರುವ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇಸ್ಲಾಮಾಬಾದ್: ಇಷ್ಟು ಕಾಲ ಹಣಕ್ಕಾಗಿ ವಿದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳ ಬಾಗಿಲು ಬಡಿಯುತ್ತಿದ್ದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರವೀಗ ಇದೀಗ ತನ್ನ ಜನರ ಜೇಬಿಂದ ಹಣ ಕಸಿದು ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ, ಎಮ್ಮೆಗಳನ್ನು ಸಾಕಿದವರಿಂದ ‘ಸೆಗಣಿ ವಸೂಲಿ’ ಮಾಡುವುದಾಗಿ ಘೋಷಿಸಿದೆ.

‘ಸ್ವಚ್ಛ ಪಂಜಾಬ್’ ಯೋಜನೆಯ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಜೈವಿಕ ಅನಿಲ ಉತ್ಪಾದನೆಗೆ ಹಣ ಒದಗಿಸುವ ಸಲುವಾಗಿ ಪ್ರತಿ ಎಮ್ಮೆಗೆ ದಿನಕ್ಕೆ 30 ರು. ವಸೂಲಿ ಮಾಡುವ ಚಿಂತನೆಯಲ್ಲಿ ಅಧಿಕಾರಿಗಳಿದ್ದಾರೆ. ಇದರ ಭಾಗವಾಗಿ ಈಗಾಲೇ 168 ಜಾನುವಾರು ಸಾಕಾಣಿಕೆ ಪ್ರದೇಶಗಳನ್ನು ಮರಿಯಂ ನವಾಜ್‌ರ ಸರ್ಕಾರ ಗುರುತಿಸಿದೆ ಎನ್ನಲಾಗಿದೆ.

ನಗರದ ಸ್ವಚ್ಛತೆ ಮತ್ತು ಜೈವಿಕ ಅನಿಲ ಬಳಕೆ ಉತ್ತೇಹಿಸುವ ಉದ್ದೇಶ ಇದೆ ಎಂದು ಸರ್ಕಾರ ಹೇಳುತ್ತಿದ್ದರೂ, ಈ ಪ್ರಸ್ತಾವಿತ ಕ್ರಮಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಅತ್ತ ಬೆಳೆ ನಷ್ಟ, ದುಬಾರಿ ಮೇವಿನಂತಹ ಸಮಸ್ಯೆಗಳಿಂದ ಬಳಲುತ್ತಿರುವ ರೈತರಿಗೆ ಈ ಹೊಸ ತೆರಿಗೆಯಿಂದ ಭಾರೀ ಹೊರೆಯಾಗಲಿದೆ.

ಇದನ್ನೂ ಓದಿ: ಚಪ್ಪಲಿ ಬಿಟ್ರು ಬಂದ್ರೆ ಮಾತ್ರ ಚಿಕಿತ್ಸೆ? ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಿತ್ರ ನಿಯಮ

‘ಸರ್ಕಾರಕ್ಕೆ ಆದಾಯ ತರುತ್ತಿದ್ದ ಮೂಲಗಳು ಬರಿದಾಗಿರುವ ಕಾರಣ ಆಡಳಿತ ನಡೆಸಲು ತಗುಲುವ ವೆಚ್ಚವನ್ನು ಈ ರೀತಿ ವಸೂಲಿ ಮಾಡಲಾಗುತ್ತಿದೆ. ದೇಶವು ಸೆಗಣಿಯಿಂದಲೂ ಹಣ ಗಳಿಸುವ ಬಗ್ಗೆ ಯೋಚಿಸುವ ಸ್ಥಿತಿಗೆ ಬಂದು ತಲುಪಿದೆ’ ಎಂಬ ಆಕ್ರೋಶವೂ ಕೇಳಿಬರುತ್ತಿದೆ.

ಇದನ್ನೂ ಓದಿ: ಲೀಟರ್ ಡೀಸೆಲ್‌ಗೆ 520 ರೂಪಾಯಿ! ಪಾಕಿಸ್ತಾನದಲ್ಲಿ ಇತಿಹಾಸದಲ್ಲೇ ಕಾಣದ ತೈಲ ದರ ಏರಿಕೆ, ಕಂಗಾಲಾದ ಜನರಿಂದ ಸರ್ಕಾರಕ್ಕೆ ಹಿಡಿಶಾಪ

Source link
ದಿವಾಳಿ ಪಾಕಿಸ್ತಾನದಲ್ಲಿ ಎಮ್ಮೆ ಸಾಕಿದರಿಗೆ ಸೆಗಣಿ ತೆರಿಗೆ ವಸೂಲಿ; ರೈತರು ದಿನಕ್ಕೆ ಎಷ್ಟು ಹಣ ನೀಡಬೇಕು?