
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ನಡುವಿನ “ಸೋಷಿಯಲ್ ಮೀಡಿಯಾ ವಾರ್” ಹೊಸದೇನಲ್ಲ. ಈ ವ್ಯಂಗ್ಯದ ವಾರ್ ಈ ಬಾರಿ ಕೂಡ ಮುಂದುವರೆದಿದೆ. ಆದರೆ, ಈ ಸಲ ರಾಯುಡು “72 ವರ್ಷಗಳ” ಲೆಕ್ಕಾಚಾರದೊಂದಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಏನಿದು 72 ವರ್ಷಗಳ ಲೆಕ್ಕಚಾರ?
ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಪಟ್ಟದೊಂದಿಗೆ ಕಣಕ್ಕಿಳಿಯುತ್ತಿದೆ. ಈ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಉತ್ತಮ ನಿರೀಕ್ಷೆಯನ್ನು ಸಹ ಮೊದಲ ಪಂದ್ಯದಲ್ಲೇ ಹುಟ್ಟು ಹಾಕಿದ್ದಾರೆ. ಇದಾಗ್ಯೂ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನು ಗೆಲ್ಲುವುದು ಅನುಮಾನ ಅಂಗಡಿ ಅಂಬಾಟಿ ರಾಯುಡು.
ಈ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು “ಆರ್‌ಸಿಬಿ ತನ್ನ ಮೊದಲ ಟ್ರೋಫಿ ಗೆಲ್ಲಲು 18 ವರ್ಷ ತೆಗೆದುಕೊಂಡಿದೆ. ಇದೇ ವೇಗದಲ್ಲಿ ಹೋದರೆ, ಮುಂಬೈ ಇಂಡಿಯನ್ಸ್ ಅಥವಾ ಸಿಎಸ್‌ಕೆ ಮಾಡಿದಂತೆ 5 ಟ್ರೋಫಿಗಳನ್ನು ಗೆಲ್ಲಲು ಆರ್‌ಸಿಬಿಗೆ ಇನ್ನೂ 72 ವರ್ಷಗಳು ಬೇಕಾಗುತ್ತವೆ!” ಎಂದು ವ್ಯಂಗ್ಯವಾಡಿದ್ದಾರೆ.
ಅಂದರೆ ಮೊದಲ ಟ್ರೋಫಿ ಗೆಲ್ಲಲು 18 ವರ್ಷಗಳನ್ನು ಗೆದ್ದಿರುವ ಆರ್ಸಿಬಿ, ಪ್ರತಿ 18 ವರ್ಷಗಳಿಗೊಮ್ಮೆ ಪ್ರಶಸ್ತಿ ಗೆಲ್ಲಬಹುದು ಎಂದು ಕಾಲೆಳೆದಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಂಡಿದೆ ಎಂದು ಲೆಕ್ಕ ಹಾಕಿದೆ.
ಇದಕ್ಕೂ ಮುನ್ನ, ಅಂದರೆ ಕಳೆದ ಸೀಸನ್‌ನಲ್ಲಿ ಅಂಬಾಟಿ ರಾಯುಡು, ಆರ್‌ಸಿಬಿ ಆಟಗಾರರು ತಂಡದ ಗೆಲುವಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ದಾಖಲೆಗಳ ಮೇಲೆ ಗಮನ ಹರಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಜೊತೆಗೆ ಟ್ರೋಫಿ ಗೆಲ್ಲುವ ಮೊದಲೇ ಅತಿಯಾದ ಸಂಭ್ರಮಾಚರಣೆ ಮಾಡುವುದು ಆರ್ಸಿಬಿ ತಂಡಕ್ಕೆ ಮುಳುವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಷ್ಟೇ ಅಲ್ಲದೆ ದೊಡ್ಡ ಪಂದ್ಯಗಳಲ್ಲಿ ಆರ್‌ಸಿಬಿ ಒತ್ತಡಕ್ಕೆ ಒಳಗಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಒತ್ತಡವನ್ನು ನಿಭಾಯಿಸಲು ಬರಲ್ಲ ಎಂದು ಹಿಯಾಳಿಸಿದ್ದರು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದಿದ್ದರೂ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ 5 ಟ್ರೋಫಿಗಳ ಸಾಧನೆಯನ್ನು ಸರಿಗಟ್ಟಲು 72 ವರ್ಷಗಳನ್ನು ತೆಗೆದುಕೊಂಡಿದೆ ಎಂದು ಅಣಕಿಸಿದ್ದಾರೆ.
ರಾಯುಡು ಸಾಧನೆ:
ಅಂಬಾಟಿ ರಾಯುಡು ಅವರು ಇಷ್ಟೊಂದು ಆತ್ಮವಿಶ್ವಾಸದಿಂದ ಮಾತನಾಡಲು ಕಾರಣ ಅವರ ಟ್ರೋಫಿ ದಾಖಲೆ. ಅವರು ಐಎಲ್ ಇತಿಹಾಸದಲ್ಲಿ 6 ಬಾರಿ ಚಾಂಪಿಯನ್ ತಂಡ ಭಾಗವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ತಲಾ 3 ಬಾರಿ ಟ್ರೋಫಿ ಎತ್ತಿ ಹಿಡಿದ್ದರು. ಹೀಗಾಗಿಯೇ ಟ್ರೋಫಿ ವಿಷಯದಲ್ಲಿ ಅಂಬಾಟಿ ರಾಯುಡು ಸಿಬಿಐ ತಂಡವನ್ನು ಅಣಕಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: IPL 2026: CSK ದಾಂಡಿಗರ ಆರ್ಭಟಕ್ಕೆ RCB ದಾಖಲೆ ಧೂಳಿಪಟ
ಇನ್ನು ಅಂಬಾಟಿ ರಾಯುಡು ಅವರ ಈ ವ್ಯಂಗ್ಯ ಆರ್‌ಸಿಬಿ ಅಭಿಮಾನಿಗಳು ಕೆರಳಿಸಿದ್ದರೂ, 2025ರ ಟ್ರೋಫಿ ಗೆಲುವಿನ ನಂತರ ಆರ್‌ಸಿಬಿ ಹೊಸ ಹಾದಿಯಲ್ಲಿದೆ. 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತೆ ಪ್ರಶಸ್ತಿ ಗೆಲ್ಲುವ ಮೂಲಕ ರಾಯುಡು ಅವರ 72 ವರ್ಷಗಳ ಲೆಕ್ಕಾಚಾರವನ್ನು ತಪ್ಪಾಗಿ ನಿರೂಪಿಸುತ್ತದೆಯೇ ಎಂದು ಕಾದು ನೋಡಬೇಕಾಗಿದೆ.