Headlines

IPL 2026: ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್‌- ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Chennai Super Kings Vs Punjab Kings Who Won Yesterdays Ipl Match Kvn

IPL 2026: ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್‌- ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Chennai Super Kings Vs Punjab Kings Who Won Yesterdays Ipl Match Kvn



IPL 2026: ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್‌- ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Chennai Super Kings Vs Punjab Kings Who Won Yesterdays Ipl Match Kvn

ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಸೋತಿದೆ. ಆಯುಶ್ ಮ್ಹಾತ್ರೆ (73) ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ, ಚೆನ್ನೈ ನೀಡಿದ 210 ರನ್‌ಗಳ ಗುರಿಯನ್ನು ಶ್ರೇಯಸ್ ಅಯ್ಯರ್ (50) ನಾಯಕತ್ವದ ಪಂಜಾಬ್ ತಂಡ ಯಶಸ್ವಿಯಾಗಿ ಬೆನ್ನಟ್ಟಿತು. ಇದು ಚೆಪಾಕ್‌ನಲ್ಲಿ ಸಿಎಸ್‌ಕೆಗೆ ಸತತ 6ನೇ ಸೋಲಾಗಿದೆ.

ಚೆನ್ನೈ: 5 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ಬಾರಿ ಐಪಿಎಲ್‌ನಲ್ಲಿ ಸತತ 2ನೇ ಸೋಲನುಭವಿಸಿದೆ. ಕಳೆದ ಬಾರಿ ರನ್ನರ್‌-ಅಪ್‌ ಪಂಜಾಬ್‌ ಕಿಂಗ್ಸ್‌ ವಿರುದ್ಧ ಚೆನ್ನೈ ತಂಡ ಶನಿವಾರ 5 ವಿಕೆಟ್‌ನಿಂದ ಪರಾಭವಗೊಂಡಿತು. ಶ್ರೇಯಸ್‌ ಅಯ್ಯರ್‌ ಪಡೆಗೆ ಇದು 2ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆಪಾಕ್‌ನಲ್ಲಿ ಸಿಎಸ್‌ಕೆ ವಿರುದ್ಧ ಪಂಜಾಬ್‌ಗೆ ಇದು ಸತತ 4ನೇ ಜಯ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡ 5 ವಿಕೆಟ್‌ಗೆ 209 ರನ್‌ ಕಲೆಹಾಕಿತು. ಸಂಜು(7), ಋತುರಾಜ್‌(28) ವಿಫಲರಾದರೂ, ಆಯುಶ್‌ ಮ್ಹಾತ್ರೆ(43 ಎಸೆತಕ್ಕೆ 73) ಅಬ್ಬರದ ಆಟದ ಮೂಲಕ ತಂಡವನ್ನು ಮೇಲೆತ್ತಿದರು. ಶಿವಂ ದುಬೆ 27 ಎಸೆತಕ್ಕೆ 45, ಸರ್ಫರಾಜ್‌ ಖಾನ್‌ 12 ಎಸೆತಕ್ಕೆ 32 ರನ್‌ ಸಿಡಿಸಿ ತಂಡವನ್ನು 200ರ ಗಡಿ ದಾಟಿಸಿದರು. ವೈಶಾಕ್‌ 2 ವಿಕೆಟ್‌ ಕಿತ್ತರು.

ಯಶಸ್ವಿ ಚೇಸ್:

ತಾನು ಗಳಿಸಿದ ದೊಡ್ಡ ಮೊತ್ತವನ್ನು ತನ್ನ ತವರಿನಲ್ಲೇ ರಕ್ಷಿಸಿಕೊಳ್ಳಲು ಚೆನ್ನೈಗೆ ಸಾಧ್ಯವಾಗಲಿಲ್ಲ. ಪ್ರಿಯಾನ್ಶ್‌ ಆರ್ಯ 11 ಎಸೆತಕ್ಕೆ 39 ರನ್‌ ಗಳಿಸಿ ಔಟಾದರೆ, ಪ್ರಭ್‌ಸಿಮ್ರನ್‌ 43, ಕೂಪರ್‌ ಕೊನೊಲಿ 36 ರನ್‌ ಕೊಡುಗೆ ನೀಡಿದರು. ನಾಯಕ ಶ್ರೇಯಸ್‌ ಅಯ್ಯರ್‌ 29 ಎಸೆತಕ್ಕೆ 50 ರನ್‌ ಸಿಡಿಸಿ ತಂಡದ ಗೆಲುವು ತಂದುಕೊಟ್ಟರು. ತಂಡ 18.4 ಓವರ್‌ಗಳಲ್ಲೇ ಜಯ ತನ್ನದಾಗಿಸಿಕೊಂಡಿತು.

ಸ್ಕೋರ್: ಚೆನ್ನೈ 20 ಓವರಲ್ಲಿ 209/5 (ಆಯುಶ್‌ 73, ದುಬೆ ಔಟಾಗದೆ 45, ಸರ್ಫರಾಜ್‌ 32, ವೈಶಾಕ್‌ 2-38), ಪಂಜಾಬ್‌ 18.4 ಓವರಲ್ಲಿ 210/5 (ಶ್ರೇಯಸ್‌ 50, ಪ್ರಭ್‌ಸಿಮ್ರನ್‌ 43, ಪ್ರಿಯಾನ್ಶ್‌ 39, ಕೊನೊಲಿ 36, ಅನ್ಶುಲ್‌ 2-43)

ಪಂದ್ಯಶ್ರೇಷ್ಠ: ಪ್ರಿಯಾನ್ಸ್‌ ಆರ್ಯ

09ನೇ ಬಾರಿ: ಟಿ20 ಕ್ರಿಕೆಟ್‌ನಲ್ಲಿ ಪಂಜಾಬ್‌ 9ನೇ ಬಾರಿ 200+ ರನ್‌ ಚೇಸ್‌ ಮಾಡಿ ಗೆದ್ದಿದೆ. ಇದು ಗರಿಷ್ಠ. ಆಸ್ಟ್ರೇಲಿಯಾ 7 ಬಾರಿ ಈ ಸಾಧನೆ ಮಾಡಿದೆ.

05ನೇ ಬಾರಿ: 200+ ರನ್‌ ಗಳಿಸಿದರೂ ಪಂಜಾಬ್‌ ವಿರುದ್ಧ ಚೆನ್ನೈ ಸೋತಿದ್ದು ಇದು 5ನೇ ಬಾರಿ. ಆಸೀಸ್‌ ವಿರುದ್ಧ ವಿಂಡೀಸ್‌ ಈ ರೀತಿ 4 ಬಾರಿ ಸೋತಿದೆ.

06ನೇ ಸೋಲು: ಚೆನ್ನೈ ತಂಡ ತನ್ನ ತವರು ಮೈದಾನ ಚೆಪಾಕ್‌ನಲ್ಲಿ ಸತತ 6ನೇ ಪಂದ್ಯದಲ್ಲಿ ಸೋಲನುಭವಿಸಿದೆ.



Source link

Leave a Reply

Your email address will not be published. Required fields are marked *