ಮಾಗಡಿ ಶಾಸಕ ಹೆಚ್​​.ಸಿ. ಬಾಲಕೃಷ್ಣಗೆ ಬಿಗ್​​ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

ಮಾಗಡಿ ಶಾಸಕ ಹೆಚ್​​.ಸಿ. ಬಾಲಕೃಷ್ಣಗೆ ಬಿಗ್​​ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ


ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣಗೆ ದೊಡ್ಡ ಆಘಾತ: ಜಾಮೀನು ರಹಿತ ವಾರೆಂಟ್ ಜಾರಿ

ಬೆಂಗಳೂರು, ಏಪ್ರಿಲ್ 04: ಮಾಗಡಿ ಕ್ಷೇತ್ರದ ಕಾಂಗ್ರೆಸ್ಶಾಸಕ ಹೆಚ್.ಸಿ.ಬಾಲಕೃಷ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. 2018ರ ಎಲೆಕ್ಷನ್ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಚುನಾವಣೆ ವೇಳೆ ಮತದಾರರಿಗೆ ಅಮಿಷ ಕೇಸ್ ಸಂಬಂಧ ಕಾಂಗ್ರೆಸ್ ನಾಯಕನ ವಿರುದ್ಧ ಅಬಕಾರಿ ಕಾಯ್ದೆ, ಐಪಿಸಿ ಅಡಿ ಕೇಸ್ ದಾಖಲಾಗಿತ್ತು. ಆದರೆ ಪ್ರಕರಣ ಸಂಬಂಧ ಕೋರ್ಟ್ ವಿಚಾರಣೆಗೆ ಹಾಜರಾಗದೇ ಶಾಸಕರು ಗೈರಾಗಿದ್ದಾರೆ ಹಿನ್ನಲೆ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.

ಪ್ರಕರಣ ಏನು?

2018ರ ವಿಧಾನಸಭಾ ಚುನಾವಣೆ ಸಂದರ್ಭ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಹೀಲ್ ವ್ಯೂ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹೆಚ್. ಸಿ. ಬಾಲಕೃಷ್ಣ ನಡೆಸಿದ್ದರು. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ತಹಶೀಲ್ದಾರ್ ವಿಷಯವನ್ನು ಫ್ಲೈಯಿಂಗ್ ಸ್ಕ್ಯಾಡ್‌ಗೆ ತಿಳಿಸಿದ್ದರು. ಆ ಮಾಹಿತಿ ಆಧಾರದ ಮೇಲೆ ಅಬಕಾರಿ ಸಬ್ ಇನ್ಸ್‌ಕ್ಟರ್ ಸಮೇತ ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ಯಾಡ್‌ ಅಧಿಕಾರಿ ಭೇಟಿ ನೀಡಿದ್ದು, ಈ ವೇಳೆ ಹೆಚ್.ಸಿ.ಬಾಲಕೃಷ್ಣ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದ ಚುನಾವಣಾ ಅಧಿಕಾರಿಯಿಂದ ಯಾವುದೇ ಅನುಮತಿ ಪಡೆದ ಕಾರಣ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಬಿಜೆಪಿಗರಿಗೆ ನಾನೇ ಟಾರ್ಗೆಟ್ ಎಂದ ಸಿಎಂ; ಕಾರಣವನ್ನೂ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಇದಲ್ಲದೆ, ಹಿಲ್ ವ್ಯೂನ ರೆಸಾರ್ಟ್‌ನಲ್ಲಿ ಪರವಾನಿಗೆ ಇಲ್ಲದೆ ಪಾನಕ್ಕೆ ವ್ಯವಸ್ಥೆಯನ್ನೂ ಮಾಡಿದ್ದಕ್ಕಾಗಿ ರೆಸಾರ್ಟ್ ಮ್ಯಾನೇಜರ್ ವಿರುದ್ಧವೂ ಕ್ರಮ ಜರುಗಿಸುವಂತೆ ರಾಮನಗರ ರೂರಲ್ ಪೊಲೀಸ್ ಠಾಣೆಯಲ್ಲಿ ಕಲಂ 34 ಐಪಿಸಿ, ಕಲಂ 171(ಇ) ಆರ್‌ಪಿ ಆಕ್ಟ್ ಹಾಗೂ ಕಲಂ 34, 38(ಎ) ಕೆಇ ಆಕ್ಟ್-1965ರ ಅಡಿ ಪ್ರಕರಣ ದಾಖಲಾಗಿದೆ. ಆದರೆ ಹಾಲಿ ಶಾಸಕ ಬಾಲಕೃಷ್ಣ ವಿಚಾರಣೆಗೆ ಬಾರದ ಕಾರಣ ನ್ಯಾಯಾಲಯವೀಗ ಬಿಸಿ ಮುಟ್ಟಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *