23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌

23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌

23 ವರ್ಷಗಳ ಬಳಿಕ ಶತ್ರುರಾಷ್ಟ್ರದಿಂದ ಪತನವಾಯ್ತು ಅಮೆರಿಕ ಯುದ್ಧವಿಮಾನ, ದೊಡ್ಡಣ್ಣನ ಚಳಿ ಬಿಡಿಸಿದ ಇರಾನ್‌

ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗೆ ವಿರುದ್ಧವಾಗಿ, ಇರಾನ್ ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು ಯುದ್ಧ ವಿಮಾನ ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ. ಇರಾನ್ ‘ಮಜೀದ್’ ನಂತಹ ಅದೃಶ್ಯ ರಕ್ಷಣಾ ವ್ಯವಸ್ಥೆಗಳನ್ನು ಬಳಸಿ ಅಮೆರಿಕಕ್ಕೆ ಅನಿರೀಕ್ಷಿತ ಆಘಾತ ನೀಡುತ್ತಿದೆ.

ಇರಾನ್ ಮೇಲಿನ ಯುದ್ಧದ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗಳು ಈಗ ಸುಳ್ಳಾಗುತ್ತಿವೆ. ಇರಾನ್‌ನ ವಾಯುಪಡೆ ಸಾಮರ್ಥ್ಯ ಸಂಪೂರ್ಣವಾಗಿ ಕುಸಿದಿದೆ, ಇರಾನ್‌ನ ಆಕಾಶ ಅಮೆರಿಕದ ವಶದಲ್ಲಿದೆ ಎಂದು ಟ್ರಂಪ್‌ ಹೇಳಿದ ಬೆನ್ನಲ್ಲಿಯೇ, ಕಳೆದ 24 ಗಂಟೆಗಳಲ್ಲಿ ಇರಾನ್ ಅಮೆರಿಕದ ಎರಡು ಯುದ್ಧ ವಿಮಾನ ಹಾಗೂ ಎರಡು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿ ಶಾಕ್ ನೀಡಿದೆ.

ಎಪಿ (AP) ಸುದ್ದಿಸಂಸ್ಥೆಯ ಪ್ರಕಾರ, ಶತ್ರು ರಾಷ್ಟ್ರವೊಂದು ಅಮೆರಿಕದ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸುತ್ತಿರುವುದು ಕಳೆದ 23 ವರ್ಷಗಳಲ್ಲಿ ಇದೇ ಮೊದಲು. ಕೊನೆಯ ಬಾರಿಗೆ 2003ರ ಇರಾಕ್ ಯುದ್ಧದ ಸಮಯದಲ್ಲಿ ಇಂತಹ ಘಟನೆ ನಡೆದಿತ್ತು. ಫೆಬ್ರವರಿ 28ರಿಂದ ಆರಂಭವಾದ ಈ ಯುದ್ಧದಲ್ಲಿ ಇದುವರೆಗೆ ಒಟ್ಟು 7 ಅಮೆರಿಕನ್ ವಿಮಾನಗಳು ನಾಶವಾಗಿವೆ.

ಇರಾನ್‌ನ ನೈಋತ್ಯ ಭಾಗದಲ್ಲಿ ಹಾರಾಡುತ್ತಿದ್ದ ಅಮೆರಿಕದ F-15E ವಿಮಾನವನ್ನು ಇರಾನ್ ಹೊಡೆದುರುಳಿಸಿದೆ. ಇದರಲ್ಲಿ ಇಬ್ಬರು ಸಿಬ್ಬಂದಿಗಳಿದ್ದರು, ಒಬ್ಬರು ಪ್ಯಾರಾಚೂಟ್ ಮೂಲಕ ಜಿಗಿದಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಪತನಗೊಂಡ F-15E ವಿಮಾನದ ಸಿಬ್ಬಂದಿಯನ್ನು ಹುಡುಕಲು ಬಂದಿದ್ದ A-10 ವಿಮಾನದ ಮೇಲೂ ದಾಳಿ ನಡೆದಿದೆ.

ಹಾನಿಗೊಳಗಾದ ವಿಮಾನವನ್ನು ಪೈಲಟ್ ಕುವೈತ್ ವಾಯುಸೀಮೆಯವರೆಗೆ ಕೊಂಡೊಯ್ದು ಅಲ್ಲಿಂದ ಸುರಕ್ಷಿತವಾಗಿ ಜಿಗಿದಿದ್ದಾರೆ. ವಿಮಾನ ಕುವೈತ್‌ನಲ್ಲಿ ಪತನಗೊಂಡಿದೆ. ರಕ್ಷಣಾ ಕಾರ್ಯಾಚರಣೆಗೆ ಬಂದಿದ್ದ ಎರಡು ಅಮೆರಿಕನ್ ಬ್ಲಾಕ್‌ಹಾಕ್ ಹೆಲಿಕಾಪ್ಟರ್‌ಗಳ ಮೇಲೆಯೂ ಇರಾನ್ ದಾಳಿ ಮಾಡಿದೆ. ಅದೃಷ್ಟವಶಾತ್ ಅದರಲ್ಲಿದ್ದ ಸೈನಿಕರು ಸುರಕ್ಷಿತವಾಗಿದ್ದಾರೆ.

ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ ಎಂದು ಟ್ರಂಪ್ ಭಾವಿಸಿದ್ದರು. ಆದರೆ ಇರಾನ್ ‘ಅಸಿಮ್ಮೆಟ್ರಿಕ್ ವಾರ್‌ಫೇರ್’ (ವಿಭಿನ್ನ ರೀತಿಯ ಯುದ್ಧ) ತಂತ್ರ ಅನುಸರಿಸುತ್ತಿದೆ. ಅಂದರೆ, ನೇರ ಸಂಘರ್ಷಕ್ಕೆ ಇಳಿಯದೆ, ಸೀಮಿತ ಸಂಪನ್ಮೂಲ ಬಳಸಿ ಅನಿರೀಕ್ಷಿತವಾಗಿ ದಾಳಿ ನಡೆಸಿ ಶತ್ರುವಿಗೆ ಗರಿಷ್ಠ ಹಾನಿ ಮಾಡುವುದು. ಈ ತಂತ್ರವನ್ನು ಅರ್ಥಮಾಡಿಕೊಳ್ಳಲು ಅಮೆರಿಕಕ್ಕೆ ಇಂದಿಗೂ ಸಾಧ್ಯವಾಗುತ್ತಿಲ್ಲ.

ಅಮೆರಿಕದ ವಿಮಾನಗಳನ್ನು ಹೊಡೆದುರುಳಿಸಲು ಇರಾನ್ ‘ಮಜೀದ್’ (Majeed Air Defence) ವ್ಯವಸ್ಥೆಯನ್ನು ಬಳಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದರ ವಿಶೇಷತೆಯೆಂದರೆ ಇದು ರೇಡಾರ್ ಬಳಸುವುದಿಲ್ಲ, ಬದಲಿಗೆ ಇನ್‌ಫ್ರಾರೆಡ್ ತಂತ್ರಜ್ಞಾನ ಬಳಸಿ ಗುರಿ ಇಡುತ್ತದೆ. ಹೀಗಾಗಿ ಶತ್ರು ವಿಮಾನಗಳಿಗೆ ತಮ್ಮ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುಳಿವೇ ಸಿಗುವುದಿಲ್ಲ. ಇದು 8 ಕಿ.ಮೀ ದೂರದ ಹಾಗೂ 6 ಕಿ.ಮೀ ಎತ್ತರದ ಗುರಿಯನ್ನು ನಿಖರವಾಗಿ ಹೊಡೆಯಬಲ್ಲದು.

ಇರಾನ್ ಈಗ ತನ್ನ ರಕ್ಷಣಾ ತಂತ್ರವನ್ನು ಬದಲಿಸಿದೆ. ಅಮೆರಿಕದ ದಾಳಿಗೆ ಸಿಲುಕುವ ಸ್ಥಿರ ವ್ಯವಸ್ಥೆಗಳ ಬದಲು, ಸಂಚಾರಿ ಲಾಂಚರ್‌ಗಳನ್ನು ಬಳಸುತ್ತಿದೆ. ಸುರಂಗಗಳು, ಭೂಗತ ಅಡಗುತಾಣಗಳಲ್ಲಿ ಇವುಗಳನ್ನು ಅಡಗಿಸಿಡಲಾಗಿದ್ದು, ದಾಳಿ ಮಾಡಿದ ತಕ್ಷಣ ಸ್ಥಳ ಬದಲಾವಣೆ ಮಾಡುತ್ತವೆ (Fire and Retreat). ಅಷ್ಟೇ ಅಲ್ಲದೆ ಚೀನಾದ ಮುಂದುವರಿದ HQ-9B ನಂತಹ ಕ್ಷಿಪಣಿ ವ್ಯವಸ್ಥೆಗಳೂ ಇರಾನ್ ನೆರವಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.

Source link

Leave a Reply

Your email address will not be published. Required fields are marked *