ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಪಂದ್ಯಕ್ಕೆ ಆಗಮಿಸುವ ಹಾಗೂ ಪಂದ್ಯ ಮುಗಿದ ಬಳಿಕ ಮನೆಗೆ ತೆರಳುವ ಅಭಿಮಾನಿಳಿಗೆ BMTC ಕೊಡುಗೆ ಏನು?

ಐಪಿಎಲ್ ಟೂರ್ನಿ ಕಾವು ಜೋರಾಗಿದೆ. ನಾಳೆ (ಏ.05) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡ ಮುಖಾಮುಖಿಯಾಗುತ್ತಿದೆ. ರಣರೋಚಕ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲೇ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ನಾಳಿನ ಪಂದ್ಯಕ್ಕೆ ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಹಿನ್ನಲೆಯಲ್ಲಿ ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಿಸಿದೆ. ಕ್ರೀಡಾಂಗಣದಿಂದ ಒಟ್ಟು 8 ವಿವಿಧ ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿವೆ.ಬಸ್ಸುಗಳು ಸಿಟಿಓ ಜಂಕ್ಷನ್ನಿಂದ ಬಿಆರ್ವಿ ಜಂಕ್ಷನ್ ವರೆಗೆ ನಿಲ್ಲಲಿವೆ ಎಂದು ಬಿಎಂಟಿಸಿ ಹೇಳಿದೆ.

ಕ್ರೀಡಾಂಗಣದ ರಸ್ತೆಯ ಎಡಭಾಗದಲ್ಲಿ ಸಾರ್ವಜನಿಕರು ಈ ಬಸ್ ಏರಲು ಅವಕಾಶ ಮಾಡಲಾಗಿದೆ. ಕಾಡುಗೋಡಿ ಮತ್ತು ಹೆಚ್ಎಎಲ್ ರಸ್ತೆಗೆ ಎಸ್ಬಿಎಸ್-1ಕೆ ಬಸ್ಸು ಲಭ್ಯವಿದೆ. ಹೊಸೂರು ರಸ್ತೆ ಎಲೆಕ್ಟ್ರಾನಿಕ್ ಸಿಟಿಗೆ ಜಿ-3 ಬಸ್ಸು ಸಂಚರಿಸಲಿದೆ.ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ಗೆ ಹೋಗಲು ಜಿ-4 ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.

ಮಾಗಡಿ ರಸ್ತೆ ಜನಪ್ರಿಯ ಟೌನ್ಶಿಪ್ಗೆ ಜಿ-7 ಬಸ್ಸು ನಿಯೋಜನೆ ಮಾಡಲಿದೆ. ಆರ್ ಕೆ ಹೆಗಡೆ ನಗರ ಯೆಲಹಂಕ ನಾಗವಾರ ಕಡೆಗೆ ಜಿ10 ಬಸ್ಸುಗಳು, ಹೊಸಕೋಟೆ ಕಡೆಗೆ ಪ್ರಯಾಣಿಕರಿಗಾಗಿ 317-ಜಿ ಬಸ್, ಬನಶಂಕರಿ ಕಡೆಗೆ ಸಾಗಲಿರುವ ಬಸ್ ನಂಬರ್ 13 ಸೇರಿದಂತೆ ಹಲವು ಬಸ್ ವ್ಯವಸ್ಥೆ ಮಾಡಲಾಗಿದೆ

ಪಂದ್ಯ ಮುಗಿದ ಬಳಿಕ ಜನರು ಮನೆಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಬಿಎಂಟಿಸಿ ಎಲ್ಲಾ ತಯಾರಿ ಮಾಡಿದೆ. ಸಂಚಾರ ದಟ್ಟಣೆ ತಗ್ಗಿಸಲು ಟ್ರಾಫಿಕ್ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ

Source link
ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್