
ಬೆಂಗಳೂರು, ಏಪ್ರಿಲ್ 04: ಸಿಲಿಕಾನ್ ಸಿಟಿ ಬೆಂಗಳೂರು ದೇಶದ ಪ್ರಮುಖ ನಗರಗಳಲ್ಲಿ ಒಂದು. ಐಟಿ ಕ್ಷೇತ್ರದ ತವರು ಎಂದೆಂದೂ ಕರೆಸಿಕೊಳ್ಳುವ ರಾಜ್ಯ ರಾಜಧಾನಿಯಲ್ಲಿ ಅನ್ಯರಾಜ್ಯ ಸೇರಿ ವಿದೇಶಿಯರು ಕೂಡ ಕೆಲಸ ಅರಸಿ ಬಂದು ನೆಲೆಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಇರುವ ಕಾರಣ, ಜನರಿಗೆ ಏರಿಕೆಯಾಗುತ್ತಿರುವ ಮನೆ ಬೆಲೆಗಳು ಮತ್ತು ಬಾಡಿಗೆ ದರಗಳು ಸಾಮಾನ್ಯ ಕೈಗೆಟುಕುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಆಸ್ತಿ ಬೆಲೆ ಮತ್ತು ಬಾಡಿಗೆಗಳು ತೀವ್ರವಾಗಿ ಏರಿಕೆಯಾಗಿರುವ, ವಾಸಕ್ಕೆ ಸೂಕ್ತ ಮನೆ ಹುಡುಕುವುದೇ ಕಷ್ಟ ಎಂಬಂತಾಗಿದೆ.
ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಗರದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ 2BHK ಮನೆ ಹುಡುಕುವುದು ಭಯಾನಕ ಅನುಭವ ಎಂದು ಹೇಳಿದ್ದಾರೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಎಲ್ಲಿಗೆ ಹೋಗುತ್ತಿದೆ? ಎಂಬ ಶೀರ್ಷಿಕೆಯ ಪೋಸ್ಟ್ ಮಾಡಿರುವ ಅವರು, ಕಳೆದ ಮೂರು ವರ್ಷಗಳಲ್ಲಿ ಹಲವು ದೋಷಗಳಿದ್ದ ಒಂದು ಫ್ಲಾಟ್ನ ಬೆಲೆ 1.4 ಕೋಟಿ ಇಂದ 2 ಕೋಟಿಗೆ ಏರಿಕೆಯಾಗಿದೆ. ದೊಡ್ಡ ಕಾಲುವೆ ಹತ್ತಿರ ಇರುವ ಈ ಅಪಾರ್ಟ್‌ಮೆಂಟ್‌ಗೆ ಹಲವು ಸಮಸ್ಯೆಗಳಿದ್ದರೂ, ಔಟರ್ ರಿಂಗ್ ರೋಡ್ ಮತ್ತು ಐಟಿ ಕಂಪನಿಗಳ ಸಮೀಪ ಬೇಡಿಕೆಯಿದೆ.
ಇದನ್ನೂ ಓದಿ: ಮನೆ ಕಟ್ಟುವವರಿಗೆ ಜಿಬಿಎ ಬಂಪರ್ ಗಿಫ್ಟ್! ಸೆಟ್ ಬ್ಯಾಕ್ ಮಿತಿ ವಿಸ್ತರಣೆ
ಕಳೆದ ಮೂರು ವರ್ಷಗಳ ಬಾಡಿಗೆ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈಗ ಅದೇ ಫ್ಲಾಟ್‌ಗೆ 70,000 ಕ್ಕಿಂತ ಹೆಚ್ಚು ಬಾಡಿಗೆ ಕೇಳಲಾಗುತ್ತಿದೆ. ಮೂರರಿಂದ ನಾಲ್ಕು ವರ್ಷಗಳಲ್ಲಿ ಹಣ ಸಂಗ್ರಹಿಸಿ ಮನೆ ಖರೀದಿಸುವ ಯೋಜನೆ ಇದ್ದರೂ, ಆಸ್ತಿ ಬೆಲೆಗಳು ವೇಗವಾಗಿ ಏರಿಕೆಯಾಗಲು ಸಾಧ್ಯವಾಗಲಿಲ್ಲ. ಇನ್ನು ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಟ್ಯಾಂಕರ್ ನೀರಿನ ಮೇಲೆ ಅವಲಂಬನೆ ಮತ್ತು ರಸ್ತೆ ಸಮಸ್ಯೆಗಳಿದ್ದರೂ, ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವುದು ಅಸಮಂಜಸ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.