Headlines

ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ ಪೈಲಟ್‌ ಏನು ಮಾಡ್ತಾರೆ? ಇಲ್ಲಿದೆ ಅಚ್ಚರಿ ಮಾಹಿತಿ | What Does A Pilot Do When A Plane Crashes In An Enemy Country Here S Some Surprising Information Mrq

ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ ಪೈಲಟ್‌ ಏನು ಮಾಡ್ತಾರೆ? ಇಲ್ಲಿದೆ ಅಚ್ಚರಿ ಮಾಹಿತಿ | What Does A Pilot Do When A Plane Crashes In An Enemy Country Here S Some Surprising Information Mrq



ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ ಪೈಲಟ್‌ ಏನು ಮಾಡ್ತಾರೆ? ಇಲ್ಲಿದೆ ಅಚ್ಚರಿ ಮಾಹಿತಿ | What Does A Pilot Do When A Plane Crashes In An Enemy Country Here S Some Surprising Information Mrq

ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ, ಪೈಲಟ್‌ಗಳು ತಮ್ಮನ್ನು ರಕ್ಷಿಸಿಕೊಳ್ಳಲು ಕಠಿಣ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ತಮ್ಮ ಗುರುತನ್ನು ನಾಶಪಡಿಸಿ, ಸುರಕ್ಷಿತ ಸ್ಥಳವನ್ನು ಹುಡುಕಿ, ರಹಸ್ಯ ಸಾಧನಗಳ ಮೂಲಕ ತಮ್ಮ ಸೇನೆಯನ್ನು ಸಂಪರ್ಕಿಸಲು ಯತ್ನಿಸುತ್ತಾರೆ. 

ಆರೋಗ್ಯ, ಗೌಪ್ಯತೆ, ರಕ್ಷಣೆ ಮೊದಲ ಆದ್ಯತೆ

ವಿಮಾನವು ಶತ್ರುರಾಷ್ಟ್ರದ ಆಗಸದಲ್ಲಿ ಹಾರುತ್ತುದ್ದ ವೇಳೆ ದಾಳಿಗೆ ತುತ್ತಾಗಿ ಪತನವಾದರೆ, ಆ ರಾಷ್ಟ್ರದ ಜನ ಅಥವಾ ಸೈನಿಕರ ಕೈಗೆ ಸೆರೆಸಿಗದೆ ತಪ್ಪಿಸಿಕೊಳ್ಳದೆ ಪಾರಾಗುವುದೇ ಬಹುದೊಡ್ಡ ಸವಾಲು. ಅವರು ಹೀಗೆಯೇ ನಡೆದುಕೊಳ್ಳಬೇಕು ಎಂದು ಪ್ರತಿ ದೇಶದ ಸೇನೆಯೂ ಶಿಷ್ಟಾಚಾರಗಳನ್ನು ರೂಪಿಸುತ್ತಿರುತ್ತದೆ. ಇಂತಹ ಶಿಷ್ಟಾಚಾರ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.

ಪತನವಾಗುತ್ತಿರುವ ವಿಮಾನದಿಂದ ಪ್ಯಾರಾಚೂಟ್‌ ಮೂಲಕ ಪೈಲಟ್‌ಗಳು ಹೊರಬರುವರಾದರೂ, ಹೋಗಿ ಬೀಳುವ ಜಾಗ ಎಂಥದ್ದೆಂದು ತಿಳಿದಿರುವುದಿಲ್ಲ. ಹಾಗಾಗಿ ನೆಲ ಮುಟ್ಟುತ್ತಿದ್ದಂತೆ ತಮ್ಮ ದೈಹಿಕ ಸ್ಥಿತಿಯನ್ನು ಪರಿಶೀಲಿಸಿಕೊಂಡು, ಕದಲಲು, ನಡೆಯಲು ಸಮರ್ಥನಾಗಿರುವೆನೇ ಎಂದು ನೋಡಿಕೊಳ್ಳುತ್ತಾರೆ. ಗಾಯಗಳಾಗಿದ್ದರೆ ಪ್ರಥಮ ಚಿಕಿತ್ಸೆ ಕೊಟ್ಟುಕೊಳ್ಳುತ್ತಾರೆ.

ಬಳಿಕ ತಾವಿರುವ ಪ್ರದೇಶ ಯಾವುದೆಂದು ನೋಡುತ್ತಾರೆ. ಎದುರಾಳಿಗಳ ಗಡಿಯೊಳಗಿದ್ದರೆ, ಯಾರ ಕಣ್ಣಿಗೂ ಬೀಳದೆ ಹೇಗಿರುವುದು ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾರೆ. ಜತೆಗೆ ತಮ್ಮ ದೇಶ/ ಸೇನೆ/ಮಿತ್ರ ದೇಶಗಳ ಜೊತೆ ರಹಸ್ಯ ಸಾಧನಗಳ ಮೂಲಕ ಸಂಪರ್ಕ ಸಾಧಿಸಲು ಯತ್ನಿಸುತ್ತಾರೆ.

ಇದೇ ವೇಳೆ ತಮ್ಮ ಗುರುತನ್ನು ಬಯಲುಮಾಡುವ ಎಲ್ಲಾ ಕಡತಗಳನ್ನು ನಾಸಪಡಿಸುತ್ತಾರೆ.

ಒಂದೊಮ್ಮೆ ನಗರಪ್ರದೇಶದಲ್ಲಿದ್ದರೆ ಮನೆಯ ಮಹಡಿಗಳಂತಹ ಎತ್ತರದ ಪ್ರದೇಶ ಸೇರಿಕೊಳ್ಳುತ್ತಾರೆ. ಹಳ್ಳಿಯಾದರೆ ಹೊಲ-ಗದ್ದೆಗಳಲ್ಲಿ ಅವಿತು ಕೂರುತ್ತಾರೆ. ಇಂತಹ ಪ್ರದೇಶಗಳಿಂದ ಅವರ ರಕ್ಷಣೆಯು ಸುಲಭವಾಗುತ್ತದೆ. ಇಂತಹ ಜಾಗಗಳನ್ನು ತಲುಪಲು ಜನಸಂಚಾರವಿರುವ ರಸ್ತೆಗಳನ್ನು ಬಳಸದೆ ಕಾಡುಮೇಡುಗಳ ಹಾದಿಯನ್ನು ನೆಚ್ಚಿಕೊಳ್ಳುತ್ತಾರೆ.

ಸಂಪರ್ಕ ಸಾಧಿಸಲು ಪ್ರಯತ್ನ

ಪೈಲಟ್‌ ಸೀಟ್‌ನ ಅಡಿ ಇರುವ ಕಿಟ್‌ನಲ್ಲಿ ಅಲ್ಪಾವಧಿಗೆ ಬೇಕಾಗುವಂತಹ ನೀರು, ಆಹಾರ, ಔಷಧಿ ಇತ್ಯಾದಿಗಳು ಇರುತ್ತವೆ. ಅವರು ಧರಿಸುವ ಜ್ಯಾಕೆಟ್‌ನಲ್ಲಿ ಸಂಪರ್ಕ ಸಾಧನ, ಕಂಪಾಸ್‌, ಪಿಸ್ತೂಲ್‌ ಇರುತ್ತದೆ.

ಇದನ್ನೂ ಓದಿ: ಯಾರ ಕಣ್ಣಿಗೂ ಕಾಣದ ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನ ಇರಾನ್‌ಗೆ ಕಂಡಿದ್ದೇಗೆ?

ರೇಡಿಯೋ ಮೂಲಕ, ತಮ್ಮನ್ನು ರಕ್ಷಿಸಲು ಬರುತ್ತಿರುವವರ ಜತೆ ಸಂಪರ್ಕದಲ್ಲಿರುವ ಪೈಲಟ್‌ಗಳು, ಆ ಹೆಲಿಕಾಪ್ಟರು ಬರುತ್ತಿದ್ದಂತೆ ತಾವಿರುವ ತಾವನ್ನು ತಿಳಿಸಲು ಕಿಟ್‌ನಲ್ಲಲಿರುವ ಬೀಕನ್‌, ಸಿಳ್ಳೆ ಅಥವಾ ಹೊಗೆ ಬರುವ ಸಾಧನಗಳನ್ನು ಬಳಸುತ್ತಾರೆ.

ಒಂದೊಮ್ಮೆ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೆನಿಸಿದರೆ ತಮ್ಮಲ್ಲಿರುವ ಕೋಡ್, ಮ್ಯಾಪ್‌, ನೋಟ್ಸ್‌ ಇತ್ಯಾದಿಗಳನ್ನು ನಾಶ ಮಾಡುತ್ತಾರೆ. ವೈರಗಳೆದುರು ತಮ್ಮ ಸೇನೆ, ದೇಶದ ಬಗ್ಗೆ ಏನನ್ನೂ ಬಾಯಿಬಿಡುವುದಿಲ್ಲ. ಯಶಸ್ವಿಯಾಗುವ ಭರವಸೆಯಿದ್ದರೆ ಮಾತ್ರವೇ ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ.

ಇದನ್ನೂ ಓದಿ: ಯುದ್ಧದ ನಡುವೆಯೇ ಟ್ರಂಪ್ ಪುತ್ರರ ಬಿಗ್ ಪ್ಲಾನ್: ಗಲ್ಫ್ ರಾಷ್ಟ್ರಗಳಿಗೆ ಡ್ರೋನ್ ಮಾರಲು ಮುಂದಾದ ಜೂನಿಯರ್ ಟ್ರಂಪ್!

Scroll to load tweet…



Source link

Leave a Reply

Your email address will not be published. Required fields are marked *