West Asia crisis: ಇಂಡಕ್ಷನ್‌ ಸ್ಟವ್‌, ಪಾತ್ರೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ | West Asia Crisis Central Govt To Boost Induction Stove Utensil Production Amid Lpg Supply Concerns Rav

ಕೊಲ್ಲಿ ಯುದ್ಧದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ, ಕೇಂದ್ರ ಸರ್ಕಾರವು ಇಂಡಕ್ಷನ್‌ ಸ್ಟವ್‌ ಅದಕ್ಕೆ ಬೇಕಾದ ಪಾತ್ರೆಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರ ದೇಶದಲ್ಲಿ ವಿದ್ಯುತ್ ಆಧಾರಿತ ಅಡುಗೆ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಕುರಿತು ಚರ್ಚೆ ನಡೆದಿದೆ.

– ಗ್ಯಾಸ್‌ಟ್ರಬಲ್‌ ಹಿನ್ನೆಲೆ, ಕೇಂದ್ರದಿಂದ ಈ ನಿರ್ಧಾರ

ನವದೆಹಲಿ (ಏ.4): ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಗ್ಯಾಸ್‌ ಟ್ರಬಲ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಇರಾನ್‌ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್‌ ಆಧಾರಿತ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ದೇಶದಲ್ಲಿ ಇಂಡಕ್ಷನ್‌ ಕುಕ್ಕರ್‌ಗಳು,ಕಿಟೆಲ್‌ಗಳು, ಪಾತ್ರೆಗಳ ಮಾರಾಟ ಹೆಚ್ಚಾಗಿದೆ.

ಇದರ ನಡುವೆಯೇ ವಿದ್ಯುತ್‌ ಇಲಾಖೆ ಕಾರ್ಯದರ್ಶಿ ಪಂಕಜ್‌ ಅಗರ್ವಾಲ್‌ ಸೇರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಈ ವಿಚಾರವಾಗಿ ಚರ್ಚೆ ನಡೆಸಿದರು. ಇಂಡಕ್ಷನ್‌ ಕುಕ್ಕರ್‌ಗಳು ಹಾಗೂ ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆಯನ್ನು ಯಾವ ರೀತಿ ಹೆಚ್ಚಳ ಮಾಡಬಹುದು ಎಂಬ ಕುರಿತು ಸಮಾಲೋಚನೆ ನಡೆಸಿದರು.

Source link

Leave a Reply

Your email address will not be published. Required fields are marked *