Headlines

ಕಾಂಗ್ರೆಸ್‌ದು ಗ್ಯಾರೆಂಟಿ ಮಾಡೆಲ್, ಬಿಜೆಪಿದು ಜೇಬಿಗೆ ಕತ್ತರಿ ಹಾಕೋ ಮಾಡೆಲ್, ಯಾವುದು ಬೇಕು? ಸುರ್ಜೇವಾಲಾ | Karnataka By Election Randeep Surjala Campaigns Hard Rav

ಕಾಂಗ್ರೆಸ್‌ದು ಗ್ಯಾರೆಂಟಿ ಮಾಡೆಲ್, ಬಿಜೆಪಿದು ಜೇಬಿಗೆ ಕತ್ತರಿ ಹಾಕೋ ಮಾಡೆಲ್, ಯಾವುದು ಬೇಕು? ಸುರ್ಜೇವಾಲಾ | Karnataka By Election Randeep Surjala Campaigns Hard Rav



ಕಾಂಗ್ರೆಸ್‌ದು ಗ್ಯಾರೆಂಟಿ ಮಾಡೆಲ್, ಬಿಜೆಪಿದು ಜೇಬಿಗೆ ಕತ್ತರಿ ಹಾಕೋ ಮಾಡೆಲ್, ಯಾವುದು ಬೇಕು? ಸುರ್ಜೇವಾಲಾ | Karnataka By Election Randeep Surjala Campaigns Hard Rav

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾಡೆಲ್ ಮತ್ತು ಜನರ ಜೇಬು ಕತ್ತರಿಸುವ ಮೋದಿ ಸರ್ಕಾರದ ಮಾಡೆಲ್ ಎಂಬ ಎರಡು ಮಾದರಿಗಳಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಬೆಲೆ ಏರಿಕೆಯಿಂದ ಬಸವಳಿದ ಜನರಿಗೆ ಗ್ಯಾರಂಟಿಗಳು ನೆರವಾಗಿವೆ ಎಂದರು.

ಕಾಂಗ್ರೆಸ್‌ ಪಕ್ಷದ್ದು ಗ್ಯಾರಂಟಿ ಮಾಡೆಲ್‌

– ಬಿಜೆಪಿಗೆ ಜೇಬಿಗೆ ಕತ್ತರಿ ಹಾಕೋ ಮಾಡೆಲ್‌

ದಾವಣಗೆರೆ (ಏ.5): ರಾಜ್ಯದಲ್ಲಿ ಎರಡು ಮಾದರಿಗಳಿವೆ. ಮೊದಲನೆಯದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಮಾಡೆಲ್. ಎರಡನೆಯದು ಮೋದಿ ಸರ್ಕಾರದಿಂದ ರಾಜ್ಯದ ಜನರ ಜೇಬು ಕತ್ತರಿಸುವ ಮಾಡೆಲ್‌. ನಿಮಗೆ ಯಾವ ಮಾಡೆಲ್ ಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಗ್ಯಾರಂಟಿ ಫಲಾನುಭವಿಗಳ ಜೊತೆಗೆ ಸಂವಾದ ನಡೆಸಿದ ಬಳಿಕ, ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜನರ ಜೇಬಿಗೆ ಹಾಕುತ್ತಿರುವ ಕತ್ತರಿಯಿಂದ ಬಚಾವಾಗಲು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನಮ್ಮ ಗ್ಯಾರಂಟಿಗಳನ್ನು ಟೀಕಿಸಿ, ಅನಗತ್ಯ ಅಪಪ್ರಚಾರ ಮಾಡುತ್ತಿರುವ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತದಾರರು ಮತ ಹಾಕಬಾರದು. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ಇಲ್ಲಿ ಫಲಾನುಭವಿಗಳು ಮನವಿ ಮಾಡುತ್ತಿರುವುದು ಗ್ಯಾರಂಟಿಗಳು ಎಷ್ಟು ಆಸರೆಯಾಗಿವೆ ಎಂಬುದಕ್ಕೆ ಸಾಕ್ಷಿ. ಗ್ಯಾರಂಟಿಗಳು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬೆಲೆ ಏರಿಕೆಯಿಂದ ಬಸವಳಿಯುತ್ತಿರುವ ಜನತೆಗೆ ಗ್ಯಾರಂಟಿಗಳು ನೆರವಾಗಿವೆ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ 1.36 ಲಕ್ಷ ಕೋಟಿ ವೆಚ್ಚ ಮಾಡಿ, ಜನರ ಆರ್ಥಿಕ ಹೊರೆ ಕಡಿಮೆ ಮಾಡಿದೆ ಎಂದರು.

ಬೆಲೆ ಏರಿಕೆಯಿಂದ ಬಚಾವಾಗುವ ಮಾರ್ಗವೇ ಗ್ಯಾರಂಟಿ. ಪಂಚ ಗ್ಯಾರಂಟಿಗಾಗಿ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ 50 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೆ, ಇದನ್ನು ಬಂದ್ ಮಾಡಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸ ಮತದಾರರ ಮೇಲಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸಮರ್ಥ ಒಬ್ಬ ಸಮರ್ಥ ಅಭ್ಯರ್ಥಿ. ಯುವಕರಿಗೆ ಆತ ಸ್ಫೂರ್ತಿ. ಕಾಂಗ್ರೆಸ್ ಅಭ್ಯರ್ಥಿಯನ್ನು ಇಲ್ಲಿ ಗೆಲ್ಲಿಸಿ, ಪಕ್ಷದ ಬಲ ಹೆಚ್ಚಿಸಿ ಎಂದು ಸುರ್ಜೀವಾಲಾ ಕರೆ ನೀಡಿದರು.



Source link

Leave a Reply

Your email address will not be published. Required fields are marked *