ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್​​ ದಾಖಲು

ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್​​ ದಾಖಲು


ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲೆ ನಡೆಸಿ ವಿಕೃತಿ: ಆರೋಪಿಗಳ ವಿರುದ್ಧ ಕೇಸ್ ದಾಖಲು

ಕಾರವಾರ, ಏಪ್ರಿಲ್ 03: ಕೊಟ್ಟ ಹಣ ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಮಹಿಳೆಯರನ್ನು ಗ್ಯಾಂಗ್ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನೆಹರು ನಗರದಲ್ಲಿ ನಡೆದಿದೆ. ಯಲ್ಲಾಪುರದ ಮಹಿಳೆಯರಾದ ಆಯಿಷಾ ಮತ್ತು ಗೀತಾ ಎಂಬವರ ಮೇಲೆ ಮೊಹ್ಮದ್ ಸಲ್ಮಾನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗ್ಯಾಂಗ್ ಮಹಿಳೆಯರ ಖಾಸಗಿ ಭಾಗದ ಮೇಲೆ ಅಟ್ಯಾಕ್ ಮಾಡುತ್ತಿದೆ ಎನ್ನಲಾಗಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮಹಿಳೆಯರ ಮೇಲೆ ಆಯಿಷಾ ಆರೋಪಿ ಸಲ್ಮಾನ್ ಅಂಗಡಿ ಹಾಕಲು 3 ಲಕ್ಷದ 80 ಸಾವಿರ ರೂಪಾಯಿಗಳನ್ನು ನೀಡಿದ್ದರು. ಈ ನಡುವೆ ಪತಿ ಪ್ರತಿನಿಧಿ ಕಾರಣ ಕೆಲವು ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅವರು ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಆಯಿಷಾ ಯಲ್ಲಾಪುರಕ್ಕೆ ಬಂದಾಗ ಸಲ್ಮಾನ್‌ನಲ್ಲಿ ಇರಲಿಲ್ಲ. ಯಲ್ಲಾಪುರ ತೊರೆದಿದ್ದ ಆತ ಶಿರಸಿಗೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ನೇರವಾಗಿ ಶಿರಸಿಗೆ ತೆರಳಿರುವ ಅವರು ಕೊಟ್ಟ ಹಣ ಹಿಂದಿರುಗಿಸುವಂತೆ ಸಲ್ಮಾನ್ ಗೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತುಕತೆ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸದೆ, ಹಿಗ್ಗಾಮುಗ್ಗಾ ಥಳಿಸಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್; ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು!

ಸಂತ್ರಸ್ತೆ ಹೇಳುವಂತೆ ಯಲ್ಲಾಪುರದಲ್ಲಿ 18-20 ವರ್ಷಗಳಿಂದ ನೆಲೆಸಿದ್ದ ಯುಪಿ ಮತ್ತು ಬಿಹಾರದ ಹುಡುಗರು ಸಲೂನ್ ಉದ್ಯಮದ ಪಾಲುದಾರರಾಗುವಂತೆ ಕೇಳಿದ್ದರು. ಅದನ್ನು ನಂಬಿ ನಾವು ಹಣ ನೀಡಿದ್ದೆವು. ಆ ಬಳಿಕ ಮತ್ತೆ ಶಾಪ್ ಒಂದನ್ನು ತೆರೆದಿದ್ದ ಅವರು, ಬಳಿಕ ಅದನ್ನು ಕ್ಲೋಸ್ ಮಾಡಿದ್ದಾರೆ. ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಅವರು ಸಾಲ ಮಾಡಿರೋದು ಗೊತ್ತಾದ ಕಾರಣ, ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಆ ವೇಳೆ ಮುಚ್ಚಳಿಕೆ ನೀಡಿ ಹಣ ಕೊಡೋದಾಗಿ ಒಪ್ಪಿದ್ದ ಖದೀಮರು, ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳು ಶಿರಸಿಯಲ್ಲಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಅಲ್ಲಿಹೋಗಿ ಆತನ ಸಹೋದರನ ಬಳಿ ಈ ಬಗ್ಗೆ ತಿಳಿಸಿದಾಗ ಸಂತ್ರಸ್ತೆ ಮತ್ತು ಅವರ ಜೊತೆಗಿದ್ಧ ಮತ್ತೊಬ್ಬ ಮಹಿಳೆ ಮೇಲೆ ಗ್ಯಾಂಗ್ ಹಲ್ಲೆ ನಡೆಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *