ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್ | Karkala S 12 Year Old Samarth Performed A Bhoot Kola Mrq

ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್ | Karkala S 12 Year Old Samarth Performed A Bhoot Kola Mrq



ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್ | Karkala S 12 Year Old Samarth Performed A Bhoot Kola Mrq

ಕಾರ್ಕಳದ 12 ವರ್ಷದ ಬಾಲಕ ಸಮರ್ಥ್, ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಕಳ: ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್‌, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್‌ ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ.

ಮೂರು ತಲೆಮಾರುಗಳಿಂದ ಮುಂದುವರಿದ ಪರಂಪರೆಯ ಭಾಗವಾಗಿ, ಅಜ್ಜ ಮೋನು ಪಾಣರ ಮತ್ತು ತಂದೆ ಹರೀಶ ಅವರ ಹಾದಿಯಲ್ಲಿ ಸಮರ್ಥ್‌ ಕೂಡ ನಡೆದು ದೈವರಾಧನೆಗೆ ತನ್ನ ಕೊಡುಗೆ ನೀಡಿದ್ದಾನೆ.

ಸ್ಥಳೀಯರಲ್ಲಿ ಸಂತಸ

ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ‌ ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ

ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೈವ ವೇಷ ಹಾಕಿ ಅತಿರೇಕ ವರ್ತನೆ: ದೂರು ದಾಖಲು

ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮದುಮಗ ಮತ್ತು ಆತನ ಬೆಂಬಲಿಗರು ದೈವಕ್ಕೆ ಅವಮಾನ ಮಾಡಿದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಗ್ರಾಮದ ಯುವಕರು ಎರಡು ದಿನಗಳ ಹಿಂದೆ ಮದುಮಗನೊಬ್ಬನಿಗೆ ದೈವದ ವೇಷ ತೊಡಿಸಿ ಉಳಿದವರು ದೇವರನ್ನು ಹೀಯಾಳಿಸಿ ಮೆರವಣಿಗೆ ನಡೆಸಿರುವ ಫೋಟೋ ವೈರಲ್‌ ಆಗಿದೆ. 

ಇದನ್ನೂ ಓದಿ: ವೈರಲ್ ಆಯ್ತು ಗ್ಲೋಬಲ್ ಸ್ಟಾರ್ ಅಧ್ಯಾತ್ಮಿಕ ಪಯಣ; ಸುವರ್ಣ ಮಂದಿರದಲ್ಲಿ ‘ಸೇವೆ’ ಮಾಡ್ತಿರೋ ಪ್ರಿಯಾಂಕಾ ಚೋಪ್ರಾ!

ಈ ಹಿನ್ನೆಲೆಯಲ್ಲಿ ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿ, ಧರ್ಮವನ್ನು ಅಪಹಾಸ್ಯ ಮಾಡಿರುವುದರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆ ಪ್ರಮುಖರು ದೂರು ದಾಖಲಿಸಿದ್ದಾರೆ. ಎಮ್ಮೆಮಾಡು ಗ್ರಾಮದ ಯುವಕರಾದ ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಪೈಸಲ್ ,ಶಕೀರ್ ಹಾಗೂ ಬಶೀರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ಉಡುಪಿಯ ಅಳಿಯ ಸೂರ್ಯಕುಮಾರ್ ಯಾದವ್‌ ಬಾಳಲ್ಲಿ ಕಾಪು ಮಾರಿಯಮ್ಮನ ಪವಾಡ!



Source link

Leave a Reply

Your email address will not be published. Required fields are marked *