
ಸುಮಾರು 50 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. “ನಮ್ಮ ಪ್ಲಾನ್‌ಗಳು ನಿರ್ದಿಷ್ಟ ಬಳಕೆದಾರರ ವಿಭಾಗವನ್ನು ಆಧರಿಸಿರುತ್ತವೆ, ಹಾಗಾಗಿ ಇವುಗಳನ್ನು ತಾರತಮ್ಯ ಎಂದು ಕರೆಯಲು ಸಾಧ್ಯವಿಲ್ಲ. ಅಲ್ಲದೆ, ಪೋಸ್ಟ್‌ಪೇಯ್ಡ್ ಮತ್ತು ಮೊದಲ ಬಾರಿಯ ರೀಚಾರ್ಜ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ” ಎಂದು ಜಿಯೋ ವಾದಿಸಿದೆ. ಆದರೆ, ಟ್ರಾಯ್ ಈ ವಾದವನ್ನು ತಳ್ಳಿಹಾಕಿದ್ದು, ಪ್ಲಾನ್‌ಗಳ ಪ್ರಕಟಣೆ ಮತ್ತು ಲಭ್ಯತೆ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಸ್ಪಷ್ಟಪಡಿಸಿದೆ.