
ವಾಸ್ತವವಾಗಿ ದೇಶಗಳು ಅಗತ್ಯವಿರುವ ಸರಕುಗಳನ್ನು ಆಮದು ಮತ್ತು ರಫ್ತು ಮಾಡಿಕೊಳ್ಳಲು ಸಮುದ್ರಯಾನವನ್ನೇ ಅವಲಂಬಿಸಿದೆ. ಸಮುದ್ರಯಾನವು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಚೀನ ಕಾಲದಿಂದಲೂ, ನಮ್ಮ ದಕ್ಷಿಣದ ರಾಜ್ಯಗಳು, ಪೂರ್ವ ಏಷ್ಯಾ ಮತ್ತು ಆಫ್ರಿಕಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಈ ಎಲ್ಲಾ ಕಾರಣಕ್ಕಾಗಿ ಭಾರತ ಆರ್ಥಿಕತೆಗೆ ಸಮುದ್ರಯಾನದ ಕೊಡುಗೆ ಅಗಾಧವಾದದ್ದು. ಹೀಗಾಗಿ ದೇಶದ ಆರ್ಥಿಕತೆಗೆ ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ತಿಳಿಸುವ ಈ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ರಾಷ್ಟ್ರೀಯ ಕಡಲ ದಿನ. ಪ್ರತಿ ವರ್ಷ ಏಪ್ರಿಲ್ 5 ರಂದು ರಾಷ್ಟ್ರೀಯ ಕಡಲ ದಿನವನ್ನು (ರಾಷ್ಟ್ರೀಯ ಕಡಲ ದಿನ) ಆಚರಿಸದಿದ್ದರೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ತಿಳಿದುಕೊಳ್ಳಿ.
ರಾಷ್ಟ್ರೀಯ ಕಡಲ ದಿನದ ಇತಿಹಾಸವೇನು?
ಭಾರತೀಯ ಉದ್ಯಮಿಗಳ ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಲಿ ಈ ಹಡಗು ಕಂಪನಿಯ ಮೊದಲ ಹಡಗು ಎಸ್ಎಸ್ ಲಾಯಲ್ಟಿ ಬಾಂಬೆಯಿಂದ (ಮುಂಬೈ) ಯುನೈಟೆಡ್ ಕಿಂಗ್ಡಮ್ ಈ ಸವಿನೆನಪಿಗೆ ರಾಷ್ಟ್ರೀಯ ಕಡಲ ದಿನವನ್ನು 1964ರಿಂದ ಆಚರಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಏಪ್ರಿಲ್ 5 ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಏಪ್ರಿಲ್ ಫೂಲ್ ಆಚರಣೆ ಆರಂಭವಾದದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ
ರಾಷ್ಟ್ರೀಯ ಕಡಲ ದಿನದ ಮಹತ್ವವೇನು?
ಸಮುದ್ರಯಾನವು ಸರಕುಗಳನ್ನು ಸಾಗಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು. ಅಂತಾರಾಷ್ಟ್ರೀಯ ದೇಶದ ಆರ್ಥಿಕತೆಗೆ ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. ಭಾರತೀಯ ಕಡಲ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ವರುಣ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿ. ಹಾಗೂ ಈ ವಿಶೇಷ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ