Headlines

ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!

ಸಲೂನ್ ಮಾಲೀಕನಿಂದ ಬ್ಯೂಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್​ನಿಂದ ಅಟ್ಯಾಕ್!


ಸಲೂನ್ ಮಾಲೀಕನಿಂದ ಬ್ಯುಟಿಷಿಯನ್‌ಗೆ ಪ್ರಪೋಸ್? ಮಾಲೀಕನ ಮೇಲೆ ಆಕೆಯ ಪತಿ ಗ್ಯಾಂಗ್ ನಿಂದ ಅಟ್ಯಾಕ್!

ಬೆಂಗಳೂರು, ಏಪ್ರಿಲ್ 4: ಬೆಂಗಳೂರು (ಬೆಂಗಳೂರು) ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ಶುರುವಾದ ಸಣ್ಣ ವಿವಾದವೊಂದು ಇದೀಗ ಭೀಕರ ಮಾರಾಮಾರಿಯಲ್ಲಿ ಅಂತ್ಯವಾಗಿದೆ. ಸಲೂನ್‌ನಲ್ಲಿ ಕೆಲಸ ಮಾಡುತ್ತಿರುವ ಬ್ಯುಟಿಷಿಯನ್‌ಗೆ ಮಾಲೀಕ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಹಾಗೂ ಅದನ್ನು ವಿರೋಧಿಸಿದ ಕೆಲಸದಿಂದ ತೆಗೆದಿದ್ದೇ ಈ ಗಲಾಟೆಗೆ ಮೂಲ ಕಾರಣ.

ಆಲವಹಳ್ಳಿಯ ಸಲೂನ್ ಮಾಲೀಕ ಮೋಹನ್ ಕುಮಾರ್, ತನ್ನಲ್ಲಿ ಕೆಲಸ ಮಾಡುತ್ತಿರುವ ಬ್ಯುಟಿಷಿಯನ್ ಒಬ್ಬರಿಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದಾರೆ. ಆದರೆ ಇದನ್ನು ಆಕೆ ನಿರಾಕರಿಸಿದ್ದರು. ಈ ವಿಚಾರವಾಗಿ ಮನಸ್ತಾಪ ಉಂಟಾಗಿ ಮೋಹನ್ ಕುಮಾರ್ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಬ್ಯೂಟಿಷಿಯನ್ ಪತಿ ಆಕ್ರೋಶಗೊಂಡಿದ್ದರು. ಪತ್ನಿಯನ್ನು ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಆತ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್‌ಗೆ ನುಗ್ಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ದೃಶ್ಯ

ಬ್ಯೂಟಿಷಿಯನ್ ಪತಿ ಮತ್ತು ಆತನ ಬೆಂಬಲಿಗರು ಸಲೂನ್ ಮಾಲೀಕ ಮೋಹನ್ ಕುಮಾರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ. ಗಲಾಟೆ ತಡೆಯಲು ಬಂದ ಮೋಹನ್ ಪತ್ನಿ ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ಹಲ್ಲೆ ನಡೆಸುತ್ತಿದ್ದರು, ಬಂದವರೆಲ್ಲರೂ ಸೇರಿ ಸನ್ನಿಧಾನದಲ್ಲಿ ದಾಂಧಲೆ ನಡೆಸಿದ್ದಾರೆ. ಈ ಇಡೀ ದಾಳಿಯ ದೃಶ್ಯಗಳು ಸಲೂನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಕೇಸ್: ಯುವತಿಯನ್ನು ಮಾಡ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ್ನಾ ಸಮೀರ್?

ಸದ್ಯ ಹಲ್ಲೆಗೊಳಗಾದ ಮೋಹನ್ ಕುಮಾರ್ ಅವರು ಬ್ಯೂಟಿಷಿಯನ್, ಆಕೆಯಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರೋಪಿ, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *