ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್‍‌ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ಜಿಮ್ ಟ್ರೇನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣ ಹಿಂದೂ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಏಳರಿಂದ ಎಂಟು ಹಿಂದೂ ಹುಡುಗಿರಿಯನ್ನು ಲೈಂಗಿಕವಾಗಿ ಬಳಿಸಿಕೊಂಡು ಬಳಿಕ ಗರ್ಭಪಾತ ಮಾತ್ರೆ ನೀಡುತ್ತಿದ್ದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಸಂತ್ರಸ್ತೆ ಮನೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ.

ಸಮೀರ್ ಮುಲ್ಲಾ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಬದಲು ಸಮೀರ್ ಮುಲ್ಲಾನನ್ನು ಹಿಡಿದುಕೊಟ್ಟ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಮೀರ್ ಮುಲ್ಲಾ ಹಾಗೂ ಆತನ ಸಹೋದರಿಯನ್ನು ಅರೆಸ್ಟ್ ಮಾಡಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು. ಇಲ್ಲದಿದ್ದರೆ ಹುಬ್ಬಳ್ಳಿ ಬಂದ್‌ಗೆ ಕರೆ ನೀಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.

ಸಂತ್ರಸ್ತೆ ಮನೆಯವರ ಜೊತೆ ಮಾತನಾಡಿದ ಬಳಿಕ ಮಾಧ್ಯಮಕ್ಕೆ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಯಾನಕ ಲವ್ ಜಿಹಾದ್ ಕೇಸ್ ಬೆಳಕಿಗೆ ಬಂದಿದೆ. ಜಿಮ್‌ಗೆ ಬರುವ ಹಿಂದೂ ಯುವತಿಯರನ್ನು ಪುಸಲಾಯಿಸಿದ್ದಾನೆ. ಮತ್ತು ಬರೋ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಳೆಂಟು ಹುಡುಗಿಯರ ಜೊತೆ ಹೀಗೆ ಮಾಡಿದ್ದಾನೆ. ಬಳಿಕ ಲೈವ್ ಆಗಿ ಗರ್ಭಪಾತ ಮಾತ್ರೆ ತೆಗೆದುಕೊಳ್ಳಲು ಬೆದರಿಸಿದ್ದಾನೆ ಎಂದು ಮುತಾಲಿಕ್ ಹೇಳಿದ್ದಾರೆ.

ಆರೋಪಿ ಸಮೀರ್ ಮುಲ್ಲಾಪ್ರಕರಣ ಗೊತ್ತಾಗುತ್ತಿದ್ದಂತೆ ನಮ್ಮ ಕಾರ್ಯಕರ್ತರು ಅವರ ಮನೆಗೆ ಹೋಗಿದ್ದರು. ಪ್ರಮುಖವಾಗಿ ಮೊಬೈಲ್ ಪಡೆಯಲು ಹೋಗಿದ್ದರು. ಯಾಕಾಂದ್ರೆ ಎಲ್ಲಾ ಸಾಕ್ಷಿ ನಾಶ ಮಾಡಿದ್ರೆ ಪೊಲೀಸರು ಸುಳ್ಳು ಅಂತಾರೆ. ಹೀಗಾಗಿ ಮೊಬೈಲ್ ಪಡೆಯಲು ಆತನ ಮನೆಗೆ ಹೋಗಿದ್ದರು. ನಮ್ಮವರು ಆತನನ್ನು ಹಿಡಿದು ತಂದು ಪೊಲೀಸರಿಗೊಪ್ಪಿಸಿದ್ದಾರೆ. ನಮ್ಮ ಕಾರ್ಯಕರ್ತರು ಸರಿಯಾಗಿಯೇ ನಡೆದುಕೊಂಡಿದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ.

ಇಂತಹ ಪ್ರಕರಣಗಳಿಗೆ ಮುಲ್ಲಾ ಮೌಲ್ವಿಗಳು ಸಪೋರ್ಟ್ ಮಾಡುತ್ತಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ಆದರೆ ಪೊಲೀಸರು ಆರೋಪಿಯನ್ನು ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಾರೆ. ನಮ್ಮ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. ಕೂಡಲೇ ಕೇಸ್ ವಾಪಸ ಪಡೆಯಬೇಕು. ಈ ಹಗರಣ ಸಂಪೂರ್ಣ ಬಯಲಾಗಬೇಕು ಎಂದಿದ್ದಾರೆ.

ಕಾಂಗ್ರೆಸ್ ನಾಯಕರ ಮಾತು ಕೇಳಿ ಪ್ರಕರಣ ದಾರಿತಪ್ಪಿಸಬಾರದು. ಗೃಹ ಸಚಿವರು ಜಿಮ್ ಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮೀರ್ ಮುಲ್ಲಾನನ್ನು ಬಂಧಿಸಬೇಕು. ಆತನ ಸಹೋದರಿಯನ್ನು ಕೂಡಾ ಬಂಧಿಸಬೇಕು. ಯುವತಿ ಮನೆಗೆ ಬಂದು ದಾಂದಲೆ ಮಾಡ್ತಾರೆ ಅಂದ್ರೆ ಎಷ್ಟು ಸೊಕ್ಕು ಅವರಿಗೆ. ಅವರು ನಡೆಸುತ್ತಿದ್ದ ಜಿಮ್ ನ್ನು ಬಂದ್ ಮಾಡಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಾಯಕರ ಮಾತು ಕೇಳಿ ಪ್ರಕರಣ ದಾರಿತಪ್ಪಿಸಬಾರದು

Source link

Leave a Reply

Your email address will not be published. Required fields are marked *