Headlines

ಬೆಂಗಳೂರು: ಸಲೂನ್ ನಲ್ಲಿ ಕೆಲಸಕ್ಕಿದ್ದ ಬ್ಯೂಟಿಷಿಯನ್ ಗೆ ಬಿಸ್ಕೆಟ್ ನೀಡಿ ಮಾಲೀಕ ಪ್ರಫೋಸ್, ಹಿಗ್ಗಾಮುಗ್ಗಾ ಥಳಿತ | Salon Brawl In Aavalahalli Owner Accused Of Proposing To Beautician Husband Assaults With Gang Gdp

ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ, ಮಾಲೀಕನ ಪ್ರಪೋಸಲ್ ನಿರಾಕರಿಸಿದ ಬ್ಯೂಟಿಷಿಯನ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪದ ಮೇಲೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಬ್ಯೂಟಿಷಿಯನ್ ಪತಿ ಮತ್ತು ಆತನ ಸ್ನೇಹಿತರು ಸಲೂನ್ ಮಾಲೀಕ ಹಾಗೂ ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಆವಲಹಳ್ಳಿ ಪ್ರದೇಶದಲ್ಲಿ ಇರುವ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಮಾಲೀಕರು ಪ್ರಪೋಸ್ ಮಾಡಿದರೆಂಬ ಆರೋಪ, ಅದನ್ನು ಒಪ್ಪಿಕೊಳ್ಳದ ಹಿನ್ನೆಲೆ ಕೆಲಸದಿಂದ ತೆಗೆದುಹಾಕಿದರೆಂಬ ವಿವಾದ, ಬಳಿಕ ನಡೆದ ಹಲ್ಲೆ ಎಲ್ಲಾ ಸೇರಿ ಈ ಘಟನೆ ತೀವ್ರ ಕುತೂಹಲ ಮೂಡಿಸಿದೆ.

ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮಾ ಅವರಿಗೆ ಸಲೂನ್ ಮಾಲೀಕ ಮೋಹನ್ ಕುಮಾರ್ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದನೆಂಬ ಮಾತುಗಳು ಕೂಡ ಸ್ಥಳೀಯವಾಗಿ ಹರಿದಾಡುತ್ತಿವೆ. ಆದರೆ, ಈ ಪ್ರಪೋಸಲ್ ಅನ್ನು ಸುಷ್ಮಾ ಒಪ್ಪಿಕೊಳ್ಳಲಿಲ್ಲವೆಂದು ಹೇಳಲಾಗಿದೆ.

ಮನಸ್ಸೋ ಇಚ್ಛೆ ಹಲ್ಲೆ

ಈ ಹಿನ್ನೆಲೆಯಲ್ಲಿ ಸುಷ್ಮಾಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಪರಿಣಾಮವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವಿಚಾರವು ಮತ್ತಷ್ಟು ತೀವ್ರಗೊಂಡು, ಸುಷ್ಮಾ ಪತಿ ಹಾಗೂ ಅವರ ಬೆಂಬಲಿಗರು ಸಲೂನ್‌ಗೆ ಬಂದು ಗಲಾಟೆ ನಡೆಸಿದರೆಂದು ಆರೋಪಿಸಲಾಗಿದೆ. ಸುಷ್ಮಾ ಪತಿ ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್‌ಗೆ ಬಂದು, ಮಾಲೀಕ ಮೋಹನ್ ಕುಮಾರ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದರೆಂದು ತಿಳಿದು ಬಂದಿದೆ. ಗಲಾಟೆ ತಡೆಯಲು ಮುಂದಾದ ಮೋಹನ್ ಕುಮಾರ್ ಅವರ ಪತ್ನಿ ಶ್ರೀಜಾ ಅವರ ಮೇಲೂ ದಾಳಿ ನಡೆದಿದ್ದು, ಕುತ್ತಿಗೆಗೆ ಕೈ ಹಾಕಿ ಹಲ್ಲೆ ಮಾಡಿದರೆಂದು ಆರೋಪಿಸಲಾಗಿದೆ.

ಸಿಸಿಟಿವಿ ಪ್ರಮುಖ ಸಾಕ್ಷಿ

ಸ್ಥಳದಲ್ಲಿದ್ದವರು ತಡೆಯಲು ಪ್ರಯತ್ನಿಸಿದರೂ, ಬಂದ ಗುಂಪಿನವರು ಹಲ್ಲೆ ಮುಂದುವರಿಸಿದರೆಂದು ಹೇಳಲಾಗಿದೆ. ಈ ಹಲ್ಲೆಯ ದೃಶ್ಯಗಳು ಸಲೂನ್‌ನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಪ್ರಮುಖ ಸಾಕ್ಷ್ಯವಾಗಿವೆ. ಘಟನೆ ಬಳಿಕ ಸುಷ್ಮಾ, ಆಕೆಯ ಪತಿ ಹಾಗೂ ಅವರ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಈ ಘಟನೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ, ವೈಯಕ್ತಿಕ ಗೌರವ ಹಾಗೂ ವೃತ್ತಿಪರ ನಡವಳಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

Source link

Leave a Reply

Your email address will not be published. Required fields are marked *