
ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಮೀರ್ ರಿಜ್ವಿ 90 ರನ್ ಸಿಡಿಸಿ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈಬಿಡಲಾಗಿದ್ದ ರಿಜ್ವಿಯ ಈ ಪ್ರದರ್ಶನದಿಂದ, ಸಿಎಸ್‌ಕೆ ಫ್ರಾಂಚೈಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಜ್ವಿ ಇದೀಗ ಆರೆಂಜ್ ಕ್ಯಾಪ್ ಕೂಡ ಪಡೆದಿದ್ದಾರೆ.
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರ ಸಮೀರ್ ರಿಜ್ವಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಹೀರೋ ಆಗಿದ್ದು 90 ರನ್ ಸಿಡಿಸಿದ ಸಮೀರ್ ರಿಜ್ವಿ.
ಮುಂಬೈ ನೀಡಿದ್ದ 163 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೆ.ಎಲ್. ರಾಹುಲ್ ಮತ್ತು ನಿತೀಶ್ ರಾಣಾ ಬೇಗನೇ ಔಟಾದರು. ಕೇವಲ 7 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ರಿಜ್ವಿ ಮತ್ತು ಪಥುಮ್ ನಿಸ್ಸಾಂಕ (44) ಆಸರೆಯಾದರು. ಇವರಿಬ್ಬರು ಸೇರಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.
ಚೆನ್ನೈ ಫ್ರಾಂಚೈಸಿ ಮೇಲೆ ತಿರುಗಿ ಬಿದ್ದ ಫ್ಯಾನ್ಸ್
ನಂತರ, ಡೇವಿಡ್ ಮಿಲ್ಲರ್ ಜೊತೆಗೂಡಿದ ರಿಜ್ವಿ, ಡೆಲ್ಲಿಯನ್ನು ಗೆಲುವಿನ ದಡ ಸೇರಿಸಿದರು. ಏಪ್ರಿಲ್ 1 ರಂದು ಲಖನೌ ವಿರುದ್ಧ 70 ರನ್ ಗಳಿಸಿದ್ದ ರಿಜ್ವಿ, ಈಗ ಮತ್ತೊಂದು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಸಮೀರ್ ರಿಜ್ವಿಯ ಈ ಸ್ಫೋಟಕ ಆಟದ ನಂತರ, ಅಭಿಮಾನಿಗಳು ಅವರ ಹಳೆಯ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ತಿರುಗಿಬಿದ್ದಿದ್ದಾರೆ. 2024ರಲ್ಲಿ 8.4 ಕೋಟಿ ರೂಪಾಯಿಗೆ ಖರೀದಿಸಿದ್ದ ರಿಜ್ವಿಯನ್ನು, CSK ಕೇವಲ ಐದು ಇನ್ನಿಂಗ್ಸ್‌ಗಳ ನಂತರ ತಂಡದಿಂದ ಕೈಬಿಟ್ಟಿತ್ತು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೇಲೆ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
Scroll to load tweet…
ಸಮೀರ್ ರಿಜ್ವಿಯನ್ನು ಕೈಬಿಟ್ಟು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ದೊಡ್ಡ ತಪ್ಪು ಮಾಡಿತು ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
Scroll to load tweet…
ಆದರೆ, ಕಳೆದ ಸೀಸನ್‌ನಲ್ಲಿ ಡೆಲ್ಲಿ ತಂಡ ಈ 22 ವರ್ಷದ ಆಟಗಾರನನ್ನು ಕೇವಲ 95 ಲಕ್ಷ ರೂಪಾಯಿಗೆ ಖರೀದಿಸಿತ್ತು. ಇದೀಗ ರಿಜ್ವಿ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ ‘ಆರೆಂಜ್ ಕ್ಯಾಪ್’ ಕೂಡ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
Scroll to load tweet…
ಮತ್ತೆ ಡೆಲ್ಲಿಯನ್ನು ಗೆಲ್ಲಿಸಿದ ರಿಜ್ವಿ
ನವದೆಹಲಿ: ಯುವ ಬ್ಯಾಟರ್ ಸಮೀರ್ ರಿಜ್ವಿ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಪತ್ಬಾಂಧವರಾಗಿ ಮೂಡಿಬಂದಿದ್ದು, ತಮ್ಮ ತಂಡವನ್ನು ಈ ಐಪಿಎಲ್‌ನಲ್ಲಿ 2ನೇ ಬಾರಿ ಗೆಲ್ಲಿಸಿದ್ದಾರೆ. ಶನಿವಾರ ಮುಂಬೈ ವಿರುದ್ಧ ಡೆಲ್ಲಿ 6 ವಿಕೆಟ್‌ನಿಂದ ಗೆದ್ದಿತು. ಮುಂಬೈಗಿದು ಮೊದಲು ಸೋಲು.
ಮುಂಬೈ 6 ವಿಕೆಟ್ ನಷ್ಟದಲ್ಲಿ 162 ರನ್ ಕಲೆಹಾಕಿತು. ರೋಹಿತ್ ಶರ್ಮಾ 35, ನಾಯಕ ಸೂರ್ಯಕುಮಾರ್ ಯಾದವ್ 51, ನಮನ್ ಧೀರ್ 28 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಆರಂಭಿಕ ಆಘಾತಕ್ಕೆ ತುತ್ತಾಯಿತು. ಕೆ.ಎಲ್.ರಾಹುಲ್(1), ನಿತೀಶ್ ರಾಣಾ(0) ಮತ್ತೆ ವಿಫಲರಾದರು. ಬಳಿಕ ಪಥುಮ್ ನಿಸ್ಸಾಂಕ ಜೊತೆಗೂಡಿದ ರಿಜ್ವಿ ತಂಡವನ್ನು ಮೇಲೆತ್ತಿದರು. ಆರಂಭದಲ್ಲಿ ನಿಧಾನವಾಗಿ ಆಡಿದರೂ, ನಿಸ್ಸಾಂಕ(44) ಔಟ್ ಆದ ಬಳಿಕ ಅಬ್ಬರಿಸಿದ ರಿಜ್ವಿ 51 ಎಸೆತಕ್ಕೆ 7 ಬೌಂಡರಿ, 7 ಸಿಕ್ಸರ್‌ನೊಂದಿಗೆ 90 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಮುಂಬೈ 20 ಓವರ್‌ಗಳಲ್ಲಿ 162/6 (ಸೂರ್ಯ 51, ರೋಹಿತ್ 35, ಮುಕೇಶ್ 2-26), ಡೆಲ್ಲಿ 18.1 ಓವರ್‌ಗಳಲ್ಲಿ 164/4 (ಸಮೀರ್ 90, ನಿಸ್ಸಾಂಕ 44, ದೀಪಕ್ 1-20)
ಪಂದ್ಯಶ್ರೇಷ್ಠ: ಸಮೀರ್ ರಿಜ್ವಿ