Headlines

ಕಲಬೆರಕೆ ತೊಗರಿಬೇಳೆಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಮನೆಯಲ್ಲಿಯೇ ಅಸಲಿ- ನಕಲಿ ಹೀಗೆ ಕಂಡು ಹಿಡಿಯಿರಿ

ಕಲಬೆರಕೆ ತೊಗರಿಬೇಳೆಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಮನೆಯಲ್ಲಿಯೇ ಅಸಲಿ- ನಕಲಿ ಹೀಗೆ ಕಂಡು ಹಿಡಿಯಿರಿ

ಕಲಬೆರಕೆ ತೊಗರಿಬೇಳೆಯಲ್ಲಿ ಕ್ಯಾನ್ಸರ್​ಕಾರಕ ಅಂಶ: ಮನೆಯಲ್ಲಿಯೇ ಅಸಲಿ- ನಕಲಿ ಹೀಗೆ ಕಂಡು ಹಿಡಿಯಿರಿ

ತೊಗರಿ ಬೇಳೆಯಲ್ಲಿ ಕ್ಯಾನ್ಸರ್​ಕಾರಕ ಮತ್ತು ನರರೋಗಕ್ಕೆ ಕಾರಣವಾಗುವ ವಿಷಕಾರಿ ಕೇಸರಿ ಬೇಳೆಯನ್ನು ಕಲಬೆರಕೆ ಮಾಡಲಾಗುತ್ತಿದೆ. ಹಣದಾಸೆಗಾಗಿ ನಡೆಯುತ್ತಿರುವ ಈ ದಂಧೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.  ಅಸಲಿ ಮತ್ತು ನಕಲಿ ಬೇಳೆಯನ್ನು ಗುರುತಿಸುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.

ಈಗ ಎಲ್ಲೆಲ್ಲೂ ಕಲಬೆರಕೆ. ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಹಲವರಿಗೆ ಮಾಮೂಲು ಆಗಿಬಿಟ್ಟಿದೆ. ದುಡ್ಡು ಮಾಡುವ ಧಾವಂತದಲ್ಲಿ, ಅದೆಷ್ಟೋ ಜನರಿಗೆ ಕ್ಯಾನ್ಸರ್​ನಂಥ ಮಾರಣಾಂತಿಕ ಕಾಯಿಲೆಗಳನ್ನು ಹಚ್ಚುತ್ತಿದ್ದಾರೆ ಕೆಲವು ವ್ಯಾಪಾರಿಗಳು. ಅಂಥದ್ದರಲ್ಲಿ ಒಂದು ತೊಗರಿ ಬೇಳೆ. ಅದರಲ್ಲೂ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಆಹಾರ ಸುರಕ್ಷತಾ ಇಲಾಖೆಯೇ ಪತ್ತೆ ಹಚ್ಚಿದೆ.

ಈ ಕೇಸರಿ ಬೇಳೆ ಸೇವನೆಯಿಂದ ಲ್ಯಾಥರಿಸಂ ಎಂಬ ಅಂಗವೈಕಲ್ಯತೆಗೆ ಕಾರಣವಾಗಬಲ್ಲ ಗಂಭೀರ ನರರೋಗ ಹಾಗೂ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶ ಹಾಗೂ ಉತ್ತರ ಭಾರತದ ಕೆಲಕಡೆ ಹೇರಳವಾಗಿ ಬೆಳೆಯುವ ಕೇಸರಿ ಬೇಳೆಯನ್ನು ನಾಟಿ ಬೇಳೆ ಎಂದು ಹೇಳಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಅಸಲಿ ಬೇಳೆಗೂ, ಕಲಬೆರಕೆ ಬೇಳೆಗೂ ಇರುವ ವ್ಯತ್ಯಾಸ ಗೊತ್ತಾಗದಂತೆ ಕೇಸರಿ ಬೇಳೆಗೆ ಹಳದಿ ಬಣ್ಣ ಬರುವಂತೆ ಟಾಟ್ರಾಜಿನ್‌ (ಇ-102) ಬಣ್ಣ ಮಿಶ್ರಣ ಮಾಡಲಾಗುತ್ತಿದೆ. ಕಡಿಮೆ ಬೆಲೆಗೆ ಸಿಗುವ ಕೇಸರಿ ಬೇಳೆ ತಂದು ತೊಗರಿ ಬೇಳೆಯಲ್ಲಿ ಬೆರಕೆ ಮಾಡುವ ಅಥವಾ ಕೇಸರಿ ಬೇಳೆಯನ್ನೇ ತೊಗರಿ ಬೇಳೆ ಅಥವಾ ಮಸೂರ್‌ ಬೇಳೆ ಎಂದು ಮಾರಾಟ ಮಾಡುವ ದಂಧೆ ನಮ್ಮಲ್ಲೂ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕೇಸರಿ ಬೇಳೆ ಬಣ್ಣ ಹಾಗೂ ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಆದರೆ ಅದು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಇದು ಒಂದು ಕಳೆ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯುತ್ತದೆ. ಕೇಸರಿ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲ್ಯಾಥರಿಸಂ ಕಾಯಿಲೆಗೆ ತುತ್ತಾಗಬಹುದು. ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟಾಗುತ್ತದೆ. ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ನೀವು ಬೇಳೆ ಖರೀದಿ ಮಾಡುವಾಗ ಮೊದಲು ಅದರ ಆಕಾರ ನೋಡಿ. ಅಸಲಿ ತೊಗರಿಬೇಳೆಯಾಗಿದ್ದರೆ, ಒಂದು ಕಡೆ ಚಪ್ಪಟೆ ಹಾಗೂ ಇನ್ನೊಂದು ಕಡೆ ಸ್ವಲ್ಪ ಉಬ್ಬಿರುತ್ತದೆ. ಇದು ಅಸಲಿ ತೊಗರಿಬೇಳೆ. ಒಂದು ವೇಳೆ ಎರಡೂ ಕಡೆ ಚಪ್ಪಟೆಯಾಗಿ ಇದ್ದರೆ ಇದು ನಕಲಿ, ಕಲಬೆರಕೆಯ ಬೇಳೆ. ಆದ್ದರಿಂದ ಖರೀದಿ ಮಾಡುವಾಗಲೇ ಸುಲಭದಲ್ಲಿ ಪತ್ತೆ ಹಚ್ಚಬಹುದು.

ಇದಾಗಲೇ ಮನೆಯಲ್ಲಿ ಬೇಳೆ ತಂದಿದ್ದರೆ, ಅಥವಾ ಅಂಗಡಿಯಲ್ಲಿಯೇ ಇದರ ಬಗ್ಗೆ ತಿಳಿಯದೇ ಹೋದರೆ, ನೀವು ಮನೆಯಲ್ಲಿಯೇ ಸಿಂಪಲ್​ ಆಗಿ ಪರೀಕ್ಷೆ ಮಾಡಬಹುದು. ಒಂದು ಗ್ಲಾಸ್​ನಲ್ಲಿ ನೀವು ತಂದ ತೊಗರಿ ಬೇಳೆಯನ್ನು ಹಾಕಿ. ಅದು ಬಣ್ಣ ಬಿಟ್ಟುಕೊಳ್ಳಲಿಲ್ಲ ಎಂದಾದರೆ, ಅಸಲಿ. ಅದು ಕೇಸರಿ ಬಣ್ಣ ಬಿಟ್ಟಿದ್ದರೆ ಅದು ನಕಲಿ ಎಂದು ಅರ್ಥ.

Source link

Leave a Reply

Your email address will not be published. Required fields are marked *