
ಬೆಂಗಳೂರು, ಏಪ್ರಿಲ್ 05: ಮಹಿಳಾ ಕಸ್ಟಮ್ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮತ್ತು ಅತ್ಯಾಚಾರ ಆರೋಪ ಸಂಬಂಧ ಎಂ.ಕೃಪಲಾನಿ ಎಂಬಾತನನ್ನು ಬೆಂಗಳೂರು ಬಂಧಿಸಿದ್ದಾರೆ. ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ ದೌರ್ಜನ್ಯ ಎಸಗಿದ್ದಲ್ಲದೆ ಕೇಳದಿದ್ದರೆ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡಿರುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಕೃಪಲಾನಿ ಕಿರುಕುಳಕ್ಕೆ ಬೇಸತ್ತು ಕೊನೆಗೂ ಈ ಬಗ್ಗೆ ಮಹಿಳಾ ಅಧಿಕಾರಿ ದೂರು ನೀಡಿದ್ದು, ಯಲಹಂಕ ಠಾಣೆಯಲ್ಲಿ ಈತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಬಳಿಕ ಇಂದಿರಾನಗರ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆಗೊಂಡಿತ್ತು. ಈ ಬಗ್ಗೆ ತನಿಖೆಗೆ ಪುಲಕೇಶಿನಗರ ಎಸ್ಸಿಪಿ ಹಾಗೂ ಪಿಐಗೆ ಅಧಿಕಾರಿಗಳು ಸೂಚಿಸಿದ್ದರು. ಆ ಹಿನ್ನೆಲೆ ಆರೋಪಿ ಕೃಪಲಾನಿಯನ್ನು ಪೊಲೀಸರು ತಂಡವೀಗ ಬಂಧಿಸಿದ್ದಾರೆ.
ಅತ್ಯಾಚಾರ ಆರೋಪಿಗಳ ಮೇಲೆ ಹಲವು ಗಂಭೀರ ಆರೋಪಗಳನ್ನು ಮಹಿಳಾ ಅಧಿಕಾರಿ ಮಾಡಿದ್ದು, ದಬ್ಯುಸಿನೆಸ್ ನಡೆಸುತ್ತಿದ್ದ ಕೃಪಲಾನಿ ಕಸ್ಟಮ್ ಕಣ್ತಪ್ಪಿಸಿ ಸಾಕಷ್ಟು ವ್ಯವಹಾರ ನಡೆಸುತ್ತಿದ್ದ ಆರೋಪ ಕೇಳಿಬಂದಿದೆ. ಈತನಿಗೆ 9 ವರ್ಷದ ಹಿಂದೆ ಮಹಿಳಾ ಕಸ್ಟಮ್ ಅಧಿಕಾರಿ ಪರಿಚಯವಾಗಿದ್ದು, ಆಕೆಯ ಜೊತೆಗೆ ಪ್ರೀತಿ ನಾಟಕವಾಡಿ ಸಲುಗೆ ಬೆಳೆಸಿದ್ದಾರೆ. ಜೊತೆಗೆ ಮದುವೆ ಆಮೀಷವೊಡ್ಡಿ ಕೆಲಸದ ಕೆಲ ಲೂಪ್ ಹೋಲ್ ತಿಳಿದಿದ್ದ. ಆಕೆ ಕೆಲ ಕಸ್ಟಮ್ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣ ಕೂಡ ಪಡೆದಿದ್ದ ಆರೋಪ.
ಇದನ್ನೂ ಓದಿ: ಪೊಲೀಸ್ ಕ್ವಾಟ್ರಸ್ ಜಾಗಕ್ಕೆ ಸ್ಕೆಚ್ ಹಾಕಿದ್ದ ಭೂಗಳ್ಳರು ಅಂದರ್; ಮೂವರು ಬಂಧನ
ಈ ಹಿಂದೆ ತನ್ನ ಮಗ ನಾಪತ್ತೆಯಾಗಿದ್ದಾನೆಂದು ಕೃಪಲಾನಿ ತಾಯಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಆದರೆ ಕೃಪಲಾನಿ ಉದ್ದೇಶ ಪೂರ್ವಕವಾಗಿ ಹೋಟೆಲ್ ನಲ್ಲಿ ಅಡಗಿರೋದು ಈ ವೇಳೆ ಪತ್ತೆ ಆಗುತ್ತಿದೆ. ಹೀಗಾಗಿ ಈ ವೇಳೆ ಕೃಪಲಾನಿಗೆ ಕೋರ್ಟ್ ಎರಡು ಲಕ್ಷ ರೂ. ದಂಡ ಕೂಡ ವಿಧಿಸಿತ್ತು. ಇಷ್ಟು ಸಾಲದ್ದಕ್ಕೆ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳ ಅಸಭ್ಯ ವರ್ತನೆ ಆರೋಪವೂ ಈತನಮೇಲಿದೆ. ಕೃಪಾನಿ ಜಾಲಕ್ಕೆ ಸಿಲುಕಿ ಹಲವು ಕಮ್ಸ್ ಅಧಿಕಾರಿಗಳು ನರಳಿದ್ದಾರೆ ಎನ್ನಲಾಗಿದ್ದು, ಆ ಕಾರಣದಿಂದ ಈ ಅನ್ಯಾಯವಾಗಿದ್ರೆ ದೂರು ನೀಡುವಂತೆ ಸೂಚನೆ ನೀಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.