ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!



ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!
<p><strong>ವಾಷಿಂಗ್ಟನ್‌</strong>: ‘ಹೋರ್ಮುಜ್‌ ಜಲಸಂಧಿಯ ಮೇಲಿನ ನಿರ್ಬಂಧ ಮುಂದುವರೆದರೂ ನಾವು ಯುದ್ಧದಿಂದ ನಿರ್ಗಮಿಸುತ್ತೇವೆ’ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಮತ್ತೆ ರಾಗ ಬದಲಿಸಿದ್ದು, ಆ ಜಲಮಾರ್ಗವನ್ನು ಓಡಾಟಕ್ಕೆ ಮುಕ್ತಗೊಳಿಸಲು ವಿಧಿಸಿರುವ 10 ದಿನಗಳ ಗಡುವು ಇನ್ನು 48 ತಾಸುಗಳಲ್ಲಿ ಮುಗಿಯಲಿದೆ ಎಂದು ಇರಾನ್‌ಗೆ ನೆನಪಿಸಿದ್ದಾರೆ. ಅಷ್ಟರಲ್ಲಿ ಆ ಕೆಲಸ ಆಗದಿದ್ದರೆ ನರಕ ದರ್ಶನ ಮಾಡಿಸುವ ಬೆದರಿಕೆಯನ್ನೂ ಒಡ್ಡಿದ್ದಾರೆ.</p><p>ಮಾ.26ರಂದು ತಾವು ನೀಡಿದ್ದ 10 ದಿನಗಳ(ಏ.6ರ ತನಕ) ಡೆಡ್‌ಲೈನ್‌ ಅನ್ನು ನೆನಪಿಸಿ ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಇಲ್ಲವೇ ಹೋರ್ಮುಜ್‌ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ಇರಾನ್‌ಗೆ 10 ದಿನಗಳ ಅವಕಾಶ ನೀಡಿದ್ದೆ. ಸಮಯ ಓಡುತ್ತಿದ್ದು ಅದು ಮುಗಿದು ಇರಾನ್‌ನಲ್ಲಿ ನರಕ ಸೃಷ್ಟಿಯಾಗಲು ಕೇವಲ 48 ಗಂಟೆಗಳು ಉಳಿದಿವೆ’ ಎಂದು ಬರೆದಿದ್ದಾರೆ.</p><p>ಈ ಹಿಂದೆ ಟ್ರಂಪ್‌ ಗಡುವು ವಿಧಿಸಿದಾಗಲೇ, ಹೋರ್ಮಜ್‌ ಮೇಲಿನ ನಮ್ಮ ಹಕ್ಕನ್ನು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿತ್ತು. ಹೀಗಾಗಿ ಇದೀಗ ಟ್ರಂಪ್‌ ಎಚ್ಚರಿಕೆಗೆ ಇರಾನ್‌ ನೀಡುವ ಪ್ರತಿಕ್ರಿಯೆ ಮತ್ತು ಅದಕ್ಕೆ ಅಮೆರಿಕ ನೀಡಬಹುದಾದ ಉತ್ತರ ಭಾರೀ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.</p>



Source link

Leave a Reply

Your email address will not be published. Required fields are marked *