
ಒಂದು ಸಿನಿಮಾ ಅಥವಾ ಸೀರಿಸ್ ಮಾಡಿ ಅದು ಗಮನಸೆಳೆದರೆ ಅದು ಬ್ರ್ಯಾಂಡ್ ಆಗಿ ಬಿಡುತ್ತದೆ. ನಂತರ ಅದೇ ರೀತಿಯ ಪ್ರಾಜೆಕ್ಟ್ ಮಾಡಿದರೆ ಜನರು ಬೇಡ ಎಂದರೂ ಅದರ ಮೂಲ ಸೃಷ್ಟಿಗೆ ಹೋಲಿಕೆ ಮಾಡಿಯೇ ಮಾಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಈ ಮೊದಲು ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತ್ತು. ಈಗ ನಿತೇಶ್ ತಿವಾರಿದ ನಿರ್ದೇಶನದ ಹೊಸ ರಾಮಾಯಣವನ್ನು ಅನೇಕರು ಆಧಾರವಾಹಿಗೆ ಹೋಲಿಸುತ್ತಿದ್ದಾರೆ. ವಿಎಫ್ಎಕ್ಸ್ ಬಗ್ಗೆಯೂ ಕೆಲವರು ಅಪಸ್ವರ ತೆಗೆದಿದ್ದಾರೆ.
ರಮಾನಂದ್ ಸಾಗರ್ ಅವರ ‘ರಾಮಾಯಣ’ ಐಕಾನಿಕ್ ಎನಿಸಿಕೊಂಡಿದೆ. ಈ ಸೀರಿಸ್ ನಲ್ಲಿ ಸುನೀಲ್ ಲಹರಿ ಅವರು ಲಕ್ಷ್ಮಣನ ಪಾತ್ರ ಮಾಡಿದ್ದರು. ಅವರ ಟೀಸರ್ ಬಗ್ಗೆ ತಮ್ಮ ಅಭಿಪ್ರಾಯ. ಅವರಿಗೆ ರಾಮನ ಪಾತ್ರ ರಣಬೀರ್ ಸೂಕ್ತ ಅಲ್ಲ ಎನಿಸಿದೆ. ತಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದಾರೆ.
‘ರಣಬೀರ್ ರಾಮನಾಗಿ ಚೆನ್ನಾಗಿ ಕಾಣುತ್ತಾರೆ ನಿಜ, ಆದರೆ ಮುಗ್ಧತೆ ಸ್ವಲ್ಪ ಕಡಿಮೆ ಕಾಣಿಸಿಕೊಂಡಿದೆ. ಅರುಣ್ ಗೋವಿಲ್ (ರಾಮಾಯಣ ಸರಣಿಯಲ್ಲಿ ರಾಮನ ಪಾತ್ರಧಾರಿ) ಅವರ ತಾಳ್ಮೆ, ಶಾಂತತೆ ಮತ್ತು ಮುಗ್ಧತೆ ಇಲ್ಲಿ ಕಾಣುತ್ತಿಲ್ಲ. ಆದರೆ, ರಣಬೀರ್ ತಮ್ಮ ನಟನೆಯ ಮೂಲಕ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಸುನೀಲ್. ರಾಮನ ಪಾತ್ರದಲ್ಲಿ ನಟಿಸಿದ ಅರುಣ್ ಗೋವಿಲ್ ಅವರಿಗೆ ಅನೇಕರು ಪೂಜ್ಯ ಭಾವನೆಯಲ್ಲೇ ಕಾಣುತ್ತಾರೆ.
‘ರಣಬೀರ್ ಕಪೂರ್ ಲುಕ್ ಹಾರ್ಷ ಆಗಿ ಕಾಣಿಸಿಕೊಂಡಿದೆ. ಅವರು ಭರತ ಅಥವಾ ಲಕ್ಷ್ಮಣನ ಪಾತ್ರಕ್ಕೆ ಹೆಚ್ಚು ಸೂಕ್ತವಾಗಿದೆ. ಈ ರೀತಿಯ ಪಾತ್ರಗಳಿಗೆ ಯಾವಾಗಲೂ ಹೊಸ ಮುಖವನ್ನು ತರಬೇಕು. ಯಾವುದೇ ವಿವಾದ ಇಲ್ಲದಿದ್ದರೂ ಇನ್ನೂ ಉತ್ತಮ. ಆಗ ಎಲ್ಲರೂ ಪಾತ್ರ ಒಪ್ಪುತ್ತಾರೆ’ ಎಂದು ಸುನೀಲ್ ಹೇಳಿದ್ದಾರೆ. ರಣಬೀರ್ ಕಪೂರ್ ನಟಿಯರ ಜೊತೆ ಸುತ್ತಾಡಿದ್ದಾರೆ, ಮದ್ಯ ಸೇವನೆ ಮಾಡುತ್ತಾರೆ ಎಂಬ ಆರೋಪ ಇದ್ದು, ಒಂದು ವರ್ಗದ ಜನರು ಅವರನ್ನು ರಾಮನಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಾವಣನ ಪಾತ್ರ ಮಾಡಿದ ಯಶ್ನ ಹಾಡಿ ಹೊಗಳಿದ ರಣಬೀರ್ ಕಪೂರ್
ಹಳೆಯ ಮಹಾಭಾರತದಲ್ಲಿ ಕೃಷ್ಣನ ಪಾತ್ರ ಮಾಡಿದ್ದ ನಿತೀಶ್ ಭಾರದ್ವಾಜ್ ಅವರಿಗೆ ‘ರಾಮಾಯಣ’ ಟೀಸರ್ ಇಷ್ಟವಾಗಿದೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಲಿಯಾ ಕೂಡ ಧಾರಾವಾಹಿ ಇಷ್ಟಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.