‘ಸ್ಯಾಂಡಲ್‌ವುಡ್‌ನಲ್ಲಿ ಸೈಡ್‌ ರೋಲ್‌ ಕೊಡಿಸಿ, ಆಕ್ಟಿಂಗ್‌ ಮಾಡ್ತೀನಿ..’ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಶಾಕ್‌ | Virat Kohli Sandalwood Acting Debut Joke Mr Nags Rcb Insider Viral Video San

‘ಸ್ಯಾಂಡಲ್‌ವುಡ್‌ನಲ್ಲಿ ಸೈಡ್‌ ರೋಲ್‌ ಕೊಡಿಸಿ, ಆಕ್ಟಿಂಗ್‌ ಮಾಡ್ತೀನಿ..’ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಶಾಕ್‌ | Virat Kohli Sandalwood Acting Debut Joke Mr Nags Rcb Insider Viral Video San



‘ಸ್ಯಾಂಡಲ್‌ವುಡ್‌ನಲ್ಲಿ ಸೈಡ್‌ ರೋಲ್‌ ಕೊಡಿಸಿ, ಆಕ್ಟಿಂಗ್‌ ಮಾಡ್ತೀನಿ..’ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಶಾಕ್‌ | Virat Kohli Sandalwood Acting Debut Joke Mr Nags Rcb Insider Viral Video San

ಆರ್‌ಸಿಬಿ ಇನ್ಸೈಡರ್ ವಿಡಿಯೋದಲ್ಲಿ, ಮಿಸ್ಟರ್ ನಾಗ್ಸ್ ಜೊತೆಗಿನ ತಮಾಷೆಯ ಸಂಭಾಷಣೆಯ ವೇಳೆ ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು (ಏ.4): ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುವ ವಿರಾಟ್ ಕೊಹ್ಲಿ, ಇನ್ನು ಮುಂದೆ ಬೆಳ್ಳಿತೆರೆಯ ಮೇಲೂ ಮಿಂಚಲಿದ್ದಾರಾ? ಸದ್ಯ ಆರ್‌ಸಿಬಿ ತಂಡದ ಅಭಿಮಾನಿಗಳ ವಲಯದಲ್ಲಿ ಈ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ. ಅದಕ್ಕೆ ಕಾರಣ ಆರ್‌ಸಿಬಿ ಇನ್ಸೈಡರ್‌ನ ಭಾಗವಾಗಿರುವ ‘ಮಿಸ್ಟರ್ ನಾಗ್ಸ್’ (ಡ್ಯಾನಿಶ್ ಸೇಠ್) ಮತ್ತು ವಿರಾಟ್ ಕೊಹ್ಲಿ ನಡುವಿನ ಆ ಒಂದು ತಮಾಷೆಯ ಸಂಭಾಷಣೆ!

ಆರ್‌ಸಿಬಿ ಇನ್ಸೈಡರ್‌ನ ಇತ್ತೀಚಿನ ವಿಡಿಯೋದಲ್ಲಿ ಎಂದಿನಂತೆ ಡ್ಯಾನಿಶ್ ಸೇಠ್ ತಮ್ಮ ಶೈಲಿಯಲ್ಲೇ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ದೀರ್ಘಕಾಲ ಲಂಡನ್‌ನಲ್ಲಿ ಸಮಯ ಕಳೆದಿದ್ದ ವಿರಾಟ್ ಅವರನ್ನು ಉದ್ದೇಶಿಸಿ, “ನೀವು ಈಗ ವಿದೇಶಿ ಆಟಗಾರರೇನಾದರೂ ಆಗಿದ್ದೀರಾ?” ಎಂದು ಮಿಸ್ಟರ್ ನಾಗ್ಸ್ ಕಾಲೆಳೆದಿದ್ದಾರೆ. ಇದಕ್ಕೆ ವಿರಾಟ್ ಕೂಡ ಅಷ್ಟೇ ತಮಾಷೆಯಿಂದ ಉತ್ತರಿಸಿ ನಗುವಿನ ಅಲೆ ಎಬ್ಬಿಸಿದ್ದಾರೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಐವರು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ ಅನ್ನೋ ಪ್ರಶ್ನೆಗೆ, ನನಗೆ ಇದು ಅರ್ಥವಾಗ್ತಿಲ್ಲ ಅಂತ ಪ್ರಶ್ನೆ ಮಾಡ್ತಾರೆ. ಒಂದು ಕ್ಷಣ ‌ವಿಚಲಿತರಾದ ಕೊಹ್ಲಿ, ನಕ್ಕು ಉತ್ತರ ನೀಡುತ್ತಾರೆ. ಅರ್ಥ ಆಗ್ತಿಲ್ಲ ಈ ಪ್ರಶ್ನೆ ನನಗೆ ಯಾಕೆ ಕೇಳ್ತಿದ್ದೀರಿ ಅಂತ.. ವಿದೇಶಿ ಆಟಗಾರರನ್ನ ಕೇಳಿ, ನನ್ನನ್ನ ಯಾಕೆ ಕೇಳ್ತಿದ್ದೀರಿ…? ಅಂತ ಪ್ರಶ್ನೆ ಮಾಡ್ತಾರೆ.

ಸ್ಯಾಂಡಲ್‌ವುಡ್‌ ಸೈಡ್ ರೋಲ್‌ಗೆ ಸೈ ಎಂದ ಕೊಹ್ಲಿ

ಸಂಭಾಷಣೆಯ ನಡುವೆ ಸ್ಯಾಂಡಲ್‌ವುಡ್ (ಕನ್ನಡ ಸಿನಿಮಾ) ಬಗ್ಗೆ ಮಾತು ಬಂದಾಗ, ವಿರಾಟ್ ಕೊಹ್ಲಿ ತಮಾಷೆಯಾಗಿ ತಾವು ಚಿತ್ರರಂಗದಲ್ಲಿ ನಟಿಸುವುದಾದರೆ “ಸೈಡ್ ರೋಲ್” (ಪೋಷಕ ಪಾತ್ರ) ಮಾಡಲು ಸಿದ್ಧ ಎಂದಿದ್ದಾರೆ. ಮಿ.ನಾಗ್ಸ್‌ನಿಂದ ಈಗಾಗಲೇ ಜನಪ್ರಿಯವಾಗಿರುವ ಡ್ಯಾನಿಶ್‌ ಸೇಠ್‌ ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಮಿ.ನೊಗರಾಜ್‌ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಅದಾದ ನಂತರ ಫ್ರೆಂಚ್‌ ಬಿರಿಯಾನಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರೊಂದಿಗೆ ಸೈಡ್‌ ರೋಲ್‌ ಅವಕಾಶವನ್ನು ವಿರಾಟ್‌ ಕೊಹ್ಲಿ ಕೇಳಿದ್ದಾರೆ.

ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿಯಂತೆ ಹಬ್ಬಿದ್ದು, ಕೊಹ್ಲಿ ತಮಾಷೆಯಾಗಿ ಈ ಮಾತು ಹೇಳಿದ್ದಾದರೂ, ಹೆಚ್ಚಿನವರು’ಕಿಂಗ್ ಕೊಹ್ಲಿ’ಯನ್ನು ಸ್ಯಾಂಡಲ್‌ವುಡ್‌ನಲ್ಲಿ ನೋಡುವ ಕನಸು ಕಾಣುತ್ತಿದ್ದಾರೆ.

ಇದು ಆರ್‌ಸಿಬಿ ಇನ್ಸೈಡರ್‌ನ ಒಂದು ಭಾಗವಾಗಿ ಡ್ಯಾನಿಶ್ ಸೇಠ್ ಮತ್ತು ಕೊಹ್ಲಿ ನಡೆಸಿದ ಮೋಜಿನ ಹರಟೆ ಅಷ್ಟೇ. ಇದಕ್ಕೂ ಯಾವುದೇ ನೈಜ ಚಿತ್ರದ ಪ್ರಾಜೆಕ್ಟ್‌ಗೂ ಸಂಬಂಧವಿಲ್ಲ. ಆದರೂ, ಕೊಹ್ಲಿ ಬಾಯಲ್ಲಿ ‘ಸ್ಯಾಂಡಲ್‌ವುಡ್’ ಎಂಬ ಪದ ಕೇಳಿದ್ದೇ ತಡ, ಅಭಿಮಾನಿಗಳಂತೂ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಮಾಡುತ್ತಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *